Tumkur: ಬಿಜೆಪಿಗೆ ವೋಟ್ ಮಾಡ್ಲಿಲ್ಲ ಎಂದು ಪಡಿತರ ನೀಡದ ಸೊಸೈಟಿ ಸಿಬ್ಬಂದಿ..!!

Latest Karnataka news the society staff refused to give ration for not voting for BJP at tipatur in Tumkuru

Tumkur: ಮತ(Vote) ಚಲಾವಣೆ ನಮ್ಮ ಹಕ್ಕು. ಅದು ಕೂಡ ಗೌಪ್ಯವಾಗಿ ನಡೆಯುವಂತದ್ದು. ನಮ್ಮ ಹಕ್ಕನ್ನು ನಾವು ಯಾರಿಗೆ ಬೇಕಾದರೂ ಚಲಾಯಿಸಬಹುದು. ಅದನ್ನು ಪ್ರಶ್ನಿಸೋ ಆಧಿಕಾರ ಯಾರಿಗೂ ಇರುವುದಿಲ್ಲ. ಆದರೆ ಇಲ್ಲೊಂದೆಡೆ ಕಾಂಗ್ರೆಸ್ ಗೆ(Congress) ಮತ ನೀಡಿದ್ದಾರೆಂಬ ಕಾರಣಕ್ಕೆ ಸೊಸೈಟಿಯಲ್ಲಿ ವ್ಯಕ್ತಿಯೊಬ್ಬರಿಗೆ ಪಡಿತರ ನೀಡಲು ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ.

ಹೌದು, ತುಮಕೂರು(Tumkur) ಜಿಲ್ಲೆಯ ತಿಪಟೂರು ನಗರದ ಶಂಕರ್ ಮಠ ಹತ್ತಿರವಿರುವ ಸರ್ಕಾರಿ ನೌಕರರ ಸಹಕಾರ ಸಂಘದಲ್ಲಿ, ಆರ್‌ಡಿ ಬಾಬು(R D Babu) ಎಂಬ ಸ್ಥಳೀಯರಿಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಹಾಕುವ ಬದಲು ಕಾಂಗ್ರೆಸ್ ಗೆ ಮತ ನೀಡಿದಕ್ಕಾಗಿ ಪಡಿತರ ನೀಡಲು ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದ್ದು,ಸಾಕಷ್ಟು ಸುದ್ಧಿಯಾಗಿತ್ತಿದೆ.

ಅಂದಹಾಗೆ ಬಾಬುರವರು ಪಡಿತರ ಪಡೆಯಲು ಸೊಸೈಟಿಗೆ ಹೋದಾಗ ನೀವು ಕಾಂಗ್ರೆಸ್‌ನವರು, ನಿಮಗೆ ಪಡಿತರ ಇಲ್ಲ ಎಂದು ಸೊಸೈಟಿ ಸಿಬ್ಬಂದಿ ಹೇಳಿದ್ದಾರೆ. ಆಗ ಮತ ನಮ್ಮ ಹಕ್ಕು. ಮತಕ್ಕೂ ಪಡಿತರ ವಿತರಣೆಗೆ ಏನು ಸಂಬಂಧ ಎಂದು ಪ್ರಶ್ನಿಸಿರುವ ಬಾಬು ಪ್ರಶ್ನೆ ಮಾಡಿದ್ದಾರೆ. ಆದರೆ ಇದಾವುದಕ್ಕೂ ಸೊಸೈಟಿ(Society) ಸಿಬ್ಬಂದಿ ಡೊಂಟ್ ಕೇರ್ ಅಂತಿದ್ದಾರೆ. ಇದರಿಂದ ಕೆಲಕಾಲ ಸೊಸೈಟಿ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ.

ಇಷ್ಟೇ ಅಲ್ಲದೆ ಹಿಂದಿನಿಂದಲೂ ಸೊಸೈಟಿ ವಿರುದ್ಧ ಹಲವು ದೂರುಗಳು ಕೇಳಿಬರುತ್ತಿವೆ. ಈಗಾಗಲೇ ಹಲವು ದೂರುಗಳಿದ್ದರೂ ಪದೇಪದೆ ಸೊಸೈಟಿ ಹೀಗೆ ಮಾಡುತ್ತಿದೆ. ಬಿಜೆಪಿ ಪಕ್ಷದ ಸೊಸೈಟಿಯಂತೆ ವರ್ತಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಿತ್ರ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಪತ್ನಿ ಪ್ರಿಯಕರನ ಕತ್ತು ಸೀಳಿದ ಗಂಡ, ನಂತರ ರಕ್ತ ಕುಡಿದ!

Leave A Reply

Your email address will not be published.