Chandraprabha: ಆಧಾರ್ ಕಾರ್ಡ್ ಬದಲಿಸಿ, ಹುಡುಗಿಗೆ ವಂಚಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ!! ಕೊನೆಗೂ ಹೊರಬಿತ್ತು ಸತ್ಯ !!

Gitchi Giligili Chandraprabha cheated a girl and got married by changing Aadhaar card

Chandraprabha: ಕಲರ್ಸ್ ಕನ್ನಡ(Colors kannada)ವಾಹಿನಿಯಲ್ಲಿ ಪ್ರಸಾರವಾದ ಹಾಸ್ಯ ಕಾರ್ಯಕ್ರಮ ‘ಮಜಾಭಾರತ’(Maja bharata) ಮೂಲಕ ಕನ್ನಡಿಗರ ಮನೆ ಮಾತಾದ ಕಾಮಿಡಿ ಕಲಾವಿದ ಚಂದ್ರಪ್ರಭ(Chandraprabha), ತಮ್ಮದೇ ವಿಶಿಷ್ಠ ಶೈಲಿಯ ಡ್ಯಾನ್ಸ್ ಮೂಲಕ ಚಿರಪರಿಚಿತರಾಗಿರುವವರು. ‘ಗಿಚ್ಚಿ ಗಿಲಿಗಿಲಿ’(Giccha giligili) ಹಾಗೂ ‘ಗಿಚ್ಚಿ ಗಿಲಿಗಿಲಿ 2’ ಕಾರ್ಯಕ್ರಮಗಳಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತಿರುವ ಚಂದ್ರಪ್ರಭ ಇತ್ತೀಚೆಗೆ ಸದ್ಧಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆದರೀಗ ಈ ಬೆನ್ನಲ್ಲೇ ಚಂದ್ರಪ್ರಭ ಅವರು ನಕಲಿ ಆಧಾರ್ ಕಾರ್ಡ್‌ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ್ರಾ? ಅನ್ನೋ ವಿಚಾರವೊಂದು ಚರ್ಚೆಗೆ ಬಂದಿದೆ.

ಹೌದು, ತಾನು ಆಧಾರ್ ಕಾರ್ಡ್(Adhar card) ನಲ್ಲಿ ನಿಜವಾದ ಜನ್ಮದಿನಾಂಕ ಬದಲಿಸಿ, ನಂಬಿಸಿ ನನ್ನ ಹುಡುಗಿಯನ್ನು ಮದುವೆಯಾದೆ ಎಂದಿರುವ ಚಂದ್ರಪ್ರಭ ಅವರು ಅಷ್ಟಕ್ಕೂ ತನ್ನ ವಯಸ್ಸು, ಎಷ್ಟು ಚಂದ್ರಪ್ರಭಾ ಹೇಗೆ ಭಾರತಿ ಪ್ರಿಯಾ ಭೇಟಿ ಮಾಡಿದರು ಎಂದು ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಯೂಟ್ಯೂಬ್ ಸಂದರ್ಶನದಲ್ಲಿ(You tube Interview) ಮಾತನಾಡಿದ ಅವರು “ಅಂದು ಮಲೆ ಮಹಾದೇಶ್ವರ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಹೋಗಿದ್ದೆ. ದೇವರ ಜೊತೆ ಹುಡುಗಿಯ ದರ್ಶನ ಕೂಡ ಆಯ್ತು. ನೋಡಲು ಚೆನ್ನಾಗಿದ್ದಾಳೆ ಎಂದು ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿದೆ. ನನ್ನ ಹಾಡು ನೋಡಿ ಇಷ್ಟ ಪಟ್ಟು ಐ ಲೈಕ್‌ ಯು ಎಂದು ಹೇಳಿದ್ದಳು. ಆಮೇಲೆ ಆಗಿದ್ದು ಎಲ್ಲಾ ಮಾಮುಲಿ. ನನ್ನ ಹಾಡಿಗೆ ಅವರು ಸಿಕ್ಕಾಪಟ್ಟೆ ಫ್ಯಾನ್. ಅವರು ಲೈಕ್ ಕೊಟ್ರೆ ನಾನು ಲವ್ ಯು ಎಂದು ಹೇಳಿದೆ. ಅಣ್ಣ ಅಂತ ಹೇಳುತ್ತೀನಿ ಅಂದ್ರು ಬೇಡ ಅಂತ ಹೇಳಿ ಒತ್ತಾಯ ಮಾಡಿ ಲವ್ ಮಾಡಿಸಿದೆ’ ಎಂದು ಹೇಳಿದ್ದಾರೆ.

ಅಲ್ಲದೆ ನನ್ನ ವಯಸ್ಸನ್ನು ಎಲ್ಲರೂ ರೇಗಿಸುತ್ತಿದ್ದರು. ಅದನ್ನು ನೋಡಿ ನನ್ನ ವಯಸ್ಸಿನ ಮೇಲೆ ಆಕೆಗೆ ಡೌಟ್ ಆಯ್ತು. ಅವರ ಅಪ್ಪ ಕೂಡ ಬೇಡ ಕಣ್ಣಮ್ಮ ಹುಡುಗನಿಗೆ ನನ್ನ ವಯಸ್ಸು ಎಂದರು. ಆದರೆ ಈ ನಡುವೆ ಆತುರ ಆತುರವಾಗಿ ಮದುವೆ ಮಾಡಿಕೊಳ್ಳೋಣ ಎಂದು ದಿನಾಂಕ ಕೂಡ ಫಿಕ್ಸ್ ಮಾಡಿಸಿದೆ. ಕೊನೆಗೆ ಐಡಿಯಾ ಒಂದು ಹೊಳೆಯಿತು. ಜನರು ಆಧಾರ್ ಕಾರ್ಡ್‌ ನಂಬುತ್ತಾರೆ ಅದಿಕ್ಕೆ ಸುಳ್ಳು ಆಧಾರ್ ಕಾರ್ಡ್ ಮಾಡಿಸಿದೆ. ನನಗೆ 25 ವರ್ಷ ಅಂತ ಸುಳ್ಳು ಮಾಡಿಸಿ ಅವರ ಅಪ್ಪನಿಗೆ ತೋರಿಸಿದೆ ಹೆಚ್ಚಿಗೆ ತೋರಿಸಿದರೆ ಚರ್ಚೆ ಆಗುತ್ತೆ ಅಂತ ರಪ್ ಅಂತ ತೋರಿಸಿ, ಪಟ್ ಅಂತ ಮದುವೆ ಮಾಡಿಕೊಂಡೆ’ ಎಂದು ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಇನ್ನು “ಮದುವೆ ಅಂದ್ಮೇಲೆ ನಮ್ಮ ಚಾನೆಲ್ ಅವ್ರು ನನ್ನ ತಂಡದ ಹುಡುಗರನ್ನು ಕರೆಯಬೇಕು ಆದರೆ ಅವರ ಬಂದರೆ ನನ್ನ ನಿಜವಾದ ವಯಸ್ಸು ರಿವೀಲ್ ಮಾಡುತ್ತಾರೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಬೆಳಗ್ಗೆ ದೇವಸ್ಥಾನದಲ್ಲಿ ಸ್ವಾಮೀಜಿ ಅವರಿಗೆ ಹೇಳಿ ಸಿಂಪಲ್ ಆಗಿ ಮದುವೆ ಮಾಡಿಸಿ ಆನಂತರ ರೀ-ಹರ್ಸಲ್‌ನಲ್ಲಿ ಭಾಗಿಯಾಗಿದೆ. ಯಾಕೆ ತಡವಾಗಿ ಬರುತ್ತಿರುವುದು ಎಂದು ಹೇಳಬೇಕು ಅಲ್ವಾ ಅದಿಕ್ಕೆ ನಮ್ಮ ಟೀಂ ಮತ್ತು ಮ್ಯಾನೇಜರ್‌ಗೆ ತೋರಿಸಿದೆ ಆಗ ಎಲ್ಲರೂ ನಂಬುವುದಕ್ಕೆ ಶುರು ಮಾಡಿದರು” ಎಂದು ಚಂದ್ರಪ್ರಭ ಹೇಳಿದ್ದಾರೆ.

ಅಂದಹಾಗೆ ಇತ್ತೀಚೆಗೆ ಚಂದ್ರಪ್ರಭ ಅವರು ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಂದ್ರ ಮದುವೆಯಾಗಿರುವ ಹುಡುಗಿ ಪ್ರಿಯಾ ಅವರು ಫೋಟೋಸ್ ಅಪ್ಲೋಡ್ ಮಾಡಿದ್ದಾರೆ. ಚಂದ್ರಪ್ರಭ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ(Bharati priya). ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾ ಮೂರುವರೆ ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

 

ಇದನ್ನು ಓದಿ: Nandini Milk: ನಂದಿನಿ ದರದಲ್ಲಿ ಹೆಚ್ಚಳ ಸಾಧ್ಯತೆ?! ರೂ.5 ಹೆಚ್ಚಳಕ್ಕೆ ಚಿಂತನೆ! 

Leave A Reply

Your email address will not be published.