Bangalore: ವಿಕೃತಕಾಮಿ ಉಮೇಶ್ ರೆಡ್ಡಿ ಬೆಂಗಳೂರು ಜೈಲಿಗೆ ಎತ್ತಂಗಡಿ!

Pervert Umesh Reddy has been shifted to Bangalore Jail

Bangalore: ವಿಕೃತಕಾಮಿ ಸರಣಿ ಹಂತಕ ಉಮೇಶ್ ರೆಡ್ಡಿಯನ್ನು ಬೆಳಗಾವಿ ಹಿಂಡಲಗಾ ಜೈಲಿನಿಂದ ಬೆಂಗಳೂರು ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಕಳೆದ ವರ್ಷ ನವೆಂಬರ್ ವೇಳೆಗೆ.ಸುಪ್ರೀಂ ಕೋರ್ಟ್ ಉಮೇಶ್ ರೆಡ್ಡಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು 30 ವರ್ಷಗಳ ಶಿಕ್ಷೆಗೆ ಪರಿವರ್ತಿಸಿದ ಬಳಿಕ ಸರಣಿ ಅತ್ಯಾಚಾರಿ ಮತ್ತು ಹಂತಕ ಉಮೇಶ್ ರೆಡ್ಡಿಯನ್ನು ಜೂನ್ 3 ರಂದು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬೆಂಗಳೂರು (Bangalore) ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.

ಪ್ರತಿ ಬಾರಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಸಂದರ್ಭ ರೆಡ್ಡಿ ಯಾವುದಾದರೊಂದು ಕಾರಣ ಹೇಳಿ ಮನೆಯೊಳಗೆ ಪ್ರವೇಶಿಸಿದುತ್ತಿದ್ದನಂತೆ. ಆ ಬಳಿಕ ಒಂಟಿಯಾಗಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಚಾಕು ತೋರಿಸಿ ಬೆದರಿಸಿ ಬಟ್ಟೆ ತೆಗೆಯಲು, ಹೇಳುತ್ತಿದ್ದ. ಅಷ್ಟೇ ಅಲ್ಲದೆ ವಿಕೃತಕಾಮಿ ಕಟ್ಟಿಹಾಕಿ, ಉಸಿರುಗಟ್ಟಿಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ.

ಅದೇ ರೀತಿ, ಫೆಬ್ರವರಿ 28, 1998 ರಂದು ಪೀಣ್ಯದ 37 ವರ್ಷ ವಯಸ್ಸಿನ ವಿಧವೆ ಜಯಶ್ರೀ ಮರಡಿ ಸುಬ್ಬಯ್ಯರವರ ಮೇಲೆ ಅತ್ಯಾಚಾರವೆಸಗಿದ್ದು ಮಾತ್ರವಲ್ಲದೇ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಏಳು ವರ್ಷದ ಮಗ ಈ ಘೋರ ಅಪರಾಧಕ್ಕೆ ಏಕೈಕ ಸಾಕ್ಷಿಯಾಗಿದ್ದ. ಈ ಆರೋಪದ ಮೇಲೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಉಮೇಶ್ ರೆಡ್ಡಿಗೆ ಮರಣದಂಡನೆ ವಿಧಿಸಿತ್ತು.

2011ರಿಂದ ಹಿಂಡಲಗಾ ಜೈಲಿನಲ್ಲಿದ್ದವನಿಗೆ ಕರ್ನಾಟಕ ಹೈಕೋರ್ಟ್ 2009 ರಲ್ಲಿ ರೆಡ್ಡಿಗೆ ಮರಣದಂಡನೆ ವಿಧಿಸಿದ್ದು ಅಲ್ಲದೇ 2011 ರಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ 2013 ರಲ್ಲಿ ರಾಷ್ಟ್ರಪತಿಗಳು ಆತನ ಕ್ಷಮಾದಾನ ಅರ್ಜಿಯನ್ನು ತಿರಸ್ಕಾರ ಮಾಡುವವರೆಗೆ ಉಮೇಶ್ ರೆಡ್ಡಿಯನ್ನು 2016 ರವರೆಗೆ ಒಂಟಿಯಾಗಿ ಸೆರೆಮನೆಯಲ್ಲಿ ಇರಿಸಲಾಗಿತ್ತು. ಆದರೆ 2022 ರ ವೇಳೆಗೆ ಸುಪ್ರೀಂ ಕೋರ್ಟ್ ಅವರನ್ನು 10 ವರ್ಷಗಳ ಕಾಲ ಕಾನೂನುಬಾಹಿರವಾಗಿ ಒಂಟಿಯಾಗಿ ಸೆರೆಮನೆಯಲ್ಲಿ ಇರಿಸಲಾಗಿದೆ ಎಂಬ ನೆಪದಿಂದ ಮರಣದಂಡನೆಯನ್ನು ರದ್ದುಗೊಳಿಸಿತು.

ಮೂಲಗಳ ಪ್ರಕಾರ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸುಮಾರು 26 ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೈದಿಗಳಿದ್ದಾರೆ. ಮರಣದಂಡನೆ ಶಿಕ್ಷೆಗೆ ಗುರಿಯಾಗದ ಕಾರಣ ರೆಡ್ಡಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

 

ಇದನ್ನು ಓದಿ: Rashmika Mandanna: ‘ ಈ ವ್ಯಕ್ತಿಯ ಗುಣ ತುಂಬಾ ಇಷ್ಟ, ದೇವರು ಇವರನ್ನು ತುಂಬಾ ಟೈಮ್ ತೊಗೊಂಡು ಮಾಡಿದ್ದಾನೆ ’ ; ರಶ್ಮಿಕಾ ಮಂದಣ್ಣ ಹಾಡಿ ಹೊಗಳಿದ ನಟ ಯಾರು?!

Leave A Reply

Your email address will not be published.