Electronic Components Price Cut: ಟಿವಿ, ಮೊಬೈಲ್, ಕಂಪ್ಯೂಟರ್ ಖರೀದಿಸುವವರಿಗೆ ಸಿಹಿಸುದ್ದಿ ; ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ !

Electronic Components Price Cut reduction in the price of electronic items is possible

Electronic Components Price Cut: ಎಲೆಕ್ಟ್ರಾನಿಕ್ ಸಾಧನವನ್ನು ಕೊಳ್ಳುವವರಿಗೆ ಸಿಹಿಸುದ್ಧಿ ಇಲ್ಲಿದೆ. ಹೌದು, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗುವ (Electronic Components Price Cut) ಸಾಧ್ಯತೆ ಇದೆ. ನೀವು ಹೊಸ ಟಿವಿ, ಮೊಬೈಲ್, ಕಂಪ್ಯೂಟರ್ ತೆಗೆದುಕೊಳ್ಳುವವರಾದರೆ ನಿಮಗೆ ಇದು ಸಿಹಿಸುದ್ಧಿಯೇ ಸರಿ!.

ಕೋವಿಡ್ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಾಗಿತ್ತು. ಇದೀಗ ಕೊರೋನಾ ವೈರಸ್ ಜೊತೆಗೆ ಅದರ ಭೀತಿಯೂ ಕಡಿಮೆಯಾಗಿದೆ. ಹಾಗಾಗಿ ಇಲೆಕ್ಟ್ರಾನಿಕ್ಸ್ ಕಂಪನಿಗಳು ಉತ್ಪನ್ನದ ಬೆಲೆಯನ್ನು ಕಡಿಮೆ ಮಾಡಬಹುದು. ದೂರದರ್ಶನ, ಮೊಬೈಲ್ ಮತ್ತು ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ.

ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಕಂಪನಿಗಳು ಇನ್‌ಪುಟ್ ವೆಚ್ಚದಲ್ಲಿನ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬಹುದು ಎನ್ನಲಾಗಿದೆ. ಚೀನಾದಿಂದ ಕಂಟೇನರ್ ಅನ್ನು ಸಾಗಿಸುವ ವೆಚ್ಚ ದಾಖಲೆಯ ಮಟ್ಟ $ 8,000 ಆಗಿದೆ. ಈಗ ಅದು 850 ರಿಂದ 1,000 ಡಾಲರ್‌ಗೆ ಕಸಿತಗೊಂಡಿದೆ.

2021-2022ರಲ್ಲಿ ಸರಾಸರಿ ಮಾರಾಟ ಬೆಲೆ 16,400 ರೂ. ಇತ್ತು. 2022-23ರಲ್ಲಿ ಸರಾಸರಿ ಮಾರಾಟ ಬೆಲೆ ಸುಮಾರು 11,500 ರೂ.ಗೆ ಇಳಿಕೆ ಕಂಡಿದೆ. ಬೇಡಿಕೆ ಕುಸಿದಿದೆ ಹಾಗಾಗಿ ಕಂಟೈನರ್ ಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಬ್ರಾಂಡ್ ಹೈಯರ್ ಇಂಡಿಯಾದ ಅಧ್ಯಕ್ಷ ಸತೀಶ್ ಎನ್ ಎಸ್ ಹೇಳಿದ್ದಾರೆ.

Leave A Reply

Your email address will not be published.