Nawazuddin Siddiqui: ಮಗಳ ವಯಸ್ಸಿನ ಯುವನಟಿಯ ಜೊತೆಗೆ 49ರ ನವಾಜುದ್ದೀನ್‌ ಲಿಪ್​ಕಿಸ್ ; ತೀವ್ರ ಟೀಕೆಯ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ನಟ !

Nawazuddin Lipkis with a young actress of his daughter age

Nawazuddin Siddiqui: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ಧಿಕಿ (Nawazuddin Siddiqui) ಮತ್ತು ನಟಿ ಅವನೀತ್‌ ಕೌರ್‌ (Avaneeth Kaur) ನಟನೆಯ ‘ಟೀಕು ವೆಡ್ಸ್‌ ಶೇರು’ (tiku weds sheru) ಸಿನಿಮಾ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ‘ಟಿಕು ವೆಡ್ಸ್ ಶೇರು’ ಕಂಗನಾ (kangana) ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ನಿರ್ಮಿಸಿದ ಮೊದಲ ಯೋಜನೆಯಾಗಿದೆ. ಸಾಯಿ ಕಬೀರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದಲ್ಲಿ ಬಾಲಿವುಡ್​ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರು 21 ವರ್ಷದ ಯುವನಟಿಗೆ ಲಿಪ್​ಕಿಸ್ (Lipkiss) ಮಾಡಿದ್ದು, ನಟಿಯೊಂದಿಗಿನ ರೊಮ್ಯಾಂಟಿಕ್ ಸೀನ್’ಗಳು ಭಾರೀ ವೈರಲ್ ಆಗಿ, ಟೀಕೆ ವ್ಯಕ್ತವಾಗಿತ್ತು. ಏಜ್​ಗ್ಯಾಪ್ ಕಿಸ್ಸಿಂಗ್ ಸೀನ್​ ಚರ್ಚೆಗೆ ಕಾರಣವಾಗಿತ್ತು. ಇದೀಗ ನಟ ನವಾಜುದ್ದೀನ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

“21 ವರ್ಷದ ಅವನೀತ್‌ ತನಗಿಂತ 28 ವರ್ಷ ಹಿರಿಯ ವ್ಯಕ್ತಿಯಿಂದ ಮುತ್ತನ್ನಿಕ್ಕಿಸಿಕೊಳ್ಳಬೇಕೇ? ಕಂಗನಾ ಆದರೂ ಈ ಬಗ್ಗೆ ಯೋಚನೆ ಮಾಡಬಾರದಿತ್ತೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈ ಚರ್ಚಾ ವಿಷಯಕ್ಕೆ ಪ್ರತಿಕ್ರಿಯಿಸಿದ ನವಾಜುದ್ದೀನ್‌ ಅವರು, “ಈಗಿನವರಿಗೆ ರೊಮ್ಯಾನ್ಸ್‌ ಮಾಡುವುದಕ್ಕೇ ಬರುವುದಿಲ್ಲ” ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ರೊಮ್ಯಾನ್ಸ್‌ಗೆ ಅತಿ ಹೆಚ್ಚು ಪ್ರಾಮುಖ್ಯತೆ ಇತ್ತು.
ರೊಮ್ಯಾನ್ಸ್‌ಗೆ ವಯಸ್ಸು ಮುಖ್ಯ ಅಲ್ಲ. ನಾವು ವರ್ಷಾನುಗಟ್ಟಲೆ ಪ್ರೀತಿಸುತ್ತಿದ್ದೆವು. ಈಗ ಪ್ರೀತಿ, ಪ್ರೇಮ, ಬ್ರೇಕಪ್‌ ಎಲ್ಲವೂ ವಾಟ್ಸ್‌ಆಪ್‌ನಲ್ಲೇ ಆಗಿಬಿಡುತ್ತದೆ. ನಿಜ ಜೀವನದಲ್ಲಿ ರೊಮ್ಯಾನ್ಸ್‌ ಜತೆಗೆ ಬದುಕಿದವರಿಗೆ ಮಾತ್ರ ತೆರೆ ಮೇಲೆ ರೊಮ್ಯಾನ್ಸ್‌ ಮಾಡಲು ಸಾಧ್ಯವಾಗುವುದು. ಶಾರುಖ್‌ ಖಾನ್‌ ಈಗಲೂ ರೊಮ್ಯಾಂಟಿಕ್‌ ಪಾತ್ರಗಳಲ್ಲಿ ನಟಿಸುತ್ತಾರೆ ಎಂದು ಹೇಳಿದರು.

ಸದ್ಯ ನಟ ನವಾಜುದ್ದೀನ್ ಸಿದ್ದಿಕಿ ಅವರು ಯುವನಟಿಗೆ ಲಿಪ್​ಕಿಸ್ ಕೊಟ್ಟು ಸುದ್ದಿಯಾಗಿರುವ ಜೊತೆಗೆ ವೈಯಕ್ತಿಕ ಜೀವನದಲ್ಲಿ ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆಯೂ ಸುದ್ದಿಯಲ್ಲಿದ್ದಾರೆ. ಇನ್ನು 21 ವರ್ಷದ ಅವ್ನೀತ್ ಕೌರ್ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಚಲನಚಿತ್ರಗಳ ಹೊರತಾಗಿ, ಅವನೀತ್ ಅನೇಕ ಹಿಟ್ ಟಿವಿ ಶೋಗಳಲ್ಲಿ ತನ್ನ ಅತ್ಯುತ್ತಮ ನಟನೆಯಿಂದ ಜನರ ಹೃದಯವನ್ನು ಗೆದ್ದಿದ್ದಾರೆ.

 

ಇದನ್ನು ಓದಿ: Bangalore: ವಿಕೃತಕಾಮಿ ಉಮೇಶ್ ರೆಡ್ಡಿ ಬೆಂಗಳೂರು ಜೈಲಿಗೆ ಎತ್ತಂಗಡಿ! 

Leave A Reply

Your email address will not be published.