Nagatihalli chandrashekar: ಸರಿಯಾಗಿ ಕನ್ನಡ ಬಳಸಿ ಎಂದು ನವರಸ ನಾಯಕನಿಗೆ ಕನ್ನಡ ಪಾಠ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ !! ಅಷ್ಟಕ್ಕೂ ಜಗ್ಗೇಶ್ ಮಾಡಿದ ತಪ್ಪೇನು?

Latest Sandalwood News Kannada lesson to actor jaggesh by nagathihalli Chandrashekar

Nagatihalli chandrashekar: ಚಂದನವನದ ಮೇರು ನಟರಲ್ಲೊಬ್ಬ, ರಾಜಕಾರಣಿ ನವರಸ ನಾಯಕ, ನಟ ಜಗ್ಗೇಶ್(Jaggesh) ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಅದರಲ್ಲೂ ರಾಜಕೀಯಕ್ಕೆ(Political) ಎಂಟ್ರಿ ಆದ ಬಳಿಕ ತುಸು ಹೆಚ್ಚು ಎನ್ನಬಹುದು. ಅಂತೆಯೇ ಅವರು ಇತ್ತೀಚೆಗೆ ತಮ್ಮ ಕಾಲಿಗೆ ಪೆಟ್ಟಾದ ಬಗ್ಗೆಯೂ ಹೇಳಿಕೊಂಡಿದ್ದರು. ಈ ಪೋಸ್ಟ್ ನೋಡಿದ ಬಳಿಕ ಕನ್ನಡದ ಹಿರಿಯ ನಿರ್ದೇಶಕರೊಬ್ಬರು ನಟ ಜಗ್ಗೇಶ್ ಗೆ ಕನ್ನಡ ಪಾಠ ಮಾಡಿದ್ದಾರೆ.

ಹೌದು, ಹಿರಿಯ ನಟ ಜಗ್ಗೇಶ್ (Jaggesh) ಕಾಲು ಮುರಿದುಕೊಂಡಿರುವ ವಿಷಯವನ್ನು ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆದುಕೊಂಡಿದ್ದ ಫೋಟೋವನ್ನು ಶೇರ್ ಮಾಡಿದ್ದ ಅವರು, ‘ಸಣ್ಣ ಅಚಾತುರ್ಯ ನಡಿಗೆಯಿಂದಾಗಿ ಕಾಲು ಮುರಿದುಕೊಂಡಿದ್ದೇನೆ (Fractured leg). ಪಾದದ ಮೂಳೆ ಮುರಿದಿದೆ. ಆರು ವಾರಗಳ ಕಾಲ ‘ದಿಘ್ಬಂಧನ’ ನಡಿಗೆಗೆ ಎಂದು ಬರೆದುಕೊಂಡಿದ್ದರು. ಆದರೆ ಈ ಪೋಸ್ಟ್ ನೋಡಿದ ಕೂಡಲೆ ನಿರ್ದೇಶಕ, ಸಿನಿಮಾ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್(Nagatihalli chandrashekar) ಸೋಷಿಯಲ್ ಮೀಡಿಯಾದ ಮೂಲಕವೇ ಜಗ್ಗೇಶ್ ಅವರಿಗೆ ಕನ್ನಡ (Kannada) ಪಾಠ ಮಾಡಿದ್ದಾರೆ.

ಅಂದಹಾಗೆ ಜಗ್ಗೇಶ್ ಅವರು ‘ದಿಘ್ಭಂದನ’ ಅನ್ನೋ ಪದ ಬಳಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಾಗತಿಹಳ್ಳಿಯವರು ಅದು ‘ದಿಘ್ಭಂದನ’ ಅಲ್ಲ -ದಿಗ್ಬಂಧನ. ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ. ಮೂಳೆ ಮುರಿತ ಬೇಗ ಗುಣವಾಗಲಿ. ಸಕ್ಕರೆ ರೋಗವಿದ್ದಲ್ಲಿ ಹೆಚ್ಚು ಜೋಪಾನ ವಹಿಸಿ. ಶುಭವಾಗಲಿ. ಪ್ರೀತಿಯಿಂದ- ನಾಗತಿಹಳ್ಳಿ ಚಂದ್ರಶೇಖರ’ ಎಂಬುದಾಗಿ ಬರೆದಿದ್ದಾರೆ.

ಅವರು ಮಾಡಿರುವ ರಿಪ್ಲೈಗೆ ಬಹಳಷ್ಟು ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಚಿತ್ರರಂಗದಲ್ಲಿ ಮೇಷ್ಟ್ರು ಎಂದೇ ಕರೆಯಲ್ಪಡುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ಈ ಮೂಲಕ ನಿಜವಾಗಿಯೂ ಮೇಷ್ಟ್ರ ರೀತಿಯಲ್ಲಿ ಕನ್ನಡ ವ್ಯಾಕರಣದ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದ್ದಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ಸದ್ಯ ಜಗ್ಗೇಶ್ ಯಾವುದೇ ಸಿನಿಮಾ ಶೂಟಿಂಗ್ ನಲ್ಲಿ ಇರದೇ ಇರುವ ಕಾರಣದಿಂದಾಗಿ ಇವರ ಕಾಲು ಮುರಿತ ಯಾರಿಗೂ ತೊಂದರೆ ಮಾಡದು. ಆದರೂ, ವೈದ್ಯರು ಸಲಹೆಯಂತೆ ವಿಶ್ರಾಂತಿ ಪಡೆದುಕೊಳ್ಳಿ. ಬೇಗ ಕಾಲು ಗುಣಮುಖವಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ನೆಚ್ಚಿನ ನಟನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ.

ಇದನ್ನೂ ಓದಿ: ಯುವತಿಯ ಲಿಂಗ ಬದಲಿಸುತ್ತೇನೆಂದ ಮಂತ್ರವಾದಿ, ಆಕೆಯ ಕತ್ತನೇ ಸೀಳಿಬಿಟ್ಟ !! ಇದರ ಹಿಂದಿದೆ ‘ಪ್ರೀತಿ-ಪ್ರಿಯಾಳ’ ಕರುಣಾಜನಕ ಸಲಿಂಗ ಕಥೆ !!

Leave A Reply

Your email address will not be published.