Reincarnation memory: ಮತ್ತೆ ಪುನರ್ಜನ್ಮದ ನೆನಪು ಮರುಕಳಿಸಿದ ಘಟನೆ, ಅಜ್ಜಿಯನ್ನೇ ತನ್ನ ಪತ್ನಿ ಎಂದ ಬಾಲಕ !

ಮನೆಯಲ್ಲಿ ಯಾರಾದರೂ ತುಂಬಾ ಹತ್ತಿರವಾದ ಯಾರಾದರೂ ಅಗಲಿದರೆ, ನಾವು ನಮ್ಮ ಮುಂದಕ್ಕೆ ಹುಟ್ಟಲಿರುವ ಮಕ್ಕಳಲ್ಲಿ ಕಾಣಲು ಇಚ್ಚಿಸುತ್ತೇವೆ. ಎಷ್ಟೋ ಜನ ತಮ್ಮಮಕ್ಕಳಲ್ಲಿ ತಾವು ಅಗಲಿದ ಪೋಷಕರನ್ನು ಕಾಣುತ್ತಾರೆ. ಆದರೆ ಒಂದೊಮ್ಮೆ ನಿಜವಾಗಿಯೂ ನಮ್ಮಮಕ್ಕಳು ಅಗಲಿ ಹೋದ ವ್ಯಕ್ತಿಗಳಂತೆ ವರ್ತಿಸಲು ಆರಂಭಿಸಿದರೆ…? ಹೌದು ಇಂತದ್ದೇ ಎದೆ ಝಲ್ ಎನ್ನಿಸುವ ನಿಜವಾದ ಘಟನೆಯೊಂದು ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಬೆಳಕಿಗೆ ಬಂದಿದೆ.

ಮೊನ್ನೆ ಜೂನ್ 15 ರಂದು, 8 ವರ್ಷದ ಬಾಲಕ ತನ್ನ ಅಜ್ಜಿಯ ಮನೆಗೆ ಬಂದಿದ್ದಾನೆ. ಆಗ ತನ್ನ ಅಜ್ಜಿಯನ್ನು ತನ್ನ ಹೆಂಡತಿ ಎಂದೂ, ತನ್ನ ಅಮ್ಮನನ್ನು ತನ್ನ ಮಗಳೆಂದೂ ಕರೆಯಲು ಶುರುಮಾಡಿದ್ದಾರೆ. ಮನೆಯ ಎಲ್ಲರೂ ಬೆರಗಾಗುವ ಹಾಗೆ ಮಾತನಾಡತೊಡಗಿದ್ದಾನೆ. ಆ ಹುಡುಗ ತನ್ನನ್ನು ಆರ್ಯನ್‌ನಿಂದ ಮನೋಜ್ ಮಿಶ್ರಾ ಎಂದು ಕರೆಯಲು ಪ್ರಾರಂಭಿಸಿದ್ದು ಮನೆಯವರಿಗೆ ಆತಂಕ ಶುರುವಾಗಿದೆ. ಮಾತ್ರವಲ್ಲದೆ, ತಾನು ಈವರೆಗೆ ನೋಡಿರದ ಮಾತಾಡಿರದ ಗ್ರಾಮದ ಎಲ್ಲಾ ಸದಸ್ಯರನ್ನು ಗುರುತಿಸುವ ಮೂಲಕ ಮನೆಯವರಲ್ಲಿ ಬೆರಗಿನ ಜತೆಗೆ ಭಯ ಹುಟ್ಟಿಸಿದ್ದಾನೆ. ನಂತರ ಮನೆಯವರು ಆತನನ್ನು ಪ್ರಶ್ನಿಸುತ್ತಾ ಹೋದಂತೆ ಆತ ಒಂದೊಂದಾಗಿ ವಿಷ್ಯ ಹೇಳುತ್ತಾ ಹೋಗಿದ್ದು, ಅಲ್ಲಿ ಪುನರ್ಜನ್ಮದ ಕಥೆ ತೆರೆದುಕೊಂಡಿದೆ.

ಮನೋಜ್ ಮಿಶ್ರಾ ಉತ್ತರ ಪ್ರದೇಶದ ರತನ್‌ಪುರದ ನಿವಾಸಿ. ಕೃಷಿಕರಾಗಿದ್ದ ಅವರು 2015 ರಲ್ಲಿ ಅದೊಂದು ಸಂಜೆ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದರು. ಅಲ್ಲಿ ನೀರು ಹಾಕುತ್ತಿದ್ದಾಗ ಆಕಸ್ಮಿಕವಾಗಿ ಅವರಿಗೆ ಹಾವು ಕಚ್ಚಿದೆ. ವೈದ್ಯರು ಸಾಕಷ್ಟು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಅಪ್ಪ ಸತ್ತ ಸಂದರ್ಭದಲ್ಲಿ ಅವರ ಮಗಳು ಗರ್ಭಿಣಿಯಾಗಿದ್ದಳು. ಮನೋಜ್ ಮಿಶ್ರಾ ಮರಣದ ಸುಮಾರು 20 ದಿನಗಳ ನಂತರ, ಆತನ ಮಗಳು ಗಂಡು ಮಗುವಿಗೆ ಜನ್ಮ ನೀಡಿದಳು. ಅದಕ್ಕೆ ಆರ್ಯನ್ ಎಂದು ಹೆಸರಿಸಲಾಗಿತ್ತು. ಅದೇ ಆರ್ಯನ್ ಈಗ ತಾನು ಸತ್ತು ವಾಪಸ್ ಬಂದಿದ್ದೇನೆ ಎನ್ನುತ್ತಿರುವ ಹುಡುಗ.ಈತ ಚಿಕ್ಕಂದಿನಲ್ಲಿ ಎಲ್ಲರ ಥರ ಮಾಮೂಲಾಗಿದ್ದ. ಆದರೆ ತನಗೆ 4 ವರ್ಷಗಳ ನಂತರ ಆರ್ಯನ್ ರತನ್‌ಪುರ ಗ್ರಾಮದ ಹೆಸರನ್ನು ತೆಗೆದು ಮಾತಾಡಲು ಪ್ರಾರಂಭಿಸಿದ್ದಾನೆ. ಬರಬರುತ್ತಾ ಆರ್ಯನ್‌ಗೆ. ಹೆಚ್ಚು ಹೆಚ್ಚು ನೆನಪುಗಳು ಮರುಕಳಿಸಲು ಶುರುವಾಗಿದೆ. ಇದೀಗ ಆತನಿಗೆ ಈಗ 8 ವರ್ಷ. ಈ ಸಾರಿ ಜೂನ್ 15 ರಂದು ಆತ ಮಂಗಲ್‌ಪುರ ಗ್ರಾಮದ ತನ್ನ ಅಜ್ಜಿಯ ಮನೆಗೆ ಹೋಗಿದ್ದ. ಈ ವೇಳೆ ಆರ್ಯನ್ ಮಾತುಗಳನ್ನು ಕೇಳಿ ಮನೆಯವರೆಲ್ಲ ಮೊದಲ ಬಾರಿ ಬೆಚ್ಚಿ ಬಿದ್ದಿದ್ದರು.

ಹೌದು, ಅಂತಹಾ ವಿಶಿಷ್ಟ ಘಟನೆಯೊಂದು ಅಲ್ಲಿ ನಡೆದಿತ್ತು. ಅಜ್ಜಿಯ ಮನೆಗೆ ಬಂದಾಗ ಮಗ ಅಜ್ಜಿಯ ಪಾದ ಮುಟ್ಟಿ ನಮಸ್ಕರಿಸಲು ಹೇಳಿದಾಗ ಆರ್ಯ ವಿಪರೀತವಾಗಿ ಕೋಪ ಮಾಡಿಕೊಂಡಿದ್ದ. ಸುತಾರಾಂ ತಾನು ತನ್ನ ಅಜ್ಜಿಯ ಕಾಲು ಹಿಡಿಯುವುದಿಲ್ಲ ಎಂದಿದ್ದಾನೆ ಹುಡುಗ. ಮನೆಯವರು, ಅಜ್ಜಿಯ ಕಾಲು ಮುಟ್ಟಿ ಆಶೀರ್ವಾದ ಪಡ್ಕೊ ಅನ್ನುವಾಗ, ಆತ ತನ್ನ ಅಜ್ಜಿಯನ್ನು ತನ್ನ ಹೆಂಡತಿ ಎಂದು ಹೇಳಿದ್ದಾನೆ. ‘ಇವಳು ನನ್ನ ಹೆಂಡತಿ, ನನ್ನ ಅಜ್ಜಿಯಲ್ಲ’ ಎಂದು ಹೇಳಿ ಆಕೆಯ ಕಾಲು ಮುಟ್ಟಿ ಆಶೀರ್ವಾದ ಪಡೆಯಲು ನಿರಾಕರಿಸಿದ್ದಾನೆ. ಆರ್ಯನ್‌ನ ಈ ಹೇಳಿಕೆಯನ್ನು ಕೇಳಿ ಕುಟುಂಬಸ್ಥರು ಆಶ್ಚರ್ಯಪಟ್ಟು, ನಂತರ ಜನರು ಅವನನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ 8 ವರ್ಷಗಳ ಹಿಂದೆ ಹೊಲಕ್ಕೆ ನೀರು ಹಾಯಿಸುವಾಗ ಹಾವು ಕಚ್ಚಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟದ್ದು, ಹೀಗೆ ಆತ ತನ್ನ ಎಲ್ಲಾ ಕಥೆಯನ್ನು ಹೇಳಿದ್ದಾನೆ. ಆರ್ಯನ್ ತನ್ನ ತಾಯಿಗೆ ನೀನು ನನ್ನ ಮಗಳು, ನನ್ನ ತಾಯಿ ಅಲ್ಲ ಎಂದು ಹೇಳಿದ್ದಲ್ಲದೆ, ತನ್ನ ಅಜ್ಜಿಯನ್ನು ಹೆಸರು ಹೇಳಿ ಕರೆದು ಸುದ್ದಿಯಾಗಿದ್ದಾನೆ. ಅವನು ತನ್ನ ಅಜ್ಜಿಗೆ ನೀನು ನನ್ನ ಹೆಂಡತಿ, ನನ್ನ ಮಕ್ಕಳು ಎಲ್ಲಿ? ಎಂದು ಕೇಳಿ, ತನ್ನ ತಾಯಿಯ ಚಿಕ್ಕಪ್ಪನಿಬ್ಬರನ್ನು ನೋಡಿದಾಗ ಆರ್ಯನ್ ಅಳಲು ಪ್ರಾರಂಭಿಸಿದ್ದ ( ತನ್ನ ಮಕ್ಕಳನ್ನು ನೋಡಿ ಪ್ರೀತಿ ಉಕ್ಕಿ !). ಇದನ್ನೆಲ್ಲ ನೋಡಿ ಮನೆಯವರೆಲ್ಲ ಬೆಚ್ಚಿಬಿದ್ದಿದ್ದಾರೆ, ಅಷ್ಟೇ ಅಲ್ಲ ತೀರಿಕೊಂಡ ಮನೋಜ್ ಮಿಶ್ರಾ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣದ ಬಗ್ಗೆ ಕೂಡಾ ಆರ್ಯನ್ ಖಚಿತವಾಗಿ ಹೇಳಿದ್ದಾನೆ.

ವಿಜ್ಞಾನದ ದೃಷ್ಟಿಯಲ್ಲಿ ಪುನರ್ಜನ್ಮದ ಸಿದ್ಧಾಂತ ಕೇವಲ ಒಂದು ಕ್ಕಾಲ್ಪನಿಕ. ಎನ್ನಲಾಗಿದ್ದರೂ ಇದರ ಬಗ್ಗೆ ಜಗತ್ತಿದಾದ್ಯಂತ ದೊಡ್ಡ ದೊಡ್ಡ ಶಾಸ್ತ್ರಜ್ಞರು ವಿಜ್ಞಾನಿಗಳು ವೈದ್ಯರು ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಕರ್ನಾಟಕದವರೇ ಆದ ನಿಮ್ಹಾನ್ಸ್ ನ ಮನಶಾಸ್ತ್ರಜ್ಞರಾದ ಸಿ ಆರ್ ಚಂದ್ರಶೇಖರ್ ರವರು ಈ ಬಗ್ಗೆ ಸಾಕಷ್ಟು ಇಂತಹ ಹಲವು ಘಟನೆಗಳನ್ನು ಅಮೂಲ್ಯವಾದ ವಿಶ್ಲೇಷಿಸಿದ್ದರು. 1990ರ ಇಸವಿಯಲ್ಲಿ ಹಲವು ಸಂಶೋಧನಾತ್ಮಕ ಪ್ರಬಂಧಗಳನ್ನು ಅವರು ಬರೆದಿದ್ದು ಪೂರ್ಣ ವಿಜ್ಞಾನಿಯಾಗಿ ಮತ್ತು ವೈದ್ಯ ಮನಶಾಸ್ತ್ರಜ್ಞರಾಗಿ ಪುನರ್ಜನ್ಮ ಇಲ್ಲವೇ ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲ. ಆದರೆ ಮನುಷ್ಯರಿಗೆ ಸದ್ಯಕ್ಕೆ ಗೊತ್ತಿಲ್ಲದ ಯಾವುದು ಅಜ್ಞಾತ ಶಕ್ತಿ ಇದೆ. ಈ ರೀತಿಯ ನೆನಪುಗಳ ಮರುಕಳಿಕೆಯು, ‘ಚಿತ್ತ ವಿಕಲತೆ ಅಥವಾ ನಂಜು ‘ ವಿನಿಂದ ಉಂಟಾಗಿದೆಯೋ ಅಥವಾ ಅದು ಪುನರ್ಜನ್ಮದ ಕಾರಣದಿಂದಲೇ ಎನ್ನುವ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ ಎಂದಿದ್ದರು. ಆದರೆ ಇಲ್ಲಿ ಮಿಶ್ರ ಅವರು ತೀರಿಕೊಂಡಾಗ ಆಕೆಯ ಮಗಳು ಆತನ ಮಗಳು ಗರ್ಭಿಣಿಯಾಗಿದ್ದು ಆನಂತರ 25 ದಿನದಲ್ಲಿ ಮಗುವನ್ನು ಹೆತ್ತಿದ್ದಳು. ಎಲ್ಲರಿಗೂ ತಿಳಿದಿರುವಂತೆ ಗರ್ಭ ಧರಿಸಿದ ಕೆಲವೇ ವಾರಗಳಲ್ಲಿ ಮಗುವಿನ ಹೃದಯ ಬಡಿತ ಶುರುವಾಗಿ ಜೀವ ಉತ್ಪತ್ತಿಯಾಗುತ್ತದೆ. ಇಲ್ಲಿ ಆರ್ಯನ್ ತಾಯಿಯ ಗರ್ಭದಲ್ಲಿ ಇರುವಾಗ ಆತನ ತಾತ ಮನೋಜ್ ಮಿಶ್ರ ತೀರಿಕೊಂಡಿದ್ದರು. ಆದುದರಿಂದ ಇದು ಪುನರ್ಜನ್ಮವಲ್ಲ, ಬದಲಿಗೆ ಒಂದು ವೇಳೆ ಆತ್ಮಗಳು ಈ ರೀತಿ ಇನ್ನೊಂದು ದೇಹವನ್ನು ಪ್ರಯತ್ನಿಸುತ್ತವಾದರೆ, (ಆತ್ಮ- ಪುನರ್ಜನ್ಮ ಥಿಯರಿಯನ್ನು ನಂಬಿದರೆ ) ಇತ್ತೀಚೆಗೆ ಮಗನ ದೇಹದಲ್ಲಿ ಆತ್ಮದ ಸಂಚಾರ ಆಗಿದೆ ಎನ್ನಬಹುದು. ಒಟ್ಟಾರೆ ಇದೊಂದು ಅಪರೂಪದಲ್ಲಿ ಅಪರೂಪವಾದ ಘಟನೆಯಾಗಿದ್ದು, ಇಡೀ ಊರವರನ್ನು ಮತ್ತು ಕುಟುಂಬದವರನ್ನು ಆಶ್ಚರ್ಯ ಚಕಿತವಾಗಿಸಿದೆ.

Leave A Reply

Your email address will not be published.