Uttar pradesh: ಯುವತಿಯ ಲಿಂಗ ಬದಲಿಸುತ್ತೇನೆಂದ ಮಂತ್ರವಾದಿ, ಆಕೆಯ ಕತ್ತನೇ ಸೀಳಿಬಿಟ್ಟ !! ಇದರ ಹಿಂದಿದೆ ‘ಪ್ರೀತಿ-ಪ್ರಿಯಾಳ’ ಕರುಣಾಜನಕ ಸಲಿಂಗ ಕಥೆ !!

Uttar pradesh sorcerer tried to change the gender of the young woman

Uttar pradesh: ಇತ್ತೀಚಿನ ದಿನಗಳಲ್ಲಿ ವಾಮಾಚಾರಿಗಳ ಹಾವಳಿ, ಅವರಿಂದಾಗುವ ತೊಂದರೆಗಳು ವಿಪರೀತವಾಗುತ್ತಿವೆ. ಇದರಿಂತ ಅನೇಕರು ಅವರನ್ನು ನಂಬಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ಥಿದ್ದಾರೆ. ಅಂತೆಯೇ ಇದೀಗ ಅಂತದೇ ಒಂದು ಪ್ರಕರಣ ಉತ್ತರ ಪ್ರದೇಶದಲ್ಲಿ(Uttar pradesh) ನಡೆದಿದ್ದು, ಓದುಗರನ್ನು ಬೆಚ್ಚಿಬೀಳಿಸುವುದಲ್ಲದೆ, ಮರುಕುವನ್ನೂ ಹುಟ್ಟಿಸುತ್ತದೆ. ಯಾಕೆಂದರೆ ಅದರ ಹಿಂದೆ ಒಂದು ಸಲಿಂಗಿಯ ಪ್ರೇಮಕಥೆಯೂ ಅಡಗಿದೆ. ಹಾಗಾದರೆ ಏನು ಈ ಪ್ರಕರಣ?

ಹೌದು, ಉತ್ತರ ಪ್ರದೇಶದಲೊಂದೆಡೆ ಪ್ರೇಮ ವಿಚಾರಕ್ಕಾಗಿ ಲಿಂಗ ಪರಿವರ್ತನೆ (Gender Change) ಮಾಡಿಕೊಡುತ್ತೇನೆ ಎಂದು ಹೇಳಿ 30ವರ್ಷದ ಯುವತಿಯನ್ನು ನಂಬಿಸಿದ ಮಾಂತ್ರಿಕ, ಆಕೆಯನ್ನು ನದಿ ದಡದ ಮೇಲೆ ಅಂಗಾತ ಮಲಗಿಸಿ ಕತ್ತು ಕೊಯ್ದು ಕೊಂದಿದ್ದಾನೆ (Woman Killed by a Tantrik). ಮಂತ್ರವಾದಿ ಈ ಕ್ರೂರ ಹತ್ಯೆಯ ಹಿಂದೆ ಒಂದು ಸಲಿಂಗಿ ಪ್ರೇಮ ದುರಂತದಲ್ಲಿ ಕೊನೆಗೊಂಡಿದೆ. ಸದ್ಯ ಮಂತ್ರವಾದಿ ಪೋಲೀಸರ ಅತಿಥಿಯಾಗಿದ್ದಾನೆ.

ಅಂದಹಾಗೆ, ಉತ್ತರ ಪ್ರದೇಶ ನಿವಾಸಿಯಾದ ಪ್ರಿಯಾ (priya-30) ಹುಡುಗಿಗೂ ಮತ್ತು ಪ್ರೀತಿ (preeti-24) ಹುಡುಗಿಗೂ ಸ್ನೇಹ ಬೆಳೆದು, ಅದು ಪ್ರೀತಿಯಾಗಿ ಬದಲಾಯಿತು. ಸಲಿಂಗಿ ಜೋಡಿಯಾಗಿದ್ದ ಪ್ರೀತಿ-ಪ್ರಿಯಾ ಒಂದಷ್ಟು ವರ್ಷ ಹೀಗೆ ಒಟ್ಟಾಗಿರುವಾಗ ಬರುಬರುತ್ತ ಇವರಿಬ್ಬರ ಪ್ರೀತಿ ವಿಷಯ ಊರಲ್ಲೆಲ್ಲ ಗೊತ್ತಾಯಿತು. ಪ್ರಿಯಾಗೆ ತಾನೊಬ್ಬ ಸಲಿಂಗಿ ಎಂಬುದು ಗೊತ್ತಾಗಿತ್ತು. ಆದರೆ ಪ್ರೀತಿ ಹಾಗಿರಲಿಲ್ಲ. ಅವಳ ಮನೆಯಲ್ಲಿ ಮದುವೆ ಮಾಡಲು ಯತ್ನಿಸುತ್ತಿದ್ದರು. ಆಕೆಯೂ ಮದುವೆಯಾಗಲು ಒಪ್ಪಿಗೆ ಕೊಟ್ಟಿದ್ದಳು. ಆದರೆ ಇವಳ ಮತ್ತು ಪ್ರಿಯಾ ನಡುವಿನ ಸ್ನೇಹ ಊರ ಸುದ್ದಿಯಾಗಿದ್ದರಿಂದ ಏನೇ ಮಾಡಿದರೂ ಪ್ರೀತಿಗೆ ಮದುವೆಯಾಗುತ್ತಿರಲಿಲ್ಲ. ಈ ಮಧ್ಯೆ ಪ್ರಿಯಾ ತಾನೇ ಪ್ರೀತಿಗಾಗಿ ಹುಡುಗನಾಗಿ ಬದಲಾಗಲೂ ನಿರ್ಧಾರ ಮಾಡಿದ್ದಳು. ಲಿಂಗ ಬದಲಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಳು. ಇದೇ ಆಕೆಯ ಜೀವನಕ್ಕೆ ಸಂಚಕಾರವಾಗಿ ಪರಿಣಮಿಸಿತು.

ಇನ್ನು ಇತ್ತ ಕಡೆ, ಮಗಳ ಸಲಿಂಗ ಅವತಾರದಿಂದ ರೋಸಿ ಹೋಗಿದ್ದ ಪ್ರೀತಿಯ ತಾಯಿ, ಹೇಗಾದರೂ ಇದನ್ನು ಬಗೆಹರಿಸಬೇಕೆಂದು, ತನ್ನ ಮಗಳನ್ನು ಬಚಾವ್ ಮಾಡಬೇಕೆಂದು ಒಬ್ಬ ಮಾಟಗಾರನ ಭೇಟಿಗೆ ಹೊರಟಳು. ಜತೆಗೆ ಪ್ರೀತಿಯನ್ನೂ ಕರೆದುಕೊಂಡೇ ಮಾಂತ್ರಿಕ ಬಳಿ ಹೋಗಿ ಇರುವ ವಿಷಯವನ್ನು ತಿಳಿಸಿದರು. ಹಾಗೇ ಎಲ್ಲರೂ ಸೇರಿ ಪ್ರಿಯಾಳನ್ನು ಕೊಂದು ಬಿಡಬೇಕು ಎಂಬ ಯೋಜನೆ ರೂಪಿಸಿದರು. ಪ್ರಿಯಾ ಹುಡುಗನಾಗಿ ಬದಲಾಗಲು ನಿರ್ಧರಿಸಿದ್ದನ್ನು ಪ್ರೀತಿ ಮಾಂತ್ರಿಕನ ಬಳಿ ಹೇಳಿದಳು. ನಾವು ಹೇಳಿದಂತೆ ಕೆಲಸ ಮಾಡಿಕೊಟ್ಟರೆ ಲಕ್ಷಾಂತರ ರೂಪಾಯಿ ಕೊಡುವುದಾಗಿ ಪ್ರೀತಿಯ ತಾಯಿ ಆ ಮಾಂತ್ರಿಕನಿಗೆ ಹೇಳಿದರು.

ಕೊನೆಗೆ ಹಣದ ಆಸೆಗೆ ಬಿದ್ದ ಮಾಂತ್ರಿಕ ಒಂದು ಭರ್ಜರಿ ಉಪಾಯ ಮಾಡಿದ. ಪ್ರಿಯಾಳನ್ನು ಲಿಂಗ ಬದಲಿಸಿಕೊಡುತ್ತೇವೆ ಎಂದು ಹೇಳಿ ಕರೆದುಕೊಂಡು ನನ್ನ ಬಳಿ ಕರೆದುಕೊಂಡು ಬನ್ನಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಇನ್ನು ಪ್ರೀತಿಗಾಗಿ ತಾನು ಹುಡುಗನಾಗಿ ಬದಲಾಗಲು ನಿರ್ಧರಿಸಿದ್ದ ಪ್ರಿಯಾ ಹರಕೆ ಕುರಿಯಂತೆ ಆ ಆತಿ-ಮಗಳ ಬೆನ್ನ ಹಿಂದೆ ಹೊರಟು ಬಂದು ಕ್ರೂರ ಮಾಂತ್ರಿಕನ ಬಳಿ ಸೇರಿದ್ದಳು. ಹೀಗೆ ಬಂದ ಪ್ರಿಯಾ ಮಾರನೆ ದಿನ ಹೆಣವಾಗಿದ್ದಳು. ಅನ್ಯಾಯವಾಗಿ ತನ್ನ ಪ್ರಾಣವನ್ನು ತನ್ನ ರತಿಗಾಗಿ ಅರ್ಪಿಸಿದ್ದಳು. ಎರಡು ದಿನವಾದರೂ ಪ್ರಿಯಾ ಕಾಣಿಸದಾಗ ಆಕೆಯ ಮನೆಯವರು ಪೊಲೀಸರು ದೂರು ಕೊಟ್ಟಿದ್ದರು.

ತನಿಖೆ ಶುರು ಮಾಡಿದ ಪೊಲೀಸರಿಗೆ ಮೊದಮೊದಲು ಏನೂ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಪ್ರೀತಿ-ಪ್ರಿಯಳ ವಿಚಾರ ತಿಳಿದು, ಪ್ರೀತಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಆಕೆ ಮಾಂತ್ರಿಕನ ಬಗ್ಗೆ ತಿಳಿಸಿದ್ದಾರೆ. ಮಾಂತ್ರಿಕನನ್ನು ಹಿಡಿದು ವಿಚಾರಣೆ ಮಾಡಿದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ. ಲಿಂಗ ಬದಲಿಸಿಕೊಡುತ್ತೇನೆ ಎಂದು ಹೇಳಿ ನದಿ ದಡಕ್ಕೆ ಕರೆದುಕೊಂಡು ಹೋದೆ. ಕಣ್ಮುಚ್ಚಿಕೊಂಡು ಅಂಗಾತ ಮಲಗುವಂತೆ ಹೇಳಿದೆ. ಆಕೆ ಹಾಗೇ ಮಾಡಿದಳು. ಬಳಿಕ ನಾನು ಅವಳ ಕತ್ತು ಕೊಯ್ದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಪ್ರೀತಿ ಮತ್ತು ಮಾಂತ್ರಿಕ ಇಬ್ಬರ ವಿಚಾರಣೆಯನ್ನೂ ಪೊಲೀಸರು ಮುಂದುವರಿಸಿದ್ದಾರೆ. ಪ್ರಿಯಾಳು ತನ್ನ ಪ್ರೀತಿಗಾಗಿ ಲಿಂಗವನ್ನೇ ಬದಲಿಸ ಹೊರಟರೆ, ಪ್ರೀತಿ ಆಕೆಯ ಪ್ರಾಣವನ್ನೇ ತೆಗೆದಿದ್ದಾಳೆ.

Leave A Reply

Your email address will not be published.