OTT Release: ಈ ವಾರಾಂತ್ಯ ‘ಆದಿಪುರುಷ್ʼ ನೋಡಲು ಇಷ್ಟವಿಲ್ಲದಿದ್ದರೆ, OTTಯಲ್ಲಿ ರಿಲೀಸ್‌ ಆಗಿದೆ ರೋಮ್ಯಾನ್ಸ್‌, ಕಾಮಿಡಿ, ಥ್ರಿಲ್ಲರ್‌ ಚಲನಚಿತ್ರಗಳು! ಲಿಸ್ಟ್‌ ಇಲ್ಲಿದೆ

Entertainment news New movies series release Ott in june

OTT Release: ಆದಿಪುರುಷ್‌ ಸಿನಿಮಾ ನೋಡಲು ಈ ವೀಕೆಂಡ್‌ನಲ್ಲಿ ಯಾರಿಗೆ ಇಷ್ಟವಿಲ್ಲವೋ ಅವರು ನಿರಾಸೆ ಪಡಬೇಕಿಲ್ಲ. ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗ್ತಿದೆ ರೋಮ್ಯಾನ್ಸ್‌, ಕಾಮಿಡಿ, ಥ್ರಿಲ್ಲರ್‌ ಚಲನಚಿತ್ರಗಳು. ನಿಮ್ಮ ವಾರಾಂತ್ಯ ಈ ಬಾರಿ ಖುಷಿಯಿಂದ ಕಳೆಯಲಿದೆ. ಬನ್ನಿ ಹಾಗಿದ್ರೆ. ಈ ವಾರ OTT ಯಲ್ಲಿ ಯಾವ ಚಲನಚಿತ್ರ, ವೆಬ್‌ ಸರಣಿಗಳು ಬಿಡುಗಡೆಯಾಗುತ್ತಿದೆ? ತಿಳಿಯೋಣ.

ಜೂನ್‌.23ರಂದು ಸಲ್ಮಾನ್‌ ಖಾನ್‌ ಅಭಿನಯದ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಚಿತ್ರ ಬಿಡುಗಡೆಯಾಗುತ್ತಿದ್ದು, ಇದನ್ನು ಝೀ5 ನಲ್ಲಿ ನೋಡಬಹುದು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಕಮಾಯಿ ಮಾಡಿಲ್ಲ. ಈ ಚಲನಚಿತ್ರದಲ್ಲಿ ಸಲ್ಮಾನ್‌ ಖಾನ್‌, ಪೂಜಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇತ್ತೀಚೆಗಷ್ಟೇ ನವಾಜುದ್ದೀನ್‌ ಸಿದ್ದಿಕಿ ಮತ್ತು ಅವನೀತ್‌ ಕೌರ್‌ ಅಭಿನಯದ ʼಟಿಕು ವೆಡ್ಸ್‌ ಶೇರುʼ ಚಿತ್ರ OTTಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರ ಚುಂಬನದ ದೃಶ್ಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಿವಾದಗಳು ಉಂಟಾಗಿದ್ದವು. ತನ್ನ ಮಗಳ ವಯಸ್ಸಿನ ಜೊತೆ ನವಾಜುದ್ದೀನ್‌ ಸಿದ್ದಿಕಿ ಲಿಪ್‌ಲಾಕ್‌ ಮಾಡಿದ್ದು ನೆಟ್ಟಿಗರಿಗೆ ಇಷ್ಟ ಆಗಿರಲಿಲ್ಲ. ಈ ಚಿತ್ರವನ್ನು ವೀಕ್ಷಕರು ಅಮೆಜಾನ್‌ ಪ್ರೈಮ್‌ನಲ್ಲಿ ವೀಕ್ಷಿಸಬಹುದು.

ಈ ವಾರ ಅಂದರೆ ಇಂದು ‘ಕೇರಳ ಕ್ರೈಮ್ ಫೈಲ್ಸ್’ ಅನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ. ಇದೊಂದು ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್. ಇದು ಸತ್ಯ ಘಟನೆಗಳನ್ನು ಆಧರಿಸಿದೆ. ನೀವು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸರಣಿ ಬಯಸುವವರಿಗೆ ಇದು ಬೆಸ್ಟ್‌.

ಮಾರ್ವೆಲ್‌ ಸರಣಿಯ ಚಲನಚಿತ್ರ ಈ ವಾರ ಜೂನ್‌ 21ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಇದನ್ನು ನೀವು ನೋಡಬಹುದು. ಈ ಸರಣಿಯ ಹೆಸರು ʼಸೀಕ್ರೇಟ್‌ ಇನ್ವೇಷನ್‌ʼ.

ಜೂನ್‌.21ರಂದು ನೆಟ್‌ಫ್ಲಿಕ್ಸ್‌ನಲ್ಲಿ ʼಬ್ರೇಕ್‌ ಪಾಯಿಂಟ್‌ʼ ನ್ನು ವೀಕ್ಷಿಸಬಹುದು. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಅತ್ಯಂತ ಆನಂದ ಕೊಡಬಹುದು.

Leave A Reply

Your email address will not be published.