Uttar Pradesh: ನೀರಿನಲ್ಲಿ ಮುಳುಗಿ ಸತ್ತಿದ್ದಾಳೆಂದು ಭಾವಿಸಿದ ಹುಡುಗಿ, ಶವಪರೀಕ್ಷೆ ಸಂದರ್ಭ ಕಣ್ಣು ತೆರೆದಳು!

Latest national news Dead' girl on way to post-mortem springs to life in Uttar Pradesh

Uttar Pradesh: ಸಾವು ನಿಶ್ಚಿತ ಎನ್ನುವ ಮಾತೊಂದು ಇದೆ. ಆದರೆ ಸಾವು ಆಗಿದೆ ಎಂದು ಶವಪರೀಕ್ಷೆಗೆ ಕರೆದುಕೊಂಡು ಹೋದಾಗ ಮನುಷ್ಯ ಜೀವಂತವಾಗಿರುವ ಎಷ್ಟೋ ಘಟನೆಯನ್ನು ನೀವು ಕೇಳಿರಬಹುದು. ಇಂಥಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಲಕಿಯೋರ್ವಳು ನೀರಿನಿಲ್ಲಿ ಮುಳುಗಿ ಸತ್ತಿದ್ದಾಳೆಂದು ಭಾವಿಸಿದ ಪೊಲೀಸರು, ಆಕೆಯನ್ನು ಶವಪರೀಕ್ಷೆಗೆ ಕರೆದುಕೊಂಡು ಹೋದ ಸಮಯದಲ್ಲಿ ಹೃದಯ ಬಡಿತ ಕೇಳಿಸಿಕೊಂಡಿರುವ ಘಟನೆ ನಡೆದಿದೆ (Uttar Pradesh). ಈ ಬಾಲಕಿಯ ಹೆಸರೇ ರವೀನಾ.

ಘಟನೆ ವಿವರ:
ಬಾಲಕಿಯೋರ್ವಳು ಕಾಲುವೆಗೆ ಬಿದ್ದು ಸತ್ತಿದ್ದಾಳೆ ಎಂದು ಭಾವಿಸಿ ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರು ರೆಡಿಯಾದಾಗ, ಮನೆಯವರು ಮೊದಲು ವೈದ್ಯರಿಗೆ ತೋರಿಸುವ ಎಂದಿದ್ದಾರೆ. ಹಾಗಾಗಿ ಪೊಲೀಸರು ಬಾಲಕಿಯನ್ನು ವೈದ್ಯರ ಬಳಿಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಪರೀಕ್ಷಿಸುವಾಗ ಆಕೆಯ ಹೃದಯ ಬಡಿತ ಕೆಲಸ ಮಾಡುತ್ತಿರುವುದಾಗಿ ಕಂಡು ಬಂದಿದೆ. ಕೂಡಲೇ ಪೊಲೀಸರು ಬಾಲಕಿಯ ಮನೆಮಂದಿಗೆ ಕರೆ ಮಾಡಿದ್ದಾರೆ

ಬಾಲಕಿ ಕಾಲುವೆಗೆ ಬಿದ್ದು ಪ್ರಜ್ಞಾಹೀನಳಾಗಿದ್ದು, ಆದರೆ ಪೊಲೀಸರು ಆಕೆ ಸತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಮರಣೋತ್ತರ ಪರೀಕ್ಷೆಗೆ ಕಳಿಸುವ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಆದರೆ ಬಾಲಕಿಯ ಸಂಬಂಧಿಕರು ಮೊದಲು ವೈದ್ಯರಿಗೆ ತೋರಿಸುವುದಾಗಿ ಹೇಳಿದ್ದಾರೆ. ಸಂಬಂಧಿಕರ ಒತ್ತಾಯ ಹೆಚ್ಚಾಗಿದ್ದರಿಂದ ಪೊಲೀಸರು ಪತೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ವೈದ್ಯರು ಪರಿಶೀಲಿಸಿದಾಗ ಆಕೆಯ ಹೃದಯ ಬಡಿತ ಇದ್ದು, ಚಿಕಿತ್ಸೆ ಪ್ರಾರಂಭಿಸಿದ ನಂತರ ಬಾಲಕಿ ಕಣ್ಣು ಬಿಟ್ಟಿದ್ದಾಳೆ. ಬಾಲಕಿ ನುಂಗಿದ ನೀರನ್ನು ಹೊರತೆಗೆದು, ಆಕೆಯನ್ನು ಆಕೆಯ ಮನೆಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: Ram Charan-Upasana: ಮೆಗಾ ಪ್ರಿನ್ಸೆಸ್‌ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ನುಡಿದ ಭವಿಷ್ಯವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ

Leave A Reply

Your email address will not be published.