Nandini Products: ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗಲಿದೆ ನಂದಿನಿ ಉತ್ಪನ್ನಗಳು!

Latest Karnataka news Nandini milk products likely to be sold in Indira Canteens

Nandini Products: ಸಿಎಂ ಸಿದ್ದರಾಮಯ್ಯ(Siddaramaiah) ಅವರು ಸಿಎಂ ಆದ ಮೇಲೆ ತಮ್ಮ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್‌ (Indira Canteen)ಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಇಂದಿರಾ ಕ್ಯಾಂಟೀನ್‌ ಮೆನು ಬಿಡುಗಡೆ ಮಾಡಿದ್ದು, ಇದೀಗ ನಂದಿನಿ ಉತ್ಪನ್ನಗಳನ್ನೂ ಕೂಡಾ (Nandini Products) ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲು ತಯಾರಿ ನಡೆಸಿದೆ ಎನ್ನಲಾಗಿದೆ.

ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಹಲವಾರು ವಿಧದ ಊಟ, ತಿಂಡಿಯ ಜೊತೆಗೆ ನಂದಿನಿ ಉತ್ಪನ್ನಗಳು ದೊರಕುವ ಭಾಗ್ಯ ಗ್ರಾಹಕರಿಗೆ ಅತೀ ಶೀಘ್ರದಲ್ಲೇ ಲಭ್ಯವಾಗಲಿದೆ. ಈ ಕುರಿತು ಚಿಂತನೆ ನಡೆಸಲಾಗಿದೆ. ಜೊತೆಗೆ ಇಂದಿರಾ ಕ್ಯಾಂಟೀನ್‌ ಹೈಟೆಕ್‌ ರೂಪ ಪಡೆಯಲಿದೆ.

ನಿನ್ನೆಯಷ್ಟೇ ಕೆಎಂಎಫ್‌ ಅಧ್ಯಕ್ಷರಾಗಿ ಭೀಮಾ ನಾಯ್ಕ್‌ ಅವರು ಚುನಾಯಿತರಾಗಿದ್ದು, ಸಿಎಂ ಅವರ ಜೊತೆ ಈ ರೀತಿಯ ಚಿಂತನೆ ನಡೆಸಲು ಮುಂದಾಗಿದ್ದಾರೆ. ಹಾಗಾದರೆ ಇದೇನಾದರೂ ಜಾರಿಗೆ ಬಂದರೆ ಗ್ರಾಹಕರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ಜೊತೆ ನಂದಿನಿ ಐಸ್‌ಕ್ರೀಂ, ಚಾಕಲೇಟ್‌, ಬಿಸ್ಕೆಟ್‌, ಹಾಲು, ಮೊಸರು, ತುಪ್ಪ ಕೂಡಾ ದೊರಕುವ ದಿನಗಳು ದೂರ ಇಲ್ಲ. ಈ ಬಗ್ಗೆ ಕೆಎಂಎಫ್‌ ಹಾಗೂ ರಾಜ್ಯ ಸರಕಾರ ಮಹತ್ವದ ಚಿಂತನೆ ನಡೆಸಿದೆ.

ಇದನ್ನೂ ಓದಿ: ನೀರಿನಲ್ಲಿ ಮುಳುಗಿ ಸತ್ತಿದ್ದಾಳೆಂದು ಭಾವಿಸಿದ ಹುಡುಗಿ, ಶವಪರೀಕ್ಷೆ ಸಂದರ್ಭ ಕಣ್ಣು ತೆರೆದಳು!

Leave A Reply

Your email address will not be published.