SHOCKING NEWS: ಸಾಕುನಾಯಿಗಳನ್ನು ಮನೆಯಲ್ಲಿ‌ ಕೂಡಿಹಾಕಿ 6 ತಿಂಗಳು ಪ್ರವಾಸಕ್ಕೆ ತೆರಳಿದ ವೈದ್ಯ!

doctor mercilessly leaves pet dogs locked at home for 6 months during his canada tour

Amritsar: ಪಂಜಾಬ್‌ನ ಅಮೃತಸರದಲ್ಲಿ ವರದಿಯಾದ ಆಘಾತಕಾರಿ ಹಾಗೂ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ವೈದ್ಯರೊಬ್ಬರು ತಮ್ಮ ಮನೆಯ ಎರಡು ನಾಯಿಗಳನ್ನು ಮನೆಯಲ್ಲೇ ಕೂಡಿಹಾಕಿ 6 ತಿಂಗಳ ಕಾಲ ವಿದೇಶಿ ಪ್ರವಾಸ ಹೋಗಿದ್ದಾರೆ.

ಹೌದು, ಪಂಜಾಬ್‌ನ ಅಮೃತಸರದಲ್ಲಿ ( Amritsar) ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ ವೈದ್ಯರೊಬ್ಬರು ಕೆನಡಾ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ತಮ್ಮ ನಾಯಿಗಳನ್ನ 6 ತಿಂಗಳ ಕಾಲ ಗಮನಿಸದೇ ಹಾಗೇ ಬಿಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.

ವರದಿ ಪ್ರಕಾರ, ಅಮೃತಸರ ಮೂಲದ ವೈದ್ಯಕೀಯ ತಜ್ಞರನ್ನು ಪಿಎಸ್ ಬೇಡಿ ಎಂದು ಗುರುತಿಸಲಾಗಿದ್ದು, ಅವರು ರಂಜಿತ್ ಅವೆನ್ಯೂದ ಬ್ಲಾಕ್ ಎ ನಿವಾಸಿಯಾಗಿದ್ದಾರೆ. ಇವರು ಆರು ತಿಂಗಳ ಕಾಲ ಕೆನಡಾ ಪ್ರವಾಸದ ವೇಳೆ ಮನೆಯ ಪಾರ್ಕಿಂಗ್ ಜಾಗದಲ್ಲಿ ಸಾಕಿದ್ದ ತಮ್ಮ ಎರಡು ನಾಯಿಗಳನ್ನು ಕರುಣೆಯಿಲ್ಲದೆ ನಿರ್ದಾಕ್ಷಿಣ್ಯವಾಗಿ ಸಾಯಲು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಆದರೆ ವೈದ್ಯ ತಜ್ಞ ಪಿಎಸ್ ಬೇಡಿ ಹೇಳಿರುವ ಪ್ರಕಾರ, ನಾಯಿಗಳನ್ನು ನೋಡಿಕೊಳ್ಳಲು ಮತ್ತು ಆಹಾರ ನೀಡುವಂತೆ ತನ್ನ ಸಹೋದರನಿಗೆ ಮನೆಯ ಕೀಗಳನ್ನು ನೀಡಿದ್ದರು. ಆದರೂ ನಾಯಿಗಳಿಗೆ ಆಹಾರವನ್ನು ಆತ ನೀಡಿರಲಿಲ್ಲ. ಬಿಸಿಲಿನ ತಾಪ, ಗಾಳಿ ಇಲ್ಲದಿರುವುದು ಹಾಗೂ ಆಹಾರದ ಕೊರತೆಯಿಂದಾಗಿ ಒಂದು ನಾಯಿಯು ಪ್ರಜ್ಞಾ ಸ್ಥಿತಿಯನ್ನು ಕಳೆದುಕೊಂಡಿದೆ. ಇನ್ನೊಂದು ಹುಳುಗಳಿಂದ ಸೋಂಕಿಗೆ ಒಳಗಾಗಿದೆ.

ಪ್ರಾಣಿ ಕಲ್ಯಾಣ ಮತ್ತು ಆರೈಕೆ ಸೇವಾ ಪ್ರತಿಷ್ಠಾನವು (ಎಡಬ್ಲ್ಯುಸಿಎಸ್ಎಫ್) ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಈ‌ನಾಯಿಗಳ ರಕ್ಷಣೆಗೆಂದು ಅವುಗಳಿಗೆ ಚಿಕಿತ್ಸೆ ಕೊಡಿಸಿ ಎಂದು ಕೇಳಿಕೊಂಡಾಗ, ಅದಕ್ಕೆ ವೈದ್ಯರ ಸೋದರ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಪೊಲೀಸರು 1960 ರ ‘ಪ್ರಾಣಿ ಹಿಂಸೆ ತಡೆ ಕಾಯ್ದೆ’ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಹಾಗೂ ಎರಡು ನಾಯಿಗಳ ಜೀವವನ್ನು ಕಾಪಾಡಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಪ್ರಿಯರು ತೀವ್ರವಾಗಿ ವಿರೋಧಿಸಿದ್ದು, ಮೂಕ ಪ್ರಾಣಿಗಳಿಗೆ ನಿಮ್ಮ ಕುಟುಂಬದ ಸದಸ್ಯರಂತೆ ಪ್ರೀತಿ ಮತ್ತು ಗೌರವವನ್ನು ನೀಡಲು ಸಾಧ್ಯವಾಗದಿದ್ದರೆ ಮನೆಗೆ ತರಬೇಡಿ. ಅವು ಭಾವನ ಜೀವಿಗಳು. ಯಾವುದೇ ಆಟಿಕೆಗಳಾಗಲೀ, ಯಂತ್ರಗಳಾಗಲೀ ಅಲ್ಲ ಎಂದಿದ್ದಾರೆ.

 

Leave A Reply

Your email address will not be published.