Vijayapura: ಫ್ರೀ ಎಫೆಕ್ಟ್‌ : ಒಂದೇ ದಿನ ಗೋಲ್‌ಗುಂಬಜ್‌ ಎಂಟ್ರಿ ಟಿಕೆಟ್‌ ಸೇಲ್‌ ಎಷ್ಟು ಗೊತ್ತೇ? ಲಕ್ಷ ತಲುಪಿದ ಕಲೆಕ್ಷನ್‌

Do you know how much Golgumbaj entry ticket sale is for one day

Vijayapura: ಕಾಂಗ್ರೆಸ್‌ ಸರಕಾರ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಈಗ ಭಾರೀ ಚರ್ಚೆಯಾಗುತ್ತಿರುವ ಯೋಜನೆಯೇ ಶಕ್ತಿ ಯೋಜನೆ. ಅದುವೇ ಫ್ರೀ ಬಸ್‌ ಪ್ರಯಾಣ ಮಹಿಳೆಯರಿಗೆ ಮಾತ್ರ. ಇದರ ಪ್ರಯೋಜನದ ಬಗ್ಗೆ ಈಗಾಗಲೇ ನೀವು ಓದಿರಬಹುದು. ತಿಳಿದುಕೊಂಡಿರಬಹುದು. ಆದರೆ ಈಗ ಬಂದ ಮಾಹಿತಿ ಪ್ರಕಾರ ದಿನದಿಂದ ದಿನ ಮಹಿಳಾ ಮಣಿಗಳು ತಮ್ಮ ಕುಟುಂಬ ಸಹಿತ ಪ್ರವಾಸಿ ತಾಣಗಳಿಗೆ ಭೇಟಿಯಾಗುವುದು, ದೇವಸ್ಥಾನಕ್ಕೆ ಭೇಟಿ ನೀಡುವುದು ವರದಿಯಾಗುತ್ತಲೇ ಇದೆ. ಹೀಗಾಗಿ ದಾಖಲೆ ಮಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಹೆಚ್ಚಾಗಿದೆ. ಇದರಲ್ಲಿ ಒಂದು. ವಿಜಯಪುರದ (Vijayapura) ಐತಿಹಾಸಿಕ ಸ್ಮಾರಕ. ಏನು ವಿಶೇಷ ಇಲ್ಲಿ ಅಂತ ಕೇಳಬೇಡಿ, ವಿಶೇಷ ಇರುವುದರಿಂದಲೇ ಇಲ್ಲಿಗೆ ಮಹಿಳೆಯರ ದಂಡೇ ಭೇಟಿ ನೀಡುತ್ತಿದೆ.

ಇಲ್ಲಿನ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ ಸೇರಿ ಅನೇಕ ಸ್ಥಳಗಳಿಗೆ ತಂಡೋಪತಂಡವಾಗಿ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಆದರೆ ಈ ಬಾರಿ ವಿಶೇಷ ಮತ್ತೊಂದು ನಡೆದಿದೆ. ಅದೇನೆಂದರೆ ಪುರಾತತ್ವ ಇಲಾಖೆಯ ಮಾಹಿತಿಯ ಪ್ರಕಾರ, ಭಾನುವಾರ ಒಂದೇ ದಿನಕ್ಕೆ ಟಿಕೆಟ್‌ನಿಂದ 1.25ಲಕ್ಷ ರೂಪಾಯಿ ಕಲೆಕ್ಷನ್‌ ಆಗಿರುವುದು. ಇದು ಭರ್ಜರಿ ಐದು ವರ್ಷಗಳಲ್ಲಿ ಇದೇ ಮೊದಲನೇ ಬಾರಿ ಆಗಿದೆ ಎಂದು ಪುರಾತತ್ವ ಇಲಾಖೆ ಹೇಳಿಕೊಂಡಿದೆ.

ಗಂಡನನ್ನು ಮನೆಯಲ್ಲಿ ಬಿಟ್ಟು, ಮಕ್ಕಳು, ಸ್ನೇಹಿತರೊಂದಿಗೆ ಹೆಣ್ಮಕ್ಕಳು ಒಂದು ವಾರದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹಂಪಿ ಸೇರಿ ಹಲವು ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.