SHOCKING NEWS: ಶುಲ್ಕ ಪಾವತಿ ವಿವಾದ; ಕೋಚಿಂಗ್ ಶಿಕ್ಷಕನ ಮೇಲೆ ಗುಂಡು ಹಾರಿಸಿ ವಿದ್ಯಾರ್ಥಿಗಳು ಎಸ್ಕೇಪ್

MadhyaPradesh Two boys shot at a teacher of a coaching institute

MadhyaPradesh: ಮಧ್ಯಪ್ರದೇಶ (MadhyaPradesh) ದಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಶಿಕ್ಷಕನ ಮೇಲೆ ಇಬ್ಬರು ಹುಡುಗರು ಗುಂಡು ಹಾರಿಸಿರುವ ಘಟನೆ ನಡೆದಿದೆ. ಶುಲ್ಕಕಟ್ಟುವ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಕನ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ಬೆಳಗ್ಗೆ 11 ಗಂಟೆಯಂದು ಮೊರೆನಾ ಜಿಲ್ಲೆಯ ಚೌರಾ ರಸ್ತೆಯಲ್ಲಿರುವ ಮೈದಾ ಫ್ಯಾಕ್ಟರಿಯ ಎದುರು ಈ ಘಟನೆ ನಡೆದಿದೆ. ಘಟನಾ ಸ್ಥಳದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ನಡೆದ ಎಲ್ಲಾ ಘಟನೆಯ ದೃಶ್ಯಾವಳಿ ಸೆರೆಯಾಗಿದೆ.

ಮಾಹಿತಿ ಪ್ರಕಾರ, ದಾಳಿ ನಡೆಸಿರುವ ದುಷ್ಕರ್ಮಿಗಳು ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಹಳೆ ವಿದ್ಯಾರ್ಥಿಯರಾಗಿದ್ದು, ಎರಡು ವರ್ಷಗಳ ಹಿಂದೆ ಇದೇ ಕೋಚಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಓದುತ್ತಿದ್ದರು. ಇವರು ಶುಲ್ಕ ಕಟ್ಟದ ಕಾರಣ ಅಲ್ಲಿನ ಶಿಕ್ಷಕ ಗಿರ್ನಾರ್ ಸಿಂಗ್ ಶುಲ್ಕ ಕಟ್ಟುವಂತೆ ಕೇಳಿದ್ದರು. ಇದರಿಂದ ಹತಾಶೆಗೊಂಡ ಮಾಜಿ ವಿದ್ಯಾರ್ಥಿಗಳು ಪ್ಲಾನ್ ಮಾಡಿ, ಚೌರಾ ರಸ್ತೆಯ ಮೈದಾ ಫ್ಯಾಕ್ಟರಿ ಬಳಿ ಇನ್‌ಸ್ಟಿಟ್ಯೂಟ್‌ನ ಶಿಕ್ಷಕನ ಮೇಲೆ ಗುಂಡು ಹಾರಿಸಿ, ಅಲ್ಲಿಂದ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ.

ಕೋಚಿಂಗ್ ಡೈರೆಕ್ಟರ್ ಆಗಿರುವ ಶಿಕ್ಷಕ ಗಿರ್ವಾರ್ ಸಿಂಗ್ ಕುಶ್ವಾಹಾ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

 

https://twitter.com/AHindinews/status/1671823954468818944/mediaviewer

Leave A Reply

Your email address will not be published.