Karnataka Assembly election 2023: ಅಸೆಂಬ್ಲಿ ಎಲೆಕ್ಷನಲ್ಲಿ ಘಟಾಟುಘಟಿ ನಾಯಕರ ಸೋಲಿಗೆ ಪಕ್ಷದೊಳಗೆ ನಡೆದಿತ್ತಾ ಪ್ಲಾನ್ ?! ಕೋಟಿ ಕೋಟಿ ಹಣ ಪಡೆದು ಆಗಿತ್ತಾ ಡೀಲ್ ?! ಆಡಿಯೋ ವೈರಲ್ !!

election fixing with money dealing against kr pete congress bjp candidates audio goes viral

Karnataka Assembly election 2023: ಈ ಭಾರೀ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯು(Karnataka Assembly election 2023) ಒಂದು ರೀತಿಯಲ್ಲಿ ಯಾರೂ ನಿರೀಕ್ಷೆ ಮಾಡಿರದಂತಹ ಫಲಿತಾಂಶವನ್ನು ತಂದುಕೊಟ್ಟಿದೆ. ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿದೆ. ಅಂತೆಯೇ ಪ್ರಮುಖ ಪಕ್ಷಗಳ ಘಟಾನುಘಟಿ ನಾಯಕರುಗಳನ್ನೇ ಸೋಲಿಸಿ ಮನೆಗೆ ಕಳಿಸಿದೆ. ಅರ್ಥಾತ್ ಮತದಾರ ಪ್ರಭುಗಳಿಂದ. ಅವರೆಲ್ಲ ಸದ್ಯ ಮನೆಯಲ್ಲಿ ಕೂತು ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದೆಲ್ಲದರ ಅವರೆಲ್ಲರನ್ನೂ ಸೋಲಿಸಲು ಸ್ವಪಕ್ಷದಲ್ಲೇ ಕೋಟಿ ಕೋಟಿ ಡೀಲ್ ನಡೆದಿತ್ತಾ ಎಂಬ ಗುಮಾನಿಯೊಂದು ಮೂಡಿದೆ.

ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಯ ಘಟಾನುಘಟಿ ನಾಯಕರೇ ಸೋಲುಂಡಿದ್ದಾರೆ. ಅದರಲ್ಲೂ ಬಿಜೆಪಿ(BJP) ನಾಯಕರದ್ದೇ ಮೇಲುಗೈ. ಹೀಗಾಗಿ ನಾಯಕರ ಸೋಲಿಗೆ ಸ್ವಪಕ್ಷೀಯರಿಂದಲೇ ಹುನ್ನಾರ ನಡೆದಿತ್ತಾ? ಕೋಟಿ ಕೋಟಿ ಹಣ ಪಡೆದು ತಮ್ಮ ಅಭ್ಯರ್ಥಿಯನ್ನೇ ಮುಖಂಡರು ಸೋಲಿಸಿದ್ರಾ? ಎಂಬ ಅನುಮಾನವೊಂದು ಸದ್ಯ ಚರ್ಚೆಗೆ ಕಾರಣವಾಗಿದ್ದು, ಕೋಟಿ ಕೋಟಿ ಡೀಲ್​ ಆಡಿಯೋ(Audio) ಕೂಡ ವೈರಲ್ ಆಗಿದೆ.

ಅಂದಹಾಗೆ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಕೆಸಿ ನಾರಾಯಣಗೌಡ (KC Narayana Gowda), ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಸೋಲಿಗೆ ಆಪ್ತರಿಂದಲೇ ಪ್ಲಾನ್ ಮಾಡಲಾಗಿತ್ತಾ? ಎನ್ನುವ ಚರ್ಚೆಗಳು ಕೂಡ ಶುರುವಾಗಿವೆ. ಇದಕ್ಕೆ ಪುಷ್ಠಿ ನಿಡುವಂತೆ ಚುನಾವಣೆ ಬಳಿಕ ಕೆಆರ್ ಪೇಟೆ ಕ್ಷೇತ್ರದಲ್ಲಿ ಆಡಿಯೋ ವೈರಲ್ ಆಗಿದೆ. ಸದ್ಯ ವೈರಲ್ ಆಡಿಯೋ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಅಂದಹಾಗೆ ಚುನಾವಣೆ ವೇಳೆ ಕಾಂಗ್ರೆಸ್(Congress) ತೊರೆದು ಜೆಡಿಎಸ್‌ ಸೇರಿದ್ದ ಮನ್‌ಮುಲ್ ನಿರ್ದೇಶಕ ಡಾಲು ರವಿ(Manmul director dalu ravi)ಸಂಭಾಷಣೆ ಎನ್ನಲಾದ ಆಡಿಯೋದಲ್ಲಿ ಸ್ನೇಹಿತನ ಜೊತೆ ಮುಖಂಡರಿಗೆ ಕೋಟಿ ಕೋಟಿ ರೂ. ಹಣ ನೀಡಿ ಬುಕ್ ಮಾಡಿದ್ದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಆಕಾಂಕ್ಷಿಗಳಿಗೆ ಹಣ ನೀಡಿ ಬುಕ್ ಮಾಡಿದ್ದಾಗಿ ಆಡಿಯೋನಲ್ಲಿ ಮಾತನಾಡಿದ್ದಾರೆ.

ಮಾಜಿ ಸಚಿವ ಕೆಸಿ ನಾರಾಯಣಗೌಡ ಆಪ್ತ ಸಹಾಯಕ ದಯಾನಂದಗೆ(Dayananda) ಹಣ ಕೊಟ್ಟಿರುವ ಬಗ್ಗೆ ಇಬ್ಬರು ಮಾತನಾಡಿದ್ದಾರೆ. ಆದರೆ ಅರ್ಧಕ್ಕೆ ಎಡಿಟ್ ಮಾಡಿದ ಆಡಿಯೋ ಮಾತ್ರ ಬಿಡುಗಡೆ ಮಾಡಲಾಗಿದ್ದು, ಇದೀಗ ಈ ಆಡಿಯೋ ಕ್ಷೇತ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ ವಿಜಯ್ ರಾಮೇಗೌಡಗೆ ಒಂದು ಕೋಟಿ ರೂ ಹಾಗೂ ಬಂಕ್ ಸುರೇಶ್‌ಗೆ ಒಂದು ಕೋಟಿ ಹಣ ನೀಡಿ ಬುಕ್ ಮಾಡಲಾಗಿದೆ. ಇನ್ನು ಪ್ರಕಾಶ್‌ಗೆ 70 ಲಕ್ಷ ರೂ, ನಾಗೇಂದ್ರಗೆ 40 ಲಕ್ಷ ರೂ. ಕೃಷ್ಣಮೂರ್ತಿಗೆ 30-35 ಲಕ್ಷ ರೂ. ನೀಡಿರುವ ಬಗ್ಗೆ ಆಡಿಯೋನಲ್ಲಿದೆ. ಅಷ್ಟೇ ಅಲ್ಲದೇ ಕೋಡಮಾರನಹಳ್ಳಿ ದೇವರಾಜುಗೆ 26 ಲಕ್ಷ ರೂ. ಹೀಗೆ ಸುಮಾರು ಜನ ಲೀಡರ್‌ಗೆ ದುಡ್ಡು ಹೋಗಿದೆ ಎಂದು ಮಾತನಾಡಿರುವ ರವಿ ಅವರ ಆಡಿಯೋ ವೈರಲ್ ಆಗಿದೆ. ಈ ವೇಳೆ ಕೆ.ಸಿ ನಾರಾಯಣಗೌಡರ ಆಪ್ತ ದಯಾಗೆ 3 ಕೋಟಿ ರೂ. ಕೊಟ್ಟಿದ್ದು ನಿಜ ನಾ ಎಂದು ಸ್ನೇಹಿತ ಪ್ರಶ್ನಿಸಿರುವುದು ಸಹ ಆಡಿಯೋನಲ್ಲಿದೆ.

Leave A Reply

Your email address will not be published.