Manju Pavagada: ಮಂಜು ಪಾವಗಡ ಗಿಚ್ಚಿ ಗಿಲಿ ಗಿಲಿ ಶೋ ನಿಂದ ಹೊರ ಬಂದಿದ್ದು ಇದೇ ಕಾರಣಕ್ಕೆ!

This is the reason why Manju Pavagada came out of Gichi Gili Gili show

Manju Pavagada: ಕಲರ್ಸ್ ಕನ್ನಡ ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೃಜನ್ ಲೋಕೇಶ್, ನಟಿ ಶ್ರುತಿ ಹಾಗೂ ಕಾಮಿಡಿ ಕಿಂಗ್ ಸಾಧು ಕೋಕಿಲಾ ನೇನೃತ್ವದಲ್ಲಿ ಮೂಡಿ ಬಂದ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಶುರುವಾದ ಸಂದರ್ಭ ಮಂಜು ಪಾವಗಡ ನಿರೂಪಣೆಯಲ್ಲಿ ಸೀಸನ್ 1 ಮತ್ತು ಸೀಸನ್ 2 ಯಶಸ್ವಿಯಾಗಿ ಪೂರೈಸಿದೆ.

ಈ ನಡುವೆ ರಿಯಾಲಿಟಿ ಶೋನಲ್ಲಿ ಇದ್ದಕ್ಕಿಂದ್ದಂತೆ ನಿರಂಜನ್ ದೇಶಪಾಂಡೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ, ನೋಡುಗರ ಪಾಲಿಗೆ ಆಹಾರದಂತೆ ಮಂಜು ಅವರಿಗೆ ಸಂಭಾವನೆ ಕಮ್ಮಿ, ಕಿರಿಕ್, ನಿರೂಪಣೆ ಚೆನ್ನಾಗಿಲ್ಲ ಅದು ಇದು ಎಂದೆಲ್ಲ ಅಂತೆ ಕಂತೆಗಳ ಮಹಾಪೂರವೇ ಹರಿದುಬಂದಿತ್ತು. ಈ ವಿಚಾರದ ಕುರಿತಂತೆ ಮೌನ ಮುರಿದಿರುವ ಮಂಜು ಅವರು ಸ್ಪಷ್ಟನೆ ನೀಡಿದ್ದಾರೆ.

ಸದ್ಯ, ಮಂಜು ಪಾವಗಡ (Manju Pavagada) ಅಂತರಪಟ ಧಾರಾವಾಹಿಯಲ್ಲಿ ಹೀರೋಯಿನ್ ತಂದೆಯಾಗಿ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮತ್ತೊಂದು ಫ್ಯಾಮಿಲಿ ರಿಯಾಲಿಟಿ ಶೋ ಫ್ಯಾಮಿಲಿ ಗ್ಯಾಂಗ್ಸ್ಟರ್ ಶುರುವಾಗಿದ್ದು, ಈ ಶೋನಲ್ಲಿ ಪ್ರತಿಯೊಂದು ಸೀರಿಯಲ್ ಒಂದೊಂದು ತಂಡವಾಗಿ ಸ್ಪರ್ಧೆ ಮಾಡಲಿದ್ದಾರೆ. ಫ್ಯಾಮಿಲಿ ಗ್ಯಾಂಗ್ಸ್ಟರ್ನಲ್ಲಿ ಅಂತರಪಟ ಟೀಂ ಲೀಡ್ ಮಾಡುತ್ತಿರುವ ಮಂಜು ಪಾವಾಗಡ ಶೋ ಗ್ರ್ಯಾಂಡ್ ಓಪನಿಂಗ್ ವೇಳೆ ಅನೇಕ ಮಾಹಿತಿ ನೀಡಿದ್ದಾರೆ.

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಿಂದ ನಾನು ಹೊರ ಬಂದಿರುವ ವಿಚಾರ ಎಲ್ಲರಿಗೂ ಗೊತ್ತಿದೆ.ಆದರೆ, ಇದರ ನೈಜ ಕಾರಣ ಏನೆಂದು ಎಲ್ಲರಿಗೂ ಹೇಳುವ ಪ್ರಮೇಯ ಬಂದಿರಲಿಲ್ಲ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭ ತಾನು ನಿರೂಪಣೆಯಿಂದ ಹೊರ ಬೀಳೋದಕ್ಕೆ ಕಾರಣವೇನು ಎಂಬುದಕ್ಕೆ ಮಂಜು ಪಾವಗಡ ಕಾರಣ ಹೇಳಿದ್ದಾರೆ. ಏನೆಂದರೆ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿತ್ತು ಅದರಿಂದ ಡೇಟ್ ಕ್ಲಾಶ್ ಆಗುವ ಸನ್ನಿವೇಶ ಎದುರಾಗಿತ್ತು. ನಿರೂಪಣೆ ಲೋಕಕ್ಕೆ ನಾನು ಹೊಸಬ್ಬ ನಿರಂತರ ಪ್ರಾಕ್ಟೀಸ್ ನಡೆಯುತ್ತಿತ್ತು. ಯಾವುದಕ್ಕೂ ಸರಿಯಾಗಿ ಸಮಯ ನೀಡಲಾಗುತ್ತಿರಲಿಲ್ಲ.

ಸಿನಿಮಾ ತಂಡದವರು ಕೊಡುವ ಟೈಂ ಹೇಗಿರುತ್ತದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಕಾರಣಕ್ಕೆ ನಾನು ಹೊರ ಬಂದೆ. ಸುಮಾರು ಜನ ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದು, ಜನರು ಮಾತನಾಡುತ್ತಿರುವುದು ಸತ್ಯವೇ ಆಗಿದ್ದರೆ ನಾನು ಯಾಕೆ ಮತ್ತೆ ಇದೇ ಚಾನೆಲ್ನಲ್ಲಿ ಶೋ ಒಪ್ಪಿಕೊಂಡು ಕೆಲಸ ಮಾಡುತ್ತೇನೆ. ಕಲರ್ಸ್ ಕನ್ನಡ ಎಂಬುದು ನಮ್ಮ ಚಾನೆಲ್ ಹೀಗಾಗಿ, ಯಾವಾಗ ಬೇಕಿದ್ದರೂ ಬರಲು ಅವಕಾಶವಿದ್ದು, ಯಾವಾಗ ಬೇಕಿದ್ದರೂ ಹೋಗುತ್ತೀವಿ ಚಾನೆಲ್ ಬಗ್ಗೆ ಯಾವುದೇ ಬೇಸರವಿಲ್ಲ. ಅನೇಕ ಸಿನಿಮಾ ಕೈಯಲ್ಲಿದೆ ಹೀಗಾಗಿ, ಸಿನಿಮಾ ಮುಗಿಸಬೇಕು ಎಂಬ ಉದ್ದೇಶದಿಂದ ಹೊರ ಬಂದಿರುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.