Andhra Pradesh: 12ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ! ಸ್ವಯಂ ಘೋಷಿತ ದೇವಮಾನವ ಬಂಧನ!

Latest national news Police arrest self made godman for assaulting minor girl in Andhra Pradesh

Andhra Pradesh: 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸ್ವಯಂ ಘೋಷಿತ ದೇವಮಾನವ ಎಂದು ಹೇಳಿಕೊಂಡ ವ್ಯಕ್ತಿ ಲೈಂಗಿಕ ದೌರ್ಜನ್ಯ ಮಾಡಿದ್ದಾಗಿ, ಈತನನ್ನು ಸೋಮವಾರ ಸಂಜೆ ಬಂಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿ ಈ ಘಟನೆ ನಡೆದಿದೆ. ಪೂರ್ಣಾನಂದ ಸ್ವಾಮಿ ಎಂಬ ಸ್ವಯಂ ಘೋಷಿತ ದೇವಮಾನವನನ್ನು ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸುಮಾರು ಎರಡು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಕಾರಣದಿಂದ ಈತನನ್ನು ಬಂಧನ ಮಾಡಲಾಗಿದೆ.

ಅಪ್ರಾಪ್ತ ಬಾಲಕಿ ಜ್ಞಾನಾನಂದ ರಮಾನಂದ ಸಾಧುಮಠದ ಆಶ್ರಮದಿಂದ ಓಡಿ ಹೋಗಿ ವಿಜಯವಾಡದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿ ಮಾಡಿ ಎಲ್ಲ ವಿಚಾರ ಹೇಳಿದ್ದಾಗಿ ವರದಿಯಾಗಿದೆ. ಈ ಕುರಿತು ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ಹಲವು ದಿನ ಆಶ್ರಮದಲ್ಲಿ ಊಟ ನೀಡದೆ ಇಡಲಾಗಿತ್ತು ಎಂಬ ಮಾತನ್ನು ಬಾಲಕಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆಂದು ವರದಿಯಾಗಿದೆ.

ಈ ಪೂರ್ಣಾನಂದ ಸ್ವಾಮಿ ವಿರುದ್ಧ ಈ ಹಿಂದೆಯೂ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಹೊಸ ಪ್ರಕರಣ ಈಗ ವಿಜಯವಾಡದ ದಿಶಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Leave A Reply

Your email address will not be published.