Ludhiana robbery case: 8 ಕೋಟಿ ಕದ್ದ ಕ್ವೀನ್ ಬೀ, ಕೇವಲ 10 ರೂ. ಜ್ಯೂಸ್ ನ ಆಸೆಯ ಬಲೆಗೆ

Ludhiana robbery case those who stole 8 crores from finance were caught while drinking 10 rupees juice

Ludhiana robbery case: ಕಳ್ಳರೆಷ್ಟೇ ಜಾಲಾಕಿಯಾಗಿದ್ದರೂ, ತಮ್ಮ ಮೋಸದ ಪ್ರಯಾಣದ ಸಂದರ್ಭ ಒಂದಿಲ್ಲೊಂದು ಸುಳಿವು ಬಿಟ್ಟು ಕೊಟ್ಟು ಸಿಕ್ಕಿ ಬೀಳುತ್ತಾನೆಂಬುದು ಸತ್ಯ. ಇದಕ್ಕೆ ನೈಜ ಉದಾಹರಣೆ ಎಂಬಂತೆ, 8 ಕೋಟಿ ರೂಪಾಯಿ ದರೋಡೆ ಮಾಡಿದ ಮಹಿಳೆಯೊಬ್ಬಳು ಬರೀ 10 ರೂಪಾಯಿಗಳ ಜ್ಯೂಸ್‌ಗೆ ಆಸೆ ಪಟ್ಟು ಪೊಲೀಸರ ಬಲೆಗೆ ಬಿದ್ದಿರುವುದು !

ಡಾಕೂ ಹಸೀನಾ ಎಂದೇ ಕುಖ್ಯಾತ ದರೋಡೆಗಾರ್ತಿ ಮಂದೀಪ್ ಕರ್ ಹಾಗೂ ಆಕೆಯ ಗಂಡ ಜಸ್ವಿಂದರ್ ಸಿಂಗ್ ಇತ್ತೀಚೆಗೆ ಪಂಜಾಬ್‌ನ ಲುಧಿಯಾನದಲ್ಲಿ ಹಣಕಾಸು ಪ್ರಶಸ್ತಿ ಸಂಸ್ಥೆಯೊಂದನ್ನು ದರೋಡೆ (Ludhiana robbery case)ಮಾಡಿದ್ದರು. ಅಲ್ಲಿಂದ ಅವರು 8.49 ಕೋಟಿ ರೂಪಾಯಿ ದೋಚಿದ್ದರು. ಅವರ ಪತ್ತೆಗೆ ಯೋಜನೆ ರೂಪಿಸಿದ ಪೊಲೀಸರು ಬಲೆ ಬೀಸಿದ್ದರು.

ಆದರೆ ಇತ್ತ ದರೋಡೆ ಬೆನ್ನಲ್ಲೇ ಮಂಡೀಪ್ ಕೌರ್ ಹಾಗೂ ಆಕೆಯ ಪತಿ ದೇಶ ಬಿಟ್ಟು ಪರಾರಿಯಾಗಲು ಯೋಜನೆ ರೂಪಿಸಿದ್ದರು. ದೇಶ ಬಿಡುವ ಮುನ್ನ, ತಮ್ಮ ನಂಬಿಕೆಯ ಉತ್ತರಾಖಂಡ್ ನ ಹೇಮ್ ಕುಂಡ್ ಸಾಹಿಬ್ ಗೆ ಭೇಟಿ ನೀಡಿದ್ದರು. ಪೊಲೀಸರಿಗೆ ಈ ಬಗ್ಗೆ ಖಚಿತ ಸುಳಿವು ಸಿಕ್ಕಿತ್ತು. ಅದರಂತೆ ಉತ್ತರಾಖಂಡ್ ನ ಹೇಮ್ ಕುಂಡ್ ಸಾಹಿಬ್ ತಲುಪಿಕೊಂಡಿತ್ತು ಪೊಲೀಸ್ ತಂಡ. ಆದರೆ ಅಲ್ಲಿ ನೋಡಿದರೆ ಅಲ್ಲಿನ ಸಂಪ್ರದಾಯದಂತೆ ಪೂರ್ತಿ ಮಾಸ್ಕ್ ಥರ ಬಟ್ಟೆ ಕಟ್ಟಿಕೊಂಡು ಸ್ತ್ರೀ ಪುರುಷರು ಇದ್ದು, ಅವರಲ್ಲಿ ಈ ದಂಪತಿಗಳನ್ನು ಗುರುತಿಸೋದು ಕಷ್ಟವಾಗಿದೆ.

ಹಿಮದ ತಪ್ಪಲಿನಲ್ಲಿರೋ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡುವಾಗ ಮುಖ ಗವಸು ಧರಿಸಿರುತ್ತಾರೆ. ಅವರ ನಡುವೆ ಈ ಖದೀಮ ಜೋಡಿಯನ್ನು ಹುಡುಕುವುದು ಹೇಗೆಂಬುದೇ ಪೊಲೀಸರಿಗೆ ಸವಾಲಾಗಿತ್ತು. ಆಗ ಪೊಲೀಸರ ಸಹಾಯಕ್ಕೆ ಬಂದಿದ್ದೇ, 10 ರೂಪಾಯಿಯ ಜ್ಯೂಸ್ ಪ್ಯಾಕೆಟ್ !

ಪೊಲೀಸರು ಆ ಜೋಡಿಯನ್ನು ಹಿಡಿಯಲು ತಂತ್ರ ರೂಪಿಸಿದ್ದರು. ಹೌದು ‘ಲೆಟ್ಸ್ ಕ್ಯಾಚ್ ದ ಕ್ಲೀನ್ ಬೀ’ ಅನ್ನೋ ‘ರಾಣಿ ಜೇನು ಹಿಡಿಯೋಣ, ಬನ್ನಿ ‘ ಎಂಬ ಯೋಜನೆ ರೂಪಿಸಿ, ಪೊಲೀಸರು ಯಾತ್ರಾರ್ಥಿಗಳಿಗೆಲ್ಲಾ10 ರೂಪಾಯಿಗಳ ಜ್ಯೂಸ್ ಉಚಿತ ಎಂದು ಘೋಷಿಸಿದ್ದರು. ಉಚಿತ ಜ್ಯೂಸ್‌ಗೆ ಆಸೆ ಪಟ್ಟು ಬಂದ ಮಂದ ಪ್ ಕೌರ್, ಜ್ಯೂಸ್ ಕುಡಿಯಲು ತನ್ನ ಮುಖಗವಸು ತೆರೆದಿದ್ದಾಳೆ. ಆಗ ಪೊಲೀಸರು ಆಕೆಯನ್ನು ಗುರುತಿಸಿ, ನಂತರ ಆಕೆಯನ್ನು ಹಿಂಬಾಲಿಸಿ ಆಕೆಯನ್ನೂ ಅವಳ ಪತಿಯನ್ನೂ ಬಂಧಿಸಲಾಗಿದೆ. ಅವರಿಂದ ಇದೀಗ 21 ಲಕ್ಷ ರೂಪಾಯಿಗಳನ್ನು ವಶಪಡಿಸಿ ಕೊಂಡಿದ್ದಾರೆ.

Leave A Reply

Your email address will not be published.