Power bill increase: ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೊಟ್ರು ಹೈ ವೋಲ್ಟೇಜ್ ಶಾಕ್ !

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿದ್ಯುತ್ ದರ ಏರಿಕೆ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ದರ ಕಡಿಮೆ ಆಗೋದಿಲ್ಲ. 2 ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಹೀಗಾಗಿ ದರ ಜಾಸ್ತಿಯಾಗಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಉಚಿತ ವಿದ್ಯುತ್ ನೀಡಲು ಹೊರಟ ಸರ್ಕಾರ ಈಗ ಜನರಿಗೆ ಹೆಚ್ಚೇ ವಿದ್ಯುತ್ ಬರೆ ಹಾಕುತ್ತಿದೆ.

ಈ ವೇಳೆ ವಿದ್ಯುತ್ ದರ ಏರಿಕೆ ಖಂಡಿಸಿ ಎಫ್ ಕೆ ಸಿಸಿಐ ಪ್ರತಿಭಟನೆ ವಿಚಾರವಾಗಿ ಮಾತನಾಡಿದಂತಹಾ ಸಿದ್ದರಾಮಯ್ಯನವರು, ಎಫ್ ಕೆ ಸಿಸಿಐ ಜೊತೆಗೆ ಮಾತನಾಡಿ, ಚರ್ಚಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಸಂಬಂಧ ಅಕ್ಕಿ ಹೊಂದಾಣಿಕೆಯಲ್ಲಿ ನಮ್ಮ ಸರ್ಕಾರ ಈಗ ತೊಡಗಿದೆ. ರಾಯಚೂರಿನಲ್ಲಿ ಸೋನಾ ಮಸೂರಿ ಅಕ್ಕಿ ಇದೆ. ಪ್ರತಿ ಕೆಜಿಗೆ 55 ರೂಪಾಯಿ, ಎಫ್ ಸಿಐ ಪ್ರತಿ ಕೆಜಿಗೆ ರೂಪಾಯಿ 36.60 ದರ ನಿಗದಿ ಮಾಡಿ ಕೊಡಲು ಹೇಳಿತ್ತು. ನಾವೇನು ಸೋನಾ ಮಸೂರಿ ಅಕ್ಕಿಯನ್ನು ಕೊಡಲಾಗುತ್ತಾ ಎಂದು ಸಿದ್ದರಾಮಯ್ಯನವರು ಹೇಳಿದರು. ಅಕ್ಕಿ ತರಲು ಕಾಂಗ್ರೆಸ ತಿನುಕಾಟ ನಡೆಸುತ್ತಿರುವುದು ಮಾತ್ರ ಎದ್ದು ಕಾಣುತ್ತಿದೆ.

Leave A Reply

Your email address will not be published.