KPSC: KPSC ಇಂದ ಎಇಇ, ಎಇಐ ಕೀ ಉತ್ತರ ಬಿಡುಗಡೆ!

KPSC AEE, AEI Key Answer Released

KPSC : ಕೆಪಿಎಸ್‌ಸಿ (KPSC) ಮುಖ್ಯ ವಿದ್ಯುತ್‌ ಪರಿವೀಕ್ಷಣಾಲಯದಲ್ಲಿನ ಸಹಾಯಕ ವಿದ್ಯುತ್‌ ಪರಿವೀಕ್ಷಕರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗಳಿಗೆ ನಡೆಸಿದ ಪರೀಕ್ಷೆಗಳ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಕೆಪಿಎಸ್‌ಸಿ (KPSC) ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಬಗ್ಗೆ ಅಭ್ಯರ್ಥಿಗಳು ಚೆಕ್‌ ಮಾಡಬಹುದು.

ಜೂನ್‌ 16ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದಕ್ಕೆ ಆಕ್ಷೇಪಣೆಗಳನ್ನು ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

ಆಯೋಗವು ದಿನಾಂಕ:16-06-2023ರಂದು ನಡೆಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರೇಡ್-1 (ಹೈ.ಕ.) (ಗ್ರೂಪ್ -ಎ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಪತ್ರಿಕೆ (ಪತ್ರಿಕೆ-1) (ವಿಷಯ ಸಂಕೇತ:512) ಮತ್ತು ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ:533)ಗಳ ಕೀ-ಉತ್ತರಗಳನ್ನು ಆಯೋಗದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿರುತ್ತದೆ.

ಅಭ್ಯರ್ಥಿಗಳು ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ದಿನಾಂಕ:26-06-2023ರಂದು ಸಂಜೆ 5-30 ರೊಳಗಾಗಿ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಆಕ್ಷೇಪಣೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 26-06-2023ರ ಸಂಜೆ 5:30 ಆಗಿದ್ದು, ಈ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಳಿದಂತೆ ರೂ.50 ರಂತೆ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಯೊಂದಿಗೆ ಪಾವತಿ ಮಾಡಬೇಕು.

ದಿನಾಂಕ 04-06-2023 ರಂದು ನಡೆದ ಕೆಪಿಎಸ್‌ಸಿ ಮುಖ್ಯ ವಿದ್ಯುತ್‌ ಪರಿವೀಕ್ಷಣಾಲಯದಲ್ಲಿನ ಸಹಾಯಕ ವಿದ್ಯುತ್‌ ಪರಿವೀಕ್ಷಕರು ಇದರ ಪರೀಕ್ಷೆಯ ಎರಡು ಪತ್ರಿಕೆಗಳ ಕೀ ಉತ್ತರವನ್ನು ಜೂನ್‌05ರಂದು ಬಿಡುಗಡೆ ಮಾಡಿತ್ತು. ಇದೀಗ ಆಕ್ಷೇಪಣೆಗಳನ್ನೆಲ್ಲ ಪರಿಶೀಲಿಸಿದ ನಂತರ ಅಂತಮ ಪರಿಷ್ಕೃತ ಕೀ ಉತ್ತರ ಬಿಡುಗಡೆಯಾಗಿದೆ.

Leave A Reply

Your email address will not be published.