Viral News: ‘ಮಲಯಾಳಿಗಳಿಗೆ ಬಾಡಿಗೆಗೆ ಮನೆ ಕೊಡಲ್ಲ’ ; ವೈರಲ್ ಆಯ್ತು ಮನೆ ಮಾಲೀಕನ ವಾಟ್ಸಪ್ ಚಾಟ್ ! ಅಷ್ಟಕ್ಕೂ ಮಾಲೀಕನ ಈ ನಿರ್ಧಾರಕ್ಕೆ ಕಾರಣವೇನು ?!

House owner chat, 'Malayalis are not given houses for rent

Viral News: ಅಪರಾಧಗಳು ಹೆಚ್ಚಿದಂತೆಲ್ಲ ಮನೆ ಮಾಲೀಕರು ಮನೆಯನ್ನು ಬಾಡಿಗೆ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಅಪರಾಧಗಳು ಒಂದರ ಮೇಲೆ ಒಂದರಂತೆ ನಡೆಯುತ್ತಲೇ ಇದೆ. ಹಾಗಾಗಿ ಮನೆ ಮಾಲೀಕರು ಬಾಡಿಗೆಗೆ ಮನೆ ನೀಡಲು ಹಿಂಸರಿಯುತ್ತಿದ್ದಾರೆ. ಆದರೆ, ಇಲ್ಲೊಂದು ಘಟನೆ ವಿಭಿನ್ನವಾಗಿದೆ. ಹೌದು, ಕೇರಳ ಮೂಲದ ಮಲಯಾಳಿಗಳಿಗೆ ಬಾಡಿಗೆಗೆ ಮನೆ ಕೊಡಲ್ಲ ಎಂದು ಮನೆ ಮಾಲೀಕ ಹೇಳಿರುವ ವಿಚಾರ ಎಲ್ಲೆಡೆ ವೈರಲ್ (Viral News) ಆಗಿ ಚರ್ಚೆಗೆ ಕಾರಣವಾಗಿದೆ.

ವ್ಯಕ್ತಿಯೊಬ್ಬ ತನಗೆ ಮನೆ ಬಾಡಿಗೆಗೆ ಬೇಕೆಂದು ಮನೆ ಮಾಲೀಕನ ಬಳಿ ವಾಟ್ಸಪ್ ಚಾಟ್ ಮೂಲಕ ಕೇಳಿದ್ದು, ಬಾಡಿಗೆಗೆ ಬರುವಾತ ಕೇರಳ (Kerala) ಮೂಲದವ, ಮಲಯಾಳಿ ಎಂದು ತಿಳಿದ ಕೂಡಲೇ ಮನೆ ಮಾಲೀಕ ಬಾಡಿಗೆಗೆ ಮನೆ ನೀಡಲು ತಿರಸ್ಕರಿಸಿರುವ ವಾಟ್ಸಪ್ ಚಾಟ್ ಇದೀಗ ವೈರಲ್ ಆಗಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಜನಪ್ರಿಯ ಮಲಯಾಳಂ ಬರಹಗಾರ ಎನ್‌ಎಸ್ ಮಾಧವನ್ ಅವರು ಈ ಮನೆ ಮಾಲೀಕ ಮತ್ತು ಬಾಡಿಗೆ ಪಡೆಯುವವನ ನಡುವಿನ ಮಾತುಕತೆಯ ವಾಟ್ಸಪ್ ಸ್ಟೀನ್ ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್ ನೋಡಿದ ನೆಟ್ಟಿಗರು ವಿವಿಧ -ವಿಭಿನ್ನ ಕಾಮೆಂಟ್ ಮಾಡಿದ್ದು, ಐಐಎಂ ಬೆಂಗಳೂರಿನ ಟ್ವಿಟ್ಟರ್ ಬಳಕೆದಾರರೊಬ್ಬರು, “ಕಪೋಲಕಲ್ಪಿತ ವಾಟ್ಸಾಪ್ ಚಾಟ್‌ಗಳನ್ನು ವಿಲೇವಾರಿ ಮಾಡುವುದನ್ನು ನಿಲ್ಲಿಸಿ” ಎಂದು ಹೇಳಿದ್ದಾರೆ. ಕೆಲವರು ಇದು ಬೆಂಗಳೂರಿನ ಪ್ರಕರಣ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ಕಟ್ಟುಕಥೆ ದ್ವೇಷವನ್ನು ಹರಡಲು ಹೀಗೆ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಕೇರಳ ಮೂಲದ ಕೆಲವರು ಬೀಫ್ (Cow) ತಿನ್ನುತ್ತಾರೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿಯೇ ಮಲಯಾಳಿಗಳಿಗೆ ಮನೆ ನೀಡುವುದಿಲ್ಲ ಎಂದು ಮಾಲೀಕರು ಹೇಳಿರಬಹುದು ಎಂದು ಹಲವರು ಚರ್ಚೆಗಿಳಿದಿದ್ದಾರೆ. ಒಟ್ಟಾರೆ ಈ ಒಂದು ವಾಟ್ಸಪ್ ಸಂವಾದ ಭಾರೀ ಸಂಚಲನ ಮೂಡಿಸಿದೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಆಲೋಚಿಸಿ ಟ್ವೀಟ್ ಮಾಡುತ್ತಿದ್ದಾರೆ.

 

Leave A Reply

Your email address will not be published.