Viral video: ಲೈಂಗಿಕ ಕಿರುಕುಳ ನೀಡಿದವನಿಗೆ ರಸ್ತೆಯಲ್ಲೇ ಪಾಠ ಕಲಿಸಿದ ಸಹೋದರಿಯರು; ವಿಡಿಯೋ ವೈರಲ್

Viral video Latest news girls beat up the person who sexually harassed them

Viral video: ಸಹೋದರಿಯರಿಬ್ಬರು ಲೈಂಗಿಕ ಕಿರುಕುಳ ನೀಡಿದವನಿಗೆ ತಕ್ಕ ಶಾಸ್ತಿ ಮಾಡಿರುವ ಘಟನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದಿದೆ. ಲೈಂಗಿಕ ಕಿರುಕುಳ ನೀಡಿದವನಿಗೆ ಸೋದರಿಯರು ಸಾರ್ವಜನಿಕವಾಗಿ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral video ) ಆಗುತ್ತಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಶಾಲಾ ಬಾಲಕಿ ತನ್ನ ಸಹೋದರಿಯೊಂದಿಗೆ ಸೇರಿ ಕಿರುಕುಳ ನೀಡಿದವನಿಗೆ ಥಳಿಸಿ ಬುದ್ಧಿ ಕಲಿಸಿದ್ದಾಳೆ. ಜೊತೆಗೆ ಇತರ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ನೆರವಿನಿಂದ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತ್ತೊಂದೆಡೆ ಥಳಿಕಕ್ಕೊಳಗಾದ ವ್ಯಕ್ತಿ ಎದ್ದು ನಿಲ್ಲಲು ಸಾಧ್ಯವಾಗದೇ ರಸ್ತೆಯಲ್ಲಿ ಮುಖ ಮರೆಸಿಕೊಂಡು ನರಳಾಡುತ್ತಿರುವುದನ್ನು ಕಾಣಬಹುದು.
ಇತರ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಾಯ ಪಡೆದು ಇಬ್ಬರೂ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆರೋಪಿಯನ್ನು ವಿಜಯ್ ಸರ್ಕಾಟೆ ಎಂದು ಗುರುತಿಸಲಾಗಿದೆ.

“ಗುರುವಾರ ಬೆಳಗ್ಗೆ 6.45ಕ್ಕೆ ನನ್ನ ಕಿರಿಯ ಮಗಳು ಶಾಲೆಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ವಿಜಯ್ ಸರ್ಕಾಟೆ ಎಂಬುವವನು ಬಲವಂತವಾಗಿ ಆಕೆಯ ಕೈ ಹಿಡಿದು ಉಡುಗೊರೆ ನೀಡಲು ಯತ್ನಿಸಿದ್ದಾನೆ. ಆದರೆ ಹುಡುಗಿ ನಿರಾಕರಿಸಿದಾಗ ಬಲವಂತವಾಗಿ ಆರೋಪಿಯು ಉಡುಗೊರೆಯನ್ನು ಬ್ಯಾಗ್ ನಲ್ಲಿಟ್ಟು, ನಂತರ ಆಕೆಗೆ ಚುಂಬಿಸಿ ಕಿರುಕುಳ ನೀಡಿದ್ದಾನೆ. ನಂತರ ಬಾಲಕಿಯು ಮನೆಗೆ ಬಂದು ನಡೆದ ಘಟನೆಯನ್ನು ವಿವರಿಸಿದ್ದಾಳೆ “ಎಂದು ಬಾಲಕಿಯ ತಾಯಿ ವಿವರಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಮತ್ತೆ ಆ ವ್ಯಕ್ತಿಯು ಮಗಳನ್ನು ಅಡ್ಡಹಾಕಿ ಆಕೆಯ ಕೈ ಹಿಡಿದುಕೊಂಡ. ಆದರೆ ಈ ವೇಳೆ ಹಿರಿಯ ಮಗಳು ಹತ್ತಿರವೇ ಕಾಯುತ್ತಿದ್ದು ಸ್ಥಳಕ್ಕೆ ಧಾವಿಸಿದಳು. ಮತ್ತು ಅವರಿಬ್ಬರು ಆತನನ್ನು ಥಳಿಸಲು ಶುರುಮಾಡಿದರು. ಇತರ ಶಾಲಾ ವಿದ್ಯಾರ್ಥಿಗಳು ಮತ್ತು ಕೆಲವು ದಾರಿಹೋಕರು ಸಹ ಆರೋಪಿಯನ್ನು ಥಳಿಸಿದರು ಎಂದು ಬಾಲಕಿಯರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯ್ ಸರ್ಕಾಟೆ ವಿರುದ್ಧ ಕಗ್ಡಾಪಿತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿದೆ.

 

Leave A Reply

Your email address will not be published.