Yoga and Pranayam: ಯೋಗ ಮತ್ತು ಪ್ರಾಣಾಯಾಮದ ನಡುವೆ ಇರುವ ವ್ಯತ್ಯಾಸವೇನು?

What is the difference between yoga and pranayama

Yoga and Pranayam: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಬದಲಾಗಿದೆ. ಅದು ಒಳ್ಳೆಯ ರೀತಿಯಲ್ಲೇ ಇರಬಹುದು ಅಥವಾ ಕೆಟ್ಟ ರೀತಿಯಲ್ಲಿ. ಆದರೆ ಮನುಷ್ಯ ತನ್ನ ಕೆಟ್ಟ ರೀತಿಯ ಜೀವನ ಶೈಲಿಯನ್ನು ಸರಿ ಮಾಡಲು ಯೋಗಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ ತನ್ನ ಬಿಝಿ ಜೀವನ ಶೈಲಿಯಲ್ಲಿ ಮನುಷ್ಯನಿಗೆ ಯೋಗಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಯೋಗದಿಂದ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯ ಕೂಡಾ ಉತ್ತಮವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಂದಿ ವ್ಯಾಯಾಮ ಮಾಡುವ ಬದಲು ಯೋಗ ಅಥವಾ ಪ್ರಾಣಾಯಾಮ ಮಾಡುವುದು ಕಂಡು ಬರುತ್ತಿದೆ.

ಆದರೆ ಜನರು ಪ್ರಾಣಾಯಾಮ (Yoga and Pranayam) ಮತ್ತು ಯೋಗ ಒಂದೇ ಎಂದು ಭಾವಿಸಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಇವೆರಡೂ ಸಂಪೂರ್ಣವಾಗಿ ಭಿನ್ನ. ಹಾಗಾದರೆ ಇಲ್ಲಿ ನಾವು ಯೋಗ ಮತ್ತು ಪ್ರಾಣಾಯಾಮದ ವ್ಯತ್ಯಾಸ ಏನು? ತಿಳಿಯೋಣ ಬನ್ನಿ.

ಯೋಗ ಎಂದರೇನು?
ಯೋಗ ಎಂದರೆ ಇಲ್ಲಿ ದೈಹಿಕ ವ್ಯಾಯಾಮ ಇರುತ್ತದೆ. ಯೋಗ ಎಂದರೆ ಸೇರುವುದು ಅಥವಾ ಸೇರಿಸುವುದು. ನಮ್ಮ ದೇಹ ಹೊಂದಿಕೊಳ್ಳಲು ಸಹಾಯ ಮಾಡುವ ಪಾತ್ರ ಯೋಗ ಮಾಡುತ್ತದೆ. ಯೋಗದಲ್ಲಿ ಉಸಿರಾಟದ ವ್ಯಾಯಾಮ ಮಾಡಲಾಗುವುದು. ಯೋಗದಿಂದ ದೇಹ ಹಿಗ್ಗುತ್ತದೆ, ಸ್ನಾಯುಗಳು ಬಲಗೊಳ್ಳುತ್ತದೆ. ಅಷ್ಟು ಮಾತ್ರವಲ್ಲದೇ ಅಸ್ತಮಾದಂತಹ ಅನೇಕ ಕಾಯಿಲೆಗಳಿಂದ ಯೋಗ ನಿಮ್ಮ ರಕ್ಷಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುವಲ್ಲಿ ಯೋಗದ ಪಾತ್ರ ಮಹತ್ತರವಾದುದು.

ಪ್ರಾಣಾಯಾಮ ಎಂದರೇನು?
ಪ್ರಾಣಾಯಾಮ ಎಂದರೆ ಉಸಿರಾಟದ ಯೋಗ. ಇಲ್ಲಿ ಉಸಿರಾಟದ ಮೇಲೆ ಕೇಂದ್ರೀಕರಣ ಮಾಡಲಾಗುತ್ತದೆ. ಕೆಲವು ವ್ಯಾಯಾಮಗಳ ಮೂಲಕ ನೀವು ಉಸಿರಾಡಲು ಸಾಧ್ಯವಾಗುತ್ತದೆ. ನಿತ್ಯ ಪ್ರಾಣಾಯಾಮ ಮಾಡುವುದರಿಂದ ನಿಮ್ಮ ಶಾಂತವಾಗಿರುತ್ತದೆ. ಒತ್ತಡ ಮುಕ್ತರಾಗುತ್ತೀರಿ. ಕೆಮ್ಮಿನ ತೊಂದರೆ, ಹೃದಯದ ಆರೋಗ್ಯವಾಗಿಡಲು ಪ್ರಾಣಾಯಾಮ ಮುಖ್ಯ. ಏಕಾಗ್ರತೆ ಹೆಚ್ಚಿಸುವಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಾಣಾಯಾಮ ಮಹತ್ತರ ಪಾತ್ರ ವಹಿಸುತ್ತದೆ. ಪ್ರಣಾಯಾಮದಿಂದ ನಿಮ್ಮ ಮಾನಸಿಕ ಕಾಯಿಲೆ ರಕ್ಷಣೆ ದೂರ ಮಾಡಬಹುದು. ನಿದ್ದೆ ಚೆನ್ನಾಗಿ ಬರುತ್ತದೆ. ಉಸಿರಾಟದ ವ್ಯಾಯಾಮ ಆಗಿರುವುದರಿಂದ ಉಸಿರಾಟದ ಪ್ರಕ್ರಿಯೆ ಆಗಿರುವುದರಿಂದ ಶ್ವಾಸಕೋಶದ ಕಾರ್ಯ ಬಲಪಡಿಸುತ್ತದೆ.

Leave A Reply

Your email address will not be published.