Nandini Milk: ನಂದಿನಿ ದರದಲ್ಲಿ ಹೆಚ್ಚಳ ಸಾಧ್ಯತೆ?! ರೂ.5 ಹೆಚ್ಚಳಕ್ಕೆ ಚಿಂತನೆ!

Nandini milk price increase possibility

Nandini Milk: ಭೀಮಾ ನಾಯ್ಕ್‌ ಅವರು ಕರ್ನಾಟಕ ಹಾಲು ಮಾರಾಟ ಮಂಡಳದ (KMF) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಈ ಸುದ್ದಿ ಬಂದ ಕೂಡಲೇ ಈಗ ನಂದಿನಿ ಹಾಲಿನ (Nandini Milk) ದರ ಹೆಚ್ಚಳದ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ನಂದಿನಿ ಹಾಲಿನ ದರ ರೂ.5 ಕ್ಕೆ ಏರಿಕೆ ಬೇಡಿಕೆ ಇಟ್ಟಿದ್ದಾಗಿ ತಿಳಿಸಿದ್ದು, ಇದರ ಬಗ್ಗೆ ಸಿದ್ದರಾಮಯ್ಯ ಜತೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ. ಗುಣಮಟ್ಟದ ಹಾಲು, ಮೊಸರು, ತುಪ್ಪದ ಜೊತೆಗೆ ಎಲ್ಲಾ ಒಕ್ಕೂಟಗಳು ಐದು ರೂ. ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದೆ.

ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಹಾಲು ಉತ್ಪಾದಕರಿಗೆ ನೀಡುವ ಮೊತ್ತ ಏರಿಕೆಯ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಈ ಬಗ್ಗೆ ರೈತರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು, ಹಾಗೆನೇ ನಂದಿನಿ ಹಾಲಿನ ದರ ಏರಿಕೆ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದು ಹೇಳಿದ್ದಾರೆ.

 

ಇದನ್ನು ಓದಿ: ಹಿರಿಯ ನಾಗರಿಕರಿಗೆ ಬಂಪರ್ ಸಿಹಿಸುದ್ದಿ ! ಇನ್ಮುಂದೆ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ಡೈರೆಕ್ಟ್ ಎಂಟ್ರಿ !

Leave A Reply

Your email address will not be published.