Senior Citizen: ಹಿರಿಯ ನಾಗರಿಕರಿಗೆ ಬಂಪರ್ ಸಿಹಿಸುದ್ದಿ ; ಇನ್ಮುಂದೆ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ಡೈರೆಕ್ಟ್ ಎಂಟ್ರಿ !

Latest Karnataka news Karnataka muzrai temple department Direct entry for senior citizens above 65 years in temples

Senior Citizen: ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯಬೇಕು ಅಂದ್ರೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಂತರ ದೇವರನ್ನು ನೋಡುವ ಭಾಗ್ಯ ಸಿಗುತ್ತದೆ. ಆದರೆ, ಇನ್ನುಮುಂದೆ ಹಿರಿಯ ನಾಗರಿಕರು ದೇವರ ದರ್ಶನಕ್ಕೆ ಕಾಯುವ ಪ್ರಸಂಗವೇಬಾರದು. ಹೌದು, ಇನ್ಮುಂದೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ (Senior Citizen) ಡೈರೆಕ್ಟ್ ಎಂಟ್ರಿ ಇರಲಿದೆ.

ಈ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿದ್ದು, ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದಂತೆ ರಾಜ್ಯದಲ್ಲೂ ಹಿರಿಯ ನಾಗರೀಕರಿಗಾಗಿ ವಿಶೇಷ ಸೌಲಭ್ಯ ಒದಗಿಸಲಾಗುವುದು. ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಹಿರಿಯ ನಾಗರೀಕರಿಗೆ ಡೈರೆಕ್ಟ್ ಎಂಟ್ರಿ ನೀಡಲು ವಿಶೇಷ ಕ್ಯೂ ವ್ಯವಸ್ಥೆ ಮಾಡಲಾಗುತ್ತದೆ. ಆನ್ಲೈನ್ ಬುಕ್ಕಿಂಗ್‌ ಮೂಲಕ ವಿಶೇಷವಾಗಿ ಹಿರಿಯರಿಗೆ ವಸತಿಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೆ, ದೇವಸ್ಥಾನಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಖಾಸಗಿ ಆಡಳಿತ ಮಂಡಳಿಯ ಧಾರ್ಮಿಕ-ದತ್ತಿ ಸಮಿತಿಗಳಿಂದ ನಡೆಯುವ ಹಾಗೂ ಟ್ರಸ್ಟ್‌ಗಳಿಂದ ನಡೆಯುವ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಯಾವುದೇ ರೀತಿಯ ನಿರ್ಣಯ ಕೈಗೊಂಡಿಲ್ಲ. ಹಾಗಾಗಿ, ಧರ್ಮಸ್ಥಳ, ಉಡುಪಿ ಅಷ್ಟಮಠಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನೇರ ದರ್ಶನದ ಬಗ್ಗೆ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲ. ಸರ್ಕಾರ ದೇವಸ್ಥಾನಗಳಿಗೂ ಕೂಡ ಈ ಕುರಿತಂತೆ ಸೂಚನೆ ನೀಡಿದೆಯೇ ಎಂಬ ಮಾಹಿತಿಯಿಲ್ಲ.

ಇದನ್ನೂ ಓದಿ: Free Money: ಮದುವೆಯಾಗುವ ಮಹಿಳೆಯರಿಗೆ ದೊರೆಯುತ್ತೆ ಭರ್ಜರಿ ರೂ.51,000! ಇಲ್ಲಿನ ಸರಕಾರ ನೀಡುತ್ತೆ ಈ ಸೌಲಭ್ಯ!!!

Leave A Reply

Your email address will not be published.