Sandalwood Actor: ಹೆಂಡತಿಗೆ ಅನೈತಿಕ ಸಂಬಂಧ, ಜೊತೆಗೆ ಡ್ರಗ್ಸ್‌ ತೆಗೆದುಕೊಳ್ಳುತ್ತಾಳೆ; ಕನ್ನಡ ನಟ, ನಿರ್ಮಾಪಕನಿಂದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

Sandalwood Actor Filed Complaint About wife illegal relationship and Using drug

Sandalwood Actor: ಕನ್ನಡ ಚಿತ್ರರಂಗದಲ್ಲಿ ನಟ, (Sandalwood Actor) ನಿರ್ಮಾಪಕರಾಗಿ ಕೆಲಸ ಮಾಡಿದಂತಹ ಟಿ ಚಂದ್ರಶೇಖರ್‌ ಅವರ ಸಂಸಾರದ ಜಗಳ ಈಗ ಪೊಲೀಸ್‌ ಠಾಣೆಗೆ ಏರಿದೆ. ತನ್ನ ಪತ್ನಿ ಮಾದಕದ್ರವ್ಯ ವ್ಯಸನಿ ಆಗಿದ್ದು, ಡ್ರಗ್‌ ಪೆಡ್ಲರ್‌ ಜೊತೆಯೇ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದೂರನ್ನು ನೀಡಿದ್ದಾರೆ. ಈ ಕುರಿತು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಶೇಖರ್‌ ಅವರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಡ್ರಗ್‌ ಪೆಡ್ಲರ್‌ ಮನೆಗೆ ಬಂದಿದ್ದು, ಆತನ ಜೊತೆ ಹೆಂಡತಿ ದೈಹಿಕ ಸಂಪರ್ಕ ಹೊಂದಿರುವಾಗಲೇ ಸಿಕ್ಕಿಬಿದ್ದಿದ್ದಾಳೆ ಎಂದು ಚಂದ್ರಶೇಖರ್‌ ಆರೋಪ ಮಾಡಿದ್ದಾರೆ. ಲಕ್ಷ್ಮೀಶ್‌ ಎಂಬ ಡ್ರಗ್‌ ಪೆಡ್ಲರ್‌ ಹಲ್ಲೆ ಮಾಡಿದ್ದಾರೆ ಎಂದು ಕೂಡಾ ದೂರಿನಲ್ಲಿ ತಿಳಿಸಲಾಗಿದೆ. ಪತ್ನಿ ಹಾಗೂ ಆಕೆಯ ಪ್ರಿಯಕರ ಲಕ್ಷ್ಮೀಶ್‌ ಎಂಬವರ ಮೇಲೆ ಆರೋಪ ಮಾಡಿರುವ ಟಿ ಚಂದ್ರಶೇಖರ್‌ ಕೇಸ್‌ ದಾಖಲು ಮಾಡಿದ್ದಾರೆ.

ನಾನು ನನ್ನ ಪತ್ನಿಯ ಡ್ರಗ್‌ ಅಭ್ಯಾಸ ಬಿಡಿಸಲು ಪ್ರಯತ್ನಪಟ್ಟಿದ್ದೇನೆ. ಆದರೆ ಆಕೆ ಡ್ರಗ್‌ ಪೆಡ್ಲರ್‌ ಜೊತೆಯೇ ಒಡನಾಟ ಬೆಳೆಸಿದ್ದಾಳೆ ಎಂದು ಗಂಡನ ಆರೋಪವಾದರೆ, ಇತ್ತ ಕಡೆ ಹೆಂಡತಿ, ಮನೆಯಲ್ಲಿ ಡ್ರಗ್‌ ಇಟ್ಟು ಅರೆಸ್ಟ್‌ ಮಾಡಿಸ್ತೀನಿ ಎಂದು ಗಂಡ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾಳೆ.

Leave A Reply

Your email address will not be published.