Upasana: ಮೆಗಾ ಸ್ಟಾರ್ ಸೊಸೆ ಉಪಾಸನಾ ಡೆಲಿವರಿಗೆ ಆಸ್ಪತ್ರೆಗೆ ದಾಖಲಾದಾಗ ಧರಿಸಿದ ಟೀ ಶರ್ಟ್ ಬೆಲೆ ಕೇಳಿ ಹುಬ್ಬೇರಿಸಿದ ನೆಟ್ಟಿಗರು!

What is the price of the t-shirt worn by Upasana

Upasana: ಸೌತ್‌ ಸೂಪರ್‌ ಸ್ಟಾರ್‌ ರಾಮ್ ಚರಣ್ (Ram Charan) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಜೋಡಿ ಇತ್ತೀಚೆಗಷ್ಟೇ ವಿವಾಹ ವಾರ್ಷಿಕೊತ್ಸವ ಆಚರಿಸಿದ್ದು, ಇದೀಗ, ಮಮೆಗಾಸ್ಟಾರ್ ಕುಟುಂಬದ ಸೊಸೆ ಕೋಟಿಗಳ ಒಡತಿ ಉಪಾಸನಾ(Upasana) ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾ ಅವರು ಮದುವೆಯಾಗಿ 10 ವರ್ಷಗಳ ನಂತರ ಪೋಷಕರಾಗಿದ್ದು, ಹೈದರಾಬಾದ್​ನ ಜುಬ್ಲಿ ಹಿಲ್ಸ್​​ನಲ್ಲಿರುವ ಖಾಸಗಿ ಆಸ್ಪತ್ರೆಗೆ ಉಪಾಸನಾ ಅವರನ್ನು ದಾಖಲಿಸಲಾಗಿತ್ತು. ಜೂನ್ 20ರ ಮುಂಜಾನೆ ವೇಳೆಗೆ ಉಪಾಸನಾ ಕೊನಿಡೇಲಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಜೂನ್​ 19ರಂದು ಉಪಾಸನಾ ಹೈದರಾಬಾದ್​ನ ಜುಬ್ಲಿ ಹಿಲ್ಸ್​​ನಲ್ಲಿರುವ ಖಾಸಗಿ ಆಸ್ಪತ್ರೆಗೆ ಈ ಜೋಡಿ ಡೆಲಿವರಿಗಾಗಿ ಆಸ್ಪತ್ರೆಗೆ ಬರುವ ಸಂದರ್ಭ ವಿಡಿಯೋ ಕ್ಲಿಪ್ ಎಲ್ಲೆಡೆ ವೈರಲ್ ಆಗಿತ್ತು. ಇದೀಗ, ಉಪಾಸನಾ ಅವರು ಆಸ್ಪತ್ರೆಗೆ ಬಂದಾಗ ಧರಿಸಿದ್ದ ಕ್ಯಾಶುವಲ್ ಟೀ ಶರ್ಟ್ ಎಲ್ಲರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಯಾಕೆ ಅಂತೀರಾ? ಆ ಟೀ ಶರ್ಟ್ ಬೆಲೆ ಈಗ ರಿವೀಲ್ ಆಗಿದ್ದು ಬೆಲೆ ಕೇಳಿದ ನೆಟ್ಟಿಗರು ಶಾಕ್ ಆಗಿದ್ದು, ಡೆಲಿವರಿಗೂ ಇಷ್ಟು ದುಬಾರಿ ಡ್ರೆಸ್ಸಾ? ಈ ದುಡ್ಡಲ್ಲಿ ಎರಡೆರಡು ಹೆರಿಗೆ ಆಗುತ್ತಿತ್ತು ಎಂದೆಲ್ಲ ನೆಟ್ಟಿಗರು ಮಾತಾಡುತ್ತಿದ್ದಾರೆ.

ಉಪಾಸನಾ ಅವರು ಲಕ್ಷುರಿ ಬ್ರ್ಯಾಂಡ್ ವಸ್ತುಗಳನ್ನು ಬಳಕೆ ಮಾಡೋದು ವಾಡಿಕೆ. ಅದೇ ರೀತಿ, ಡೆಲಿವರಿ ಟೈಮಿಂಗ್ ಅಲ್ಲಿಯೂ ಆಸ್ಪತ್ರೆಗೆ ಬಂದಾಗ ಗುಸ್ಸಿ ಟೀ ಶರ್ಟ್ ಹಾಕಿದ್ದಾರೆ. ಗುಸ್ಸಿ ಟೀಶರ್ಟ್ ಬೇಬಿ ಪಿಂಕ್ ಬಣ್ಣದಲ್ಲಿತ್ತು. ಈ ಟೀ ಶರ್ಟ್ ಮೂಲಕವೇ ಉಪಾಸನಾ ಮಗು ಹೆಣ್ಣು ಎಂಬ ಹಿಂಟ್ ನೀಡಿದ್ದಾರೆ ಎಂಬುದು ಕೆಲವರ ಅನಿಸಿಕೆ. ಬೇಬಿ ಪಿಂಕ್ ಬಣ್ಣದ ಈ ಟೀ ಶರ್ಟ್​ (T Shirt) ನೋಡಲು ಸಾಧಾರಣ ಷರ್ಟ್​ ಅಂತೆಯೇ ಇದ್ದರೂ ಕೂಡ, ಟೀ ಶರ್ಟ್​ಗೆ ಬರೋಬ್ಬರಿ 48,375 ರೂಪಾಯಿ ಎಂಬ ವಿಚಾರ ರೀವಿಲ್ ಆಗಿದೆ.

ಈ ವಿಚಾರ ಲೀಕ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, ಡೆಲಿವರಿ ಸಮಯದಲ್ಲಿ ಕೂಡ ಇಷ್ಟೊಂದು ದುಬಾರಿ ಡ್ರೆಸ್ ಆ ಎಂದು ಹುಬ್ಬೇರಿಸುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಈ ದುಡ್ಡಲ್ಲಿ ಎರಡೆರಡು ಡೆಲಿವರಿ ಮಾಡಬಹುದಿತ್ತು ಎಂದೆಲ್ಲ ಹೇಳುತ್ತಿದ್ದಾರೆ.

Leave A Reply

Your email address will not be published.