Rice price hike: ರಾಜ್ಯದ ಜನತೆಗೆ ದರ ಹೆಚ್ಚಳದ ಬರೆ ಮುಂದುವರಿಕೆ! ಅಕ್ಕಿ ದರ ಇನ್ನು ಹೆಚ್ಚಳ ಸಾಧ್ಯತೆ!

karnataka news political news Congress Government Rice price is likely to hike

Rice price hike: ಕಾಂಗ್ರೆಸ್ ಸರ್ಕಾರ(Congress Government) ಆಡಳಿತಕ್ಕೆ ಬಂದಾಗಿನಿಂದ ಒಂದೊಂದೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆ ಗಗನಕ್ಕೇರಿದೆ(Vegetable Hike Increase). ಕರೆಂಟ್ ಬಿಲ್ ಡಬಲ್ ಆಗಿದೆ. ಇದೀಗ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಮಳೆಯ ಅಭಾವದಿಂದ ಭತ್ತದ ಕೊರತೆಯ ಕಾರಣಕ್ಕೆ ಜನತೆಗೆ ಅಕ್ಕಿ ದರವನ್ನು ಸಹ ಏರಿಕೆ (Rice price hike) ಮಾಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಶನ್ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭಿಸಿದೆ.

ಕೆಜಿಗೆ 5 ರಿಂದ 10 ರೂಪಾಯಿ ಏರಿಕೆ ಮಾಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ ನಡೆಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಶನ್, ರಾಜ್ಯದಲ್ಲಿ ಕರೆಂಟ್ ಬೆಲೆ ಏರಿಕೆ ಭಾರಿ ಹೊಡೆತ ಕೊಟ್ಟಿದೆ. ಕರೆಂಟ್ ಬಿಲ್ ಹೆಚ್ಚಳದಿಂದಾಗಿ ಮಿಲ್​ಗಳಿಗೆ ಭಾರಿ ಹೊಡೆತ ಬೀಳುತ್ತಿದೆ. ಜೊತೆಗೆ ಎಪಿಎಂಸಿ ಟ್ಯಾಕ್ಸ್ ಕೂಡ ಹೊರೆಯಾಗುತ್ತಿದೆ. ಮುಂಗಾರು ಮಳೆ ಕೈಕೊಟ್ಟು ಭತ್ತ ಸಿಗುತ್ತಿಲ್ಲ. ಹೀಗಾಗಿ ಅಕ್ಕಿ ಬೆಲೆ ಏರಿಸಲು ಮುಂದಾಗಿದೆ ಎಂದು ತಿಳಿಸಿದೆ.

ವಿದ್ಯುತ್ ದರದ ಬೆನ್ನಲ್ಲೇ ನಂದಿನಿ ಹಾಲಿನ ದರ ಕೂಡ ಹೆಚ್ಚಳ ಸಾಧ್ಯತೆಯನ್ನು ಇಂದು ಕೆಎಂಎಫ್ ನೂತನ ಅಧ್ಯಕ್ಷರು ಸುಳಿವು ನೀಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಕಾರಣದಿಂದಾಗಿ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ಅಕ್ಕಿ ದರ ಏರಿಕೆಯು ಮತ್ತೊಂದು ಶಾಕ್ ಅನ್ನು ನೀಡಿದೆ.

ಸದ್ಯ ಒಂದು ಕೆಜಿ ಅಕ್ಕಿಗೆ‌ 45 ರೂಪಾಯಿ ಇದೆ. ಈಗ ವಿದ್ಯುತ್ ಬಿಲ್ ಹೆಚ್ಚಳದ ಕಾರಣದಿಂದಾಗಿ ಅಕ್ಕಿ ಬೆಲೆಯನ್ನು ರೂ.5 ರಿಂದ 10 ಹೆಚ್ಚಳ ಮಾಡುವುದು ಎಂಬುದಾಗಿ ಚಿಂತನೆ ನಡೆಸಿದ್ದಾರೆ.

Leave A Reply

Your email address will not be published.