Indira Canteen: ಇಂದಿರಾ ಕ್ಯಾಂಟೀನ್‌ ಹೊಸ ಮೆನು ಸಿದ್ಧ! ಏನೆಲ್ಲ ಇದೆ ಗೊತ್ತಾ? ತಿಳಿದರೆ ಬಾಯಲ್ಲಿ ನೀರೂರುವುದು ಖಂಡಿತ

Latest Karnataka news Congress guarantee finally Indira canteen new menu is ready check the food detail in Kannada

Indira Canteen: ಕಾಂಗ್ರೆಸ್‌ ಸರಕಾರ (Congress Government) ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ನಿಂತು ಹೋದ ಕೆಲವೊಂದು ಕೆಲಸಕ್ಕೆ ಆದ್ಯತೆ ನೀಡಿದೆ. ಅದರಲ್ಲಿ ಮೊದಲನೆಯದು ಇಂದಿರಾ ಕ್ಯಾಂಟೀನ್‌.(Indira Canteen). ಕಾಂಗ್ರೆಸ್‌ ಸರಕಾರ ಇದ್ದ ಸಮಯದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಐದು, ಹತ್ತು ರೂಪಾಯಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ದೊರಕುತ್ತಿದ್ದ ಈ ಯೋಜನೆ ಅನಂತರ ನಿಂತು ಹೋಗಿತ್ತು. ಈಗ ಮತ್ತೊಮ್ಮೆ ಕಾಂಗ್ರೆಸ್‌ ಸರಕಾರ ಇಂದಿರಾ ಕ್ಯಾಂಟೀನ್‌ ಪುನಶ್ಚೇತನ ಗೊಳಿಸುವಿಕೆಯತ್ತ ಗಮನ ಹರಿಸಿದೆ.

ಇಂದಿರಾ ಕ್ಯಾಂಟೀನ್‌ ಪುನಶ್ಚೇತನ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaih) ಅಧಿಕಾರಿಗಳ ಈಗಾಗಲೇ ಜೊತೆ ಸಭೆ ನಡೆಸಿದ್ದರು. ಇದಾದ ನಂತರ ದರ ಪರಿಷ್ಕರಣೆ ಇಲ್ಲ, ಆಯಾ ಭಾಗಕ್ಕೆ ತಕ್ಕಂತೆ ಮೆನುವಿನಲ್ಲಿ ಬದಲಾವಣೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೀಗ ಬಂದ ಬಿಸಿ ಬಿಸಿ ಸುದ್ದಿ ಏನೆಂದರೆ, ಇಂದಿರಾ ಕ್ಯಾಂಟೀನ್‌ ಮೆನುವಿನ ಹೊಸ ಲಿಸ್ಟ್‌ ಬಿಡುಗಡೆಯಾಗಿದೆ. ಇದರಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ. ಬನ್ನಿ ಅದೆಲ್ಲ ಏನು ತಿಳಿಯೋಣ.

ಹೊಸ ಮೆನುವಿನಲ್ಲಿ ಈ ಎಲ್ಲಾ ಐಟಂ ಇನ್ನು ಮುಂದೆ ಗ್ರಾಹಕರಿಗೆ ಸಿಗಲಿದೆ; ಇಡ್ಲಿ ಚಟ್ನಿ/ ಸಾಂಬಾರ್, ಬ್ರೆಡ್ & ಜಾಮ್, ಮಂಗಳೂರು ಬನ್ಸ್, ಬೇಕರಿ ಬನ್, ಪುಲಾವ್, ಟೊಮ್ಯಾಟೊ ಬಾತ್, ಖಾರಾ ಪೊಂಗಲ್, ಬಿಸಿಬೇಳೆ ಬಾತ್, ಅನ್ನ ಸಾಂಬಾರ್, ರಾಗಿ ಮುದ್ದೆ ಸೊಪ್ಪುಸಾರು, ಚಪಾತಿ & ಪಲ್ಯ, ಟೀ ಕಾಫಿ.

ಒಂದು ವಾರದಲ್ಲಿ ಏನೇನು ಸಿಗಲಿದೆ? ಇಲ್ಲಿದೆ ಲಿಸ್ಟ್‌;

ಸೋಮವಾರ ಬೆಳಗ್ಗೆ ಗ್ರಾಹಕರಿಗೆ ಇಡ್ಲಿ ಸಾಂಬಾರ್ / ಪಲಾವ್ ರಾಯ್ತಾ/ ಬ್ರೆಡ್ & ಜಾಮ್
ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್, ಪಾಯಸ/ ರಾಗಿ ಮುದ್ದೆ ಸೊಪ್ಪು ಸಾರು ಇದರ ಜೊತೆಗೆ ಪಾಯಸ
ರಾತ್ರಿಯ ಊಟಕ್ಕೆ ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು ದೊರಕಲಿದೆ

ಮಂಗಳವಾರ; ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ಚಟ್ನಿ/ ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್, ಮೊಸರು/ ಚಪಾತಿ ಸಾಗು, ಪಾಯಸ
ರಾತ್ರಿಯ ಊಟಕ್ಕೆ ಅನ್ನ ಸಾಂಬಾರ್, ರಾಯ್ತಾ / ಚಪಾತಿ ಜೊತೆಗೆ ವೆಜ್ ಪದಾರ್ಥ

ಬುಧವಾರ: ಬೆಳಗ್ಗಿನ ತಿಂಡಿಗೆ ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್, ಕೀರ್ / ರಾಗಿಮುದ್ದೆ, ಸೊಪ್ಪು ಸಾರು
ರಾತ್ರಿ ಊಟಕ್ಕೆ ಅನ್ನ ಸಾಂಬಾರ್ / ರಾಗಿಮುದ್ದೆ, ಸೊಪ್ಪು ಸಾರು

ಗುರುವಾರ: ಬೆಳಗ್ಗಿನ ತಿಂಡಿಗೆ ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್, ಜಾಮ್
ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್, ಮೊಸರು / ಚಪಾತಿ ಸಾಗು, ಕೀರ್
ರಾತ್ರಿಯ ಊಟಕ್ಕೆ ಅನ್ನ ಸಾಂಬಾರ್ , ಮೊಸರು / ಚಪಾತಿ ಜೊತೆಗೆ ವೆಜ್ ಕರಿ

ಶುಕ್ರವಾರ: ಬೆಳಗ್ಗಿನ ತಿಂಡಿಗೆ ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್ ದೊರಕಲಿದೆ
ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್ / ಮೊಸರನ್ನ / ರಾಗಿ ಮುದ್ದೆ ಸೊಪ್ಪು ಸಾರು ದೊರಕಲಿದೆ
ರಾತ್ರಿ ಊಟಕ್ಕೆ ಅನ್ನ ಸಾಂಬಾರ್ / ರಾಗಿ ಮುದ್ದೆ ಸೊಪ್ಪು ಸಾರು ಸಿಗಲಿದೆ

ಶನಿವಾರ: ಬೆಳಗ್ಗೆ: ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್ ಸಿಗುವುದು
ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್, ಪಾಯಸ / ಚಪಾತಿ ಸಾಗು, ಪಾಯಸ
ರಾತ್ರಿಯ ಊಟಕ್ಕೆ ಅನ್ನ ಸಾಂಬಾರ್, ಮೊಸರು / ಚಪಾತಿ, ವೆಜ್ ಕರಿ

ಭಾನುವಾರ: ಬೆಳಗ್ಗೆ: ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ ಮತ್ತು ಜಾಮ್
ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್ / ಮೊಸರನ್ನ / ರಾಗಿ ಮುದ್ದೆ ಸೊಪ್ಪು ಸಾರು
ರಾತ್ರಿ ಊಟಕ್ಕೆ ಅನ್ನ ಸಾಂಬಾರ್ / ರಾಗಿ ಮುದ್ದೆ ಸೊಪ್ಪು ಸಾರು ನೀಡಲಾಗುವುದು

ಕಾಂಗ್ರೆಸ್‌ ಸರಕಾರದ ಈ ಯೋಜನೆಯಿಂದ ಬಡವರಿಗೆ ಅನುಕೂಲವಾಗಲಿದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಆಹಾರ ದೊರೆಯುವಂತಾಗುತ್ತದೆ.

Leave A Reply

Your email address will not be published.