Gundlupete: ಯುವತಿ ಪಕ್ಕ ಕೂತಿದ್ದಕ್ಕೆ ಅಮಾಯಕನ ಮೇಲೆ ಹಲ್ಲೆ!! ನಾಲ್ವರು ಪೋಲೀಸ್ ವಶಕ್ಕೆ

Latest Karnataka crime news a man was assaulted by five people for sitting beside of female students at gundlupet

Gundlupete: ಬಸ್ ನಿಲ್ದಾಣದಲ್ಲಿ(Bus stand) ಕಾಲಿ ಯುವತಿಯೊಬ್ಬಳ ಬಳಿ ನಿಂತಿದ್ದಾಕ್ಕಾಗಿ ಆಕ್ರೋಶಗೊಂಡ ಹುಡುಗರ ದಂಡು ವ್ಯಕ್ತಿಯೊಬ್ಬನ ಬಟ್ಟೆಹರಿದು, ಚಪ್ಪಲಿ ಸೇವೆ ಮಾಡಿ ಹಲ್ಲೆ ನಡೆಸಿದ ಪ್ರಸಂಗ ಗುಂಡ್ಲುಪೇಟೆ(Gundlupete) ತಾಲೂಕಿನ ಹಂಗಳದಲ್ಲಿ ನಡೆದಿದೆ.

 

ಹೌದು, ಮಂಗಲ ಗ್ರಾಮದ ನಾಗೇಶ್‌(Nagesh) ಮತ್ತು ಅವರ ತಾಯಿಗೆ ಹುಷಾರಿಲ್ಲದ ಕಾರಣ ತಾಲೂಕಿನ ಹಂಗಳ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಮಂಗಳವಾರ ಮಧ್ಯಾಹ್ನ ಬಂದು ಚಿಕಿತ್ಸೆ ಪಡೆದ ಬಳಿಕ ಮಂಗಲದ(Mangala) ಬಸ್‌ಗೆ ಹೋಗಲು ಹಂಗಳ(Hangala) ಬಸ್‌ ನಿಲ್ಲುವ ಸ್ಥಳಕ್ಕೆ ಬಂದು ನಿಂತಿದ್ದಾರೆ. ನಾಗೇಶ್‌ ಮತ್ತು ಅವರ ತಾಯಿ ಬಸ್‌ ಹತ್ತಲು ನಿಂತ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾಗೇಶ್‌ ಪಕ್ಕ ನಿಂತಿದ್ದನ್ನು ಸಹಿಸದ ಹುಡುಗರು ರೊಚ್ಚಿಗೆದ್ದು, ನಾಗೇಶ್‌ನ ಬಟ್ಟೆಹರಿದು ಹಲ್ಲೆ ನಡೆಸಿದ್ದಾರೆ.

 

ಬಂಡೀಪುರ ಸಮೀಪದ ಮಂಗಲ ಗ್ರಾಮದ ನಾಗೇಶ್‌ ಹಲ್ಲೆಗೊಳಗಾದವರಾಗಿದ್ದು, ಗಾಯಗೊಂಡ ನಾಗೇಶ್‌ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್‌, ಗೋಪಾಲ, ತೇಜು ಸೇರಿದಂತೆ ಇತರರ ಮೇಲೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು(Police) ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗಲಿದೆ ನಂದಿನಿ ಉತ್ಪನ್ನಗಳು!

Leave A Reply

Your email address will not be published.