Online Parcel: ಆರ್ಡರ್ ಮಾಡಿದ 4ವರ್ಷ ನಂತರ ಸರ್ಪ್ರೈಸ್ ಆಗಿ ಪ್ರಾಡಕ್ಟ್ ಡೆಲಿವರಿ! ಅಸಲಿ ಕಥೆ ಏನು!

Online Parcel Surprise product delivery 4 years after order

Online Parcel: ಇಲ್ಲೊಂದು ಆನ್ಲೈನ್ ಪಾರ್ಸೆಲ್ (Online Parcel) ಅವಾಂತರ ನೋಡಿದ್ರೆ, ತಾಳ್ಮೆ ಇದ್ದವನಿಗೂ ಒಂದು ಕ್ಷಣ ತಾಳ್ಮೆ ಕೆಡಬಹುದು. ಹೌದು, ಇಲ್ಲೊಬ್ಬ ಆನ್ಲೈನ್‌ ನಲ್ಲಿ ಆರ್ಡರ್‌ ಮಾಡಿದ ವಸ್ತು ಕೆಲವೇ ದಿನಗಳಲ್ಲಿ ಮನೆ ಬಾಗಿಲಿಗೆ ಬರುತ್ತೆ ಅಂದುಕೊಂಡು ಕಾದುಕುಳಿತವನು ಸುಮ್ಮನಾಗಿ, ನಂತರ ಬರೋಬ್ಬರಿ 4 ವರ್ಷಗಳ ಬಳಿಕ ಡೆಲಿವರಿ ಆಗಿದೆ. ಹೌದು ನೀವು ಇದನ್ನು ನಂಬಲೇ ಬೇಕು.

ಅಲಿ ಎಕ್ಸ್‌ಪ್ರೆಸ್ (Ali Express) ಆಪ್ ನೀವು ಬಹುಷಃ ಕೇಳಿರಬಹುದು. ಇದು ಆನ್‌ಲೈನ್ ಮಾರುಕಟ್ಟೆಯಲ್ಲಿ ಅಗ್ಗದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ವೆಬ್ಸೈಟ್ ಆಗಿದೆ. ಈಗಾಗಲೇ ಚೀನಾ ಮೂಲದ ಅಲಿ ಎಕ್ಸ್‌ಪ್ರೆಸ್ ಎಂಬ ಈ ಕಂಪೆನಿಯನ್ನು 2020 ರಲ್ಲಿ ಭಾರತ ಸರ್ಕಾರ ಇತರ 58 ಆ್ಯಪ್ ಗಳೊಂದಿಗೆ ಬ್ಯಾನ್‌ ಮಾಡಿದೆ.

ವಿಶೇಷ ಎಂದರೆ ಬ್ಯಾನ್‌ ಆಗುವುದುಕ್ಕಿಂತ ಮೊದಲೇ ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಈ ಸೈಟ್‌ ನಲ್ಲಿ ಪ್ರಾಡೆಕ್ಟ್‌ ವೊಂದನ್ನು ಆರ್ಡರ್‌ ಮಾಡಿದ್ದಾರೆ.

ಹೌದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿತಿನ್ ಅಗರ್ವಾಲ್ ಅವರು ಬರೆದುಕೊಂಡಿದ್ದಾರೆ. “ನಂಬಿಕೆ ಕಳೆದುಕೊಳ್ಳಬೇಡಿ ಎಂದು ಪೋಸ್ಟ್‌ ಹಾಕಿರುವ ಅವರು “ಆಲಿಬಾಬಾ ಒಡೆತನದ ಅಲಿ ಎಕ್ಸ್‌ಪ್ರೆಸ್ ನಲ್ಲಿ ನಾನು 2019 ರಲ್ಲಿ ಆರ್ಡರ್‌ ಮಾಡಿದ್ದ ಪ್ರಾಡಕ್ಟ್‌ ಕೊನೆಗೂ ನನ್ನ ಕೈ ಸೇರಿದೆ” ಎಂದು ಬರೆದುಕೊಂಡಿದ್ದಾರೆ.

ನಿತಿನ್ ಅಗರ್ವಾಲ್ ಅವರ ಪೋಸ್ಟ್‌ ವೈರಲ್‌ ಆಗಿದ್ದು, ವೀಕ್ಷಕರು ನಾನಾ ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದಕ್ಕೆಲ್ಲಾ ಕಾರಣ ಭಾರತದಲ್ಲಿ ಅಲಿ ಎಕ್ಸ್‌ಪ್ರೆಸ್‌ ಬ್ಯಾನ್‌ ಆದರೂ ಥರ್ಡ್‌ ಪಾರ್ಟಿ ಆ್ಯಪ್ ಹಾಗೂ ವಿಪಿಎನ್‌ ಮೂಲಕ ಕೆಲವರು ಇದನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಪ್ರಾಡಕ್ಟ್‌ ಡೆಲಿವರಿ ಆಗಲು ತಡವಾದ ಕಾರಣ ನಿತಿನ್ ಅಗರ್ವಾಲ್ ಯಾವ ಪ್ರಾಡಕ್ಟ್‌ ಎನ್ನುವುದನ್ನು ಬಹಿರಂಗ ಪಡಿಸಿಲ್ಲ.

Leave A Reply

Your email address will not be published.