Rashmika Mandanna: ‘ ಈ ವ್ಯಕ್ತಿಯ ಗುಣ ತುಂಬಾ ಇಷ್ಟ, ದೇವರು ಇವರನ್ನು ತುಂಬಾ ಟೈಮ್ ತೊಗೊಂಡು ಮಾಡಿದ್ದಾನೆ ’ ; ರಶ್ಮಿಕಾ ಮಂದಣ್ಣ ಹಾಡಿ ಹೊಗಳಿದ ನಟ ಯಾರು?!

Who is the actor that Rashmika Mandanna sang and praised

Rashmika Mandanna: ಕಿರಿಕ್ ಪಾರ್ಟಿ (Kirik Karty) ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ (Rashmika Mandanna) ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು. ‘ಗೀತ ಗೋವಿಂದಂ’ (Githa Govindam) , ‘ಪುಷ್ಪಾ’ (Pushpa) ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್ ಕ್ರಶ್ ಎಂದೇ ಫೇಮಸ್ ಆಗಿದ್ದಾರೆ. ಸದ್ಯ ರಶ್ಮಿಕಾ ಸಾಲು ಸಾಲು ಸಿನಿಮಾಗಳ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ರಣಬೀರ್‌ ಕಪೂರ್‌ ಜೊತೆಗೆ ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಅನಿಮಲ್‌ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ನಟನ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಾರು ಆ ನಟ?!

ಬೇರಾರೂ ಅಲ್ಲ, ರಶ್ಮಿಕಾ ಮಂದಣ್ಣ ಪೋಸ್ಟ್‌ನಲ್ಲಿ ನಟ ರಣಬೀರ್ ಕಪೂರ್ ಅವರನ್ನು ಹೊಗಳಿದ್ದಾರೆ. ಇವರಿಬ್ಬರೂ ಅನಿಮಲ್‌ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಚಿತ್ರೀಕರಣದ ಆರಂಭದ ದಿನಗಳಲ್ಲಿ ರಣಬೀರ್‌ ಬಗ್ಗೆ ತನಗಿದ್ದ ಭಾವನೆಗಳನ್ನು ನಟಿ ರಶ್ಮಿಕಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ಆರಂಭದಲ್ಲಿ ರಣಬೀರ್‌ ಅವರನ್ನು ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ. ಆದರೆ, ಅನಿಮಲ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ರಣಬೀರ್ ಗುಣ ತುಂಬಾ ಇಷ್ಟವಾಯಿತು. ಅವರೊಬ್ಬ ಅದ್ಭುತ ನಟ ಮತ್ತು ಅದ್ಭುತ ಮನುಷ್ಯ. ದೇವರು ರಣಬೀರ್‌ನನ್ನು ತುಂಬಾ ಟೈಮ್ ತೊಗೊಂಡು ಪರಿಪೂರ್ಣರನ್ನಾಗಿ ಮಾಡಲು ಮಾಡಿದ್ದಾರೆ. ರಣ್ಬೀರ್ ಸುಂದರ ವ್ಯಕ್ತಿ ಎಂದು ರಶ್ಮಿಕಾ ಹಾಡಿ ಹೊಗಳಿದ್ದಾರೆ.

ಅಲ್ಲದೆ, ಅನಿಮಲ್‌ ಸಿನಿಮಾ ತಂಡವನ್ನು ರಶ್ಮಿಕಾ ಕೊಂಡಾಡಿದ್ದಾರೆ.
ಆಫರ್ ಬಂದಾಗ ತುಂಬಾ ಆಶ್ಚರ್ಯ ಆಗಿತ್ತು. ತಂಡದೊಂದಿಗೆ ಕೆಲಸ ಮಾಡಿದ್ದು ನನಗೆ ತುಂಬಾ ಖುಷಿಕೊಟ್ಟಿದೆ. ಸುಮಾರು 50 ದಿನಗಳವರೆಗೆ ಚಿತ್ರೀಕರಣದಲ್ಲಿ ತೊಡಗಿದ್ದೆನು. ಈಗ ಚಿತ್ರೀಕರಣ ಮುಗಿದಿದೆ. ಇಡೀ ಚಿತ್ರತಂಡವನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಸೆಟ್‌ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ತುಂಬಾ ವೃತ್ತಿಪರರು, ಸಹೃದಯರು. ಅನಿಮಲ್ ತಂಡದೊಂದಿಗೆ
ಇನ್ನೂ 1000 ಬಾರಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಅವರೊಂದಿಗೆ ಕೆಲಸ ಮಾಡಲು ತುಂಬಾ ಇಷ್ಟ ಎಂದು ಹೇಳಿದರು.

ಅನಿಮಲ್ (Animal) ಸಿನಿಮಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ‘ಅನಿಮಲ್​’ ಸಿನಿಮಾದಲ್ಲಿ ರಣಬೀರ್ ಕಪೂರ್​ (Ranbir Kapoor) ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಹಿಂದಿ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗಿನಲ್ಲಿ ‘ಅನಿಮಲ್​’ ಬಿಡುಗಡೆ ಆಗಲಿದೆ. ಈ ಚಿತ್ರದಿಂದ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಗೆಲುವು ಸಿಗುವ ನಿರೀಕ್ಷೆ ಇದೆ.

 

ಇದನ್ನು ಓದಿ: Chandraprabha: ಆಧಾರ ಕಾರ್ಡ್ ಬದಲಿಸಿ, ಹುಡುಗಿಗೆ ವಂಚಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ!! ಕೊನೆಗೂ ಹೊರಬಿತ್ತು ಸತ್ಯ !!

Leave A Reply

Your email address will not be published.