Chikkaballapur: ಪತ್ನಿ ಪ್ರಿಯಕರನ ಕತ್ತು ಸೀಳಿದ ಗಂಡ, ನಂತರ ರಕ್ತ ಕುಡಿದ!

Latest Karnataka crime news Husband attacked on his wife lover and drink the blood at chikkaballapur

chikkaballapur: ಅನೈತಿಕ ಸಂಬಂಧಕ್ಕೆ ಈಗ ಇನ್ನೊಂದು ಅನಾಹುತ ನಡೆದಿದೆ. ಆದರೆ ಇದೊಂದು ಭೀಭತ್ಸ್ಯ ಎಂದೇ ಹೇಳಬಹುದು. ಅದೇನೆಂದರೆ ಪತ್ನಿಯ ಪ್ರಿಯಕರನ ಕತ್ತು ಸೀಳಿ ಗಂಡ ರಕ್ತ ಕುಡಿದಿರುವ ಘಟನೆ ನಡೆದಿದೆ. ಈ ಘಟನೆ ಚಿಕ್ಕಬಳ್ಳಾಪುರ( chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್‌ ಬಳಿ ನಡೆದಿದೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಟ್ಲಹಳ್ಳಿ ನಿವಾಸಿ ವಿಜಯ್‌ ಕೊಲೆ ಆರೋಪಿ. ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ್‌ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ.

ಕೆಂಚಾರ್ಲಹಳ್ಳಿ ಪೊಲೀಸರು ಆರೋಪಿ ವಿಜಯ್‌ನನ್ನು ಬಂಧಿಸಿದ್ದು, ತೀವ್ರ ಹಲ್ಲೆಗೊಳಗಾದ ಮಾರೇಶ್‌ ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಬಗ್ಗೆ ವರದಿಯಾಗಿದೆ.

Leave A Reply

Your email address will not be published.