Hubballi News: ಬಸ್‌ನಲ್ಲಿ ವೃದ್ಧೆ-ಮಹಿಳಾ ಕಂಡಕ್ಟರ್‌ ವಾದ! ವೃದ್ಧೆ ಮೇಲೆ ಕಪಾಳ ಮೋಕ್ಷ ಮಾಡಿದ ಲೇಡಿ ಕಂಡಕ್ಟರ್‌, ವೀಡಿಯೋ ವೈರಲ್‌

Lady conductor who slapped old woman video viral

Hubballi News: ಕಾಂಗ್ರೆಸ್‌ ಸರಕಾರದ ಶಕ್ತಿಯೋಜನೆ ಬಂದ ನಂತರ ಒಂದಲ್ಲ ಒಂದು ಗಲಾಟೆ ಸುದ್ದಿ ಬರ್ತಾನೆ ಇದೆ. ಅದರಲ್ಲೂ ಈ ನಿರ್ವಾಹಕ-ಚಾಲಕ ಪ್ರಯಾಣಿಕರ ಮಧ್ಯೆ ಗಲಾಟೆ ನಡೆಯುವುದು ಹೆಚ್ಚಾಗುವ ಪ್ರಕರಣಗಳು ಸುದ್ದಿಯಾಗುತ್ತಲೇ ಇದೆ. ಸಾರಿಗೆ ಇಲಾಖೆ (Karnataka Transport Dept) ಈಗಾಗಲೇ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಬಗ್ಗೆ ಅಪಹಾಸ್ಯ ಮಾಡುವುದಾಗಲಿ ಅಗೌರವದಿಂದ ಮಹಿಳೆಯರೊಂದಿಗೆ ನಡೆದುಕೊಳ್ಳುವುದಾಗಲಿ ಮಾಡಬಾರದು, ಮಾಡಿದರೆ ಅಂತಹಃ ನಿರ್ವಾಹಕ ಅಥವಾ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆ ಹೊರಡಿಸಿದೆ.

ಅಷ್ಟು ಮಾತ್ರವಲ್ಲದೇ ಈ ಬಗ್ಗೆ ಕೆಎಸ್‌ಆರ್‌ಟಿ ತಮ್ಮ ಸಿಬ್ಬಂದಿಗೆ ಎಚ್ಚರಿಕೆ ನೀಡಿದರೂ ಪದೇ ಪದೇ ಜಗಳ ನಡೆಯುತ್ತಲೇ ಇದೆ. ಇದೀಗ ಬಂದ ಸುದ್ದಿ ಏನೆಂದರೆ ಕುಂದಗೋಳದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಬಸ್‌ನಲ್ಲಿ ಕ್ಷುಲ್ಲಕ ಕಾರಣದಿಂದ ಮಾತಿಗೆ ಮಾತು ಕಂಡಕ್ಟರ್‌ ಮತ್ತು ವೃದ್ಧ ಮಹಿಳೆಯ ಮಧ್ಯೆ ನಡೆದಿದೆ. ಕೊನೆಗೆ ಸಿಟ್ಟುಗೊಂಡ ಮಹಿಳಾ ಕಂಡಕ್ಟರ್‌ ಅಜ್ಜಿಯ ಕಪಾಳಕ್ಕೆ ಹೊಡೆದಿದ್ದಾರೆ. ಅಜ್ಜಿಯ ವಯಸ್ಸಿನ ಮಹಿಳೆಯ (Hubballi News) ಮೇಲೆ ಹಲ್ಲೆ ನಡೆದಿರುವದನ್ನು ನೋಡಿದ ಬಸ್ಸಿನಲ್ಲಿದ್ದ ಪ್ರಯಾಣಿಕರು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕಪಾಳಮೋಕ್ಷದ ವೀಡಿಯೋ ವೈರಲ್‌ ಆಗಿದ್ದು, ಕಂಡಕ್ಟರ್‌ ವಿರುದ್ಧ ಆಕ್ರೋಶದ ಮಾತು ಕೇಳಿ ಬರುತ್ತಿದೆ.

Leave A Reply

Your email address will not be published.