Shocking Accident: ದೇವಸ್ಥಾನಕ್ಕೆಂದು ಹೊರಟ ವಾಹನ ಬೃಹತ್‌ ಕಮರಿಗೆ ಬಿದ್ದು ಅವಘಡ! 11ಮಂದಿಯಲ್ಲಿ 9ಮಂದಿ ಸಾವು! ಇಬ್ಬರು ತೀವ್ರ ಗಂಭೀರ

bolero vehicle fell into a ravine, died 9 people in the vehicle

Shocking Accident: ಬೊಲೆರೋ ವಾಹನವೊಂದು ಕಮರಿಗೆ ಬಿದ್ದ ಪರಿಣಾಮ ವಾಹನದಲ್ಲಿದ್ದ 9 ಮಂದಿ ಸಾವನ್ನಪ್ಪಿದ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದೆ. ಗಾಡಿಯಲ್ಲಿ ಒಟ್ಟು 11ಮಂದಿ ಇದ್ದು, ಇದರಲ್ಲಿ ಇಬ್ಬರು ಗಂಭೀರ ಗಾಯಗೊಂಡಿರುವ ಕುರಿತು ವರದಿಯಾಗಿದೆ. ಈ ಘಟನೆ ನಿನ್ನೆ ಬೆಳಗ್ಗೆ 7.30ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ದಿದಿಹತ್‌ ಎಸ್‌ಡಿಎಂ ಅನಿಲ್‌ ಕುಮಾರ್‌ ಶುಕ್ಲಾ ಹೇಳಿದ್ದಾರೆ.

ಮೃತರನ್ನು ದಂಪತಿಗಳಾದ ನಿಶಾ ಸಿಂಗ್ (24) ಮತ್ತು ಉಮ್ಮದ್ ಸಿಂಗ್ (28), ಕಿಶನ್ ಸಿಂಗ್ (65), ಧರ್ಮ ಸಿಂಗ್ (69), ಕುಂದನ್ ಸಿಂಗ್ (58), ಶಂಕರ್ ಸಿಂಗ್ (40), ಸುಂದರ್ ಸಿಂಗ್ (37), ಖುಶಾಲ್ ಸಿಂಗ್ (64), ಡಾನ್ ಸಿಂಗ್ ಮತ್ತು ವಾಹನ ಚಾಲಕ ಮಹೇಶ್ ಸಿಂಗ್ (40) ಎಂದು ಗುರುತಿಸಲಾಗಿದೆ. ಅವಘಡ ನಡೆದ ಘಟನೆಯ ಹಿಂದಿನ ದಿನ ಭಾರೀ ಮಳೆ ಸುರಿದಿದ್ದು, ಕಲ್ಲು ಮಣ್ಣುಗಳೆಲ್ಲ ರಸ್ತೆಗೆ ಬಿದ್ದಿದ್ದವು. ಇದು ಕೂಡಾ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ವಾಹನದಲ್ಲಿದ್ದವರೆಲ್ಲರೂ ದೇವಸ್ಥಾನಕ್ಕೆಂದು ಹೋದವರು. ವಾಹನ 600 ಮೀಟರ್‌ ಆಳದ ಕಮರಿಗೆ ಬಿದ್ದು, ಈ ದುರ್ಘಟನೆ ಸಂಭವಿಸಿದೆ. ಪಿಥೋರಗಢ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಭೂಪೇಂದ್ರ ಸಿಂಗ್‌ ಮಹಾರ್‌ ಅವರು ಹೇಳಿರುವ ಪ್ರಕಾರ, ಎಲ್ಲಾ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಗಂಭೀರ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.

 

 

Leave A Reply

Your email address will not be published.