Hyderbad: ಇಬ್ಬರು ತೃತೀಯಲಿಂಗಿಗಳ ಬರ್ಬರ ಹತ್ಯೆ!

Latest national crime news The barbaric killing of two transgender people in Hyderabad

Hyderbad: ಬುಧವಾರ ಮುಂಜಾನೆ ಇಬ್ಬರು ತೃತೀಯಲಿಂಗಿಗಳನ್ನು ಹತ್ಯೆ ಮಾಡಲಾಗಿದೆ. ಹೈದರಾಬಾದ್‌(Hyderbad) ಓಲ್ಡ್‌ ಸಿಟಿ ಪ್ರದೇಶದ ತಪ್ಪಚಬುತ್ರ ಪೊಲೀಸ್‌ ಠಾಣೆ ವ್ಯಾಪ್ತಿಯ ಡೈಬಾಗ್‌ನಲ್ಲಿ ಬುಧವಾರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಯೂಸುಫ್‌ ಅಲಿಯಾಸ್‌ ಡಾಲಿ ಮತ್ತು ರಿಯಾಜ್‌ ಅಲಿಯಾಸ್‌ ಸೋಫಿಯಾ ಎಂದು ಗುರುತಿಸಲಾಗಿದೆ. ಇವರ ಮೇಲೆ ದಾಳಿಕೋರರು ದೊಡ್ಡ ಕಲ್ಲುಗಳು ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಕೃತ್ಯ ನಡೆದ ಸ್ಥಳಕ್ಕೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆಗೆ ಜನರಲ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕೊಲೆಗೆ ನಿಖರವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ನಿಖರವಾದ ಕಾರಣವೇನೆಂದು ಕಂಡು ಹಿಡಿಯುವ ಬಗ್ಗೆ ತನಿಖೆ ಮಾಡಲಾಗುವುದು. ಎಂದು ಹೈದರಾಬಾದ್‌ ನೈಋತ್ಯ ಡಿಸಿಪಿ ಕಿರಣ್‌ ಖರೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಆಸ್ಪತ್ರೆಗೆ ದಾಖಲು!

Leave A Reply

Your email address will not be published.