Prajwal: ಕನ್ನಡ ಕಿರುತೆರೆ ನಟನಿಂದ ಬಾರ್‌ನಲ್ಲಿ ದಾಂಧಲೆ! ಎಫ್‌ಐಆರ್‌ ದಾಖಲು

Entertainment latest Karnataka news FIR register against Tv show actor Prajwal for kirik in Bengaluru bar

Prajwal: ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್‌ ಆದ ನಟ ಪ್ರಜ್ವಲ್‌ (Prajwal) ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಬಾರ್‌ನಲ್ಲಿ ಉಂಟಾದ ಕಿರಿಕ್‌ನಿಂದಾಗಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಈ ಬಣ್ಣದ ಲೋಕದಲ್ಲಿರುವವರು ಹೆಚ್ಚಾಗಿ ಜನರಿಗೆ ಭಾರೀ ಬೇಗ ಕನೆಕ್ಟ್‌ ಆಗಿರುತ್ತಾರೆ. ಹಾಗಾಗಿ ಅವರು ಮಾಡುವ ಒಂದು ತಪ್ಪು ಕೂಡಾ ಬಹುಬೇಗ ಸುದ್ದಿಯಾಗುತ್ತದೆ.

ಬೆಂಗಳೂರಿನ ಆರ್‌ಆರ್‌ನಗರದ ಅಮೃತ ಬಾರ್‌ ಆಂಡ್‌ ರೆಸ್ಟೋರೆಂಟ್‌ನಲ್ಲಿ ಈ ಗಲಾಟೆ ನಡೆದಿದ್ದು, ಈ ಘಟನೆ ಮೂರು ದಿನದ ಹಿಂದೆ ನಡೆದಿದೆ. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಜ್ವಲ್‌ ಅವರು ಚೇತನ್‌ ಎಂಬುವವರ ಜೊತೆ ಕಿರಿಕ್‌ ಮಾಡಿಕೊಂಡಿದ್ದಾರೆ. ಸ್ನೇಹಿತರ ಜೊತೆ ಬಾರ್‌ಗೆ ಹೋಗಿದ್ದ ಪ್ರಜ್ವಲ್‌ ಅದೇ ಬಾರ್‌ನಲ್ಲಿ ಚೇತನ್‌ ಅವರು ಕೂಡಾ ಸ್ನೇಹಿತರೊಂದಿಗೆ ಬಂದಿದ್ದರು. ಪ್ರಜ್ವಲ್‌ ಜೊತೆ ಇದ್ದ ಸ್ನೇಹಿತ ಮನು ಎಂಬುವವರನ್ನು ಚೇತನ್‌ ಕರೆದಿದ್ದು, ನಂತರ ಗಲಾಟೆ ನಡೆದಿದೆ.

ಪ್ರಜ್ವಲ್‌ ಅವರು ʼಅಮೃತವರ್ಷಿಣಿʼ ಹಾಗೂ ʼಅಣ್ಣ ತಂಗಿʼ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟ. ಚೇತನ್‌ ಹಾಗೂ ಸ್ನೇಹಿತರಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈರ ಆರೋಪವನ್ನು ಚೇತನ್‌ ಮಾಡಿದ್ದಾರೆ. ಚೇತನ್‌ ಕೊಟ್ಟ ದೂರಿನನ್ವಯ ಎಫ್‌ಐಆರ್‌ ದಾಖಲು ಮಾಡಿಕೊಂಡು ಪೊಲೀಸರು ನೋಟಿಸ್‌ ನೀಡಿದ್ದಾರೆ.

ಇದನ್ನೂ ಓದಿ: SSLR land surveyor admit card link: 2000 ಭೂಮಾಪಕರ ಹುದ್ದೆಯ ಕುರಿತು ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್‌! ಪರೀಕ್ಷೆಗೆ ದಿನಾಂಕ ಪ್ರಕಟ, ಹೆಚ್ಚಿನ ವಿವರ ಇಲ್ಲಿದೆ

Leave A Reply

Your email address will not be published.