Cotton Clothes washing Tips: ನಿಮ್ಮ ಹೊಸ ಕಾಟನ್‌ ಬಟ್ಟೆಯಿಂದ ಕಲರ್‌ ಹೋಗುತ್ತಿದ್ದರೆ, ಈ ಎರಡು ವಸ್ತುಗಳನ್ನು ನೀರಿನಲ್ಲಿ ಹಾಕಿ ತೊಳೆಯಿರಿ, ಕಲರ್‌ ಮತ್ತೆಂದೂ ಹೋಗಲ್ಲ

life style news Cotton Clothes washing Tips Ways to restore faded clothes

Cotton Clothes washing Tips: ಹತ್ತಿ ಬಟ್ಟೆಗಳು ವಿಭಿನ್ನವಾದ ಆರಾಮವನ್ನು ನೀಡುತ್ತವೆ. ಬೆವರುತ್ತಿದ್ದರೆ, ಬೆವರು ಹೀರಿಕೊಳ್ಳುವ ಮತ್ತು ತಂಪು ನೀಡುವ ಬಟ್ಟೆಗಳೆಂದರೆ ಹತ್ತಿ ಬಟ್ಟೆಗಳು. ಒಂದೇ ಒಂದು ಸಮಸ್ಯೆ ಏನೆಂದರೆ ಇದು ಬಹಳ ಕಲರ್‌ ಬಿಡುವುದು. ಈ ಬಟ್ಟೆಗಳನ್ನು ಧರಿಸಿದ ನಂತರ ಶಾಖ ಮತ್ತು ತೇವಾಂಶದಿಂದ, ವಿಪರೀತವಾಗಿ ಬೆವರುವುದರಿಂದ ಮತ್ತು ಬಣ್ಣಬಣ್ಣದ ಬಟ್ಟೆಗಳಿಂದಾಗಿ ನಿಮ್ಮ ಕೈ, ಕುತ್ತಿಗೆ ಅಥವಾ ಮುಖವು ಬಣ್ಣಬಣ್ಣದಂತಾಗುವುದು ನಿಮಗೆ ಅನೇಕ ಬಾರಿ ಕಂಡಿರಬಹುದು. ಆದರೆ, ಒಂದು ಸಣ್ಣ ಟಿಪ್ಸ್‌ ನಿಂದಾಗಿ ನೀವು ಈ ತೊಂದರೆಗಳನ್ನು ತಪ್ಪಿಸುವುದು ಮಾತ್ರವಲ್ಲದೆ ಬಟ್ಟೆಗಳ ಬಣ್ಣ ಉಳಿಸಬಹುದು.

ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು, ಈ ನೀರಿನಲ್ಲಿ ಒಂದು ಹಿಡಿ ಹರಳೆಣ್ಣೆ ಮತ್ತು ಎರಡು ಹಿಡಿ ಉಪ್ಪನ್ನು ಬೆರೆಸಬೇಕು. ನೀವು ತುಂಬಾ ತಣ್ಣನೆಯ ನೀರನ್ನು ತೆಗೆದುಕೊಳ್ಳಬೇಕು. ಈ ನೀರಿನಲ್ಲಿ ಬಟ್ಟೆಗಳನ್ನು ನೆನೆಸಿ. ಈ ನೀರಿನಲ್ಲಿ ಬಟ್ಟೆಗಳನ್ನು ಕನಿಷ್ಠ ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ಎರಡು ಗಂಟೆಗಳ ನಂತರ, ಬಟ್ಟೆಗಳನ್ನು ನೀರಿನಿಂದ ಒಂದೊಂದಾಗಿ ಹೊರತೆಗೆಯಿರಿ ಮತ್ತು ಅವುಗಳನ್ನು ಶುದ್ಧ ನೀರಿನಲ್ಲಿ ನೆನೆಸಿ ನಂತರ ತೊಳೆಯಿರಿ. ಕೆಲವು ಬಟ್ಟೆಗಳು ಆ ಸಮಯದಲ್ಲಿ ಬಣ್ಣ ಬಿಡಬಹುದು ಆದರೆ ಮತ್ತೆ ಬಿಡುವುದಿಲ್ಲ.

ಮೇಲೆ ಹೇಳಿದ ಎಲ್ಲಾ ಕ್ರಮ ಮಾಡಿದ ನಂತರ ಒಗೆಯಲು ಹಾಕಿದ ಬಟ್ಟೆ ಸ್ವಲ್ಪ ಕಠಿಣವಾಗುತ್ತದೆ. ಹಾಗಾಗಿ ಅವುಗಳನ್ನು ಮೃದುಗೊಳಿಸಲು ಕೆಲವೊಂದು ಸುಲಭ ಮಾರ್ಗವಿದೆ. ವಿನೆಗರ್‌ನ್ನು ನೀರಿಗೆ ಹಾಕಿ ಬಟ್ಟೆಗಳನ್ನು ನೆನೆಸಿ ನಂತರ ಒಣಗಲು ಬಿಡಿ. ಬಟ್ಟೆ ಹೂವಿನಂತೆ ಮೃದುವಾಗಿ ಉಳಿಯುತ್ತದೆ.

Leave A Reply

Your email address will not be published.