Ram Charan-Upasana: ಮೆಗಾ ಪ್ರಿನ್ಸೆಸ್‌ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ನುಡಿದ ಭವಿಷ್ಯವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ

Latest cinema news astrologer Venus Swami says about Rama Charan and Upasana daughter horoscope

Ram Charan-Upasana: ವೇಣು ಸ್ವಾಮಿ ಖ್ಯಾತ ಸೆಲೆಬ್ರಿಟಿಗಳ ಮದುವೆ, ವಿಚ್ಛೇದನಗಳ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿಯ ಬಗ್ಗೆ ಗೊತ್ತಿರಬಹುದು. ಇತ್ತೀಚೆಗೆ ರಾಮ್‌ಚರಣ್‌ ಹಾಗೂ ಉಪಾಸನಾ(Ram Charan-Upasana) ದಂಪತಿಗಳಿಗೆ ಮಗಳು ಜನಿಸಿದ್ದು, ಈಗ ಈ ಜ್ಯೋತಿಷಿ ಮೆಗಾಸ್ಟಾರ್‌ ಮೊಮ್ಮಗಳ ಬಗ್ಗೆ ಆಕೆಯ ಜನನದ ಪ್ರಕಾರ ಭವಿಷ್ಯ ನುಡಿದಿದ್ದು, ಇದರ ವೀಡಿಯೋ ವೈರಲ್‌ ಆಗಿದೆ.

ಅಂದ ಹಾಗೆ ವೇಣು ಸ್ವಾಮಿ ಅವರು ಸೆಲೆಬ್ರಿಟಿಗಳ ಬಗ್ಗೆ ಹೇಳಿದ ಹಲವು ವಿಷಯ ನಿಜವಾಗಿದೆ. ಹಾಗೆನೇ ರಾಮ್‌ಚರಣ್‌ ಮಗಳ ಬಗ್ಗೆ ಈಗ ಭವಿಷ್ಯ ನುಡಿದಿದ್ದು, ರಾಮ್‌ಚರಣ್‌ ಮಗಳ ಭವಿಷ್ಯ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಆಕೆಯ ಜನನದ ಸಮಯ ಅದ್ಭುತವಾಗಿದ್ದು, ಜಾತಕದಲ್ಲಿ ರಾಜಯೋಗವಿದೆ ಎಂದು ಹೇಳಿದ್ದಾರೆ. ರಾಮ್‌ಚರಣ್‌, ಉಪಾಸನಾ ದಂಪತಿಯ ಮಗಳ ಜನನ ಬೆಳಗಿನ ಜಾವ 1.46 ಮಂಗಳವಾರ ವಾಗಿದ್ದು, ಪುನರ್ವಸು ನಕ್ಷತ್ರ, ಮಿಥುನ ರಾಶಿ. ಕೊನಿಡೇಲ ವಂಶಕ್ಕೆ ರಾಜಯೋಗ ಬರಲಿದೆ ಎಂದು ರಾಜಸ್ವಾಮಿ ಪಾಸಿಟಿವ್‌ ಆಗಿ ಹೇಳಿದ್ದಾರೆ.

ಈ ಪುಟ್ಟ ಪೋರಿ ತನ್ನ ತಾತ, ತಂದೆಯನ್ನು ಮೀರಿಸುವಂತ ಒಳ್ಳೆಯ ಹೆಸರು ತರುತ್ತಾಳೆ ಎಂದು ಹೇಳಿದ್ದಾರೆ. ಈ ಮಗುವಿನ ಜಾತಕದಲ್ಲಿ ಸಣ್ಣಪುಟ್ಟ ದೋಷಗಳೆಂದರೆ ಮಗುವಿಗೆ ಹಲ್ಲು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ರಾಮ್‌ಚರಣ್‌ ಉಪಾಸನಾ ದಂಪತಿಗಳಿಗೆ ಮದುವೆಯಾಗಿ 11ವರ್ಷಗಳ ಬಳಿಕ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಹಾಗಾಗಿ ಮೆಗಾಸ್ಟಾರ್‌ ಕುಟುಂಬದಲ್ಲಿ ಸಂಭ್ರಮಾಚಾರಣೆ ಹೆಚ್ಚಿದೆ.

ಇದನ್ನೂ ಓದಿ: Nagatihalli chandrashekar: ಸರಿಯಾಗಿ ಕನ್ನಡ ಬಳಸಿ ಎಂದು ನವರಸ ನಾಯಕನಿಗೆ ಕನ್ನಡ ಪಾಠ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ !! ಅಷ್ಟಕ್ಕೂ ಜಗ್ಗೇಶ್ ಮಾಡಿದ ತಪ್ಪೇನು?

Leave A Reply

Your email address will not be published.