Air India: ವಿಮಾನ ಪ್ರಯಾಣದಲ್ಲೊಂದು ವಿಲಕ್ಷಣ ಘಟನೆ! ಪ್ರಯಾಣಿಕರಿದ್ದ ಸ್ಥಳದಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ, ಎಫ್‌ಐಆರ್‌ ದಾಖಲು

FIR has been registered against a person defecated in the passenger compartment

Air India: ಇತ್ತೀಚೆಗೆ ವಿಮಾನದಲ್ಲಿ ಹಲವಾರು ವಿಲಕ್ಷಣ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಈಗ ಇದಕ್ಕೊಂದು ತಾಜಾ ಘಟನೆಯೊಂದು ಸೇರ್ಪಡೆಯಾಗಿದೆ. ಅದೇನೆಂದರೆ ವಿಮಾನದಲ್ಲಿ ಪ್ರಯಾಣಿಕರಿದ್ದ ಸ್ಥಳದಲ್ಲೇ ಮಲ ಮೂತ್ರ ವಿಸರ್ಜನೆ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಮುಂಬೈಯಿಂದ ದೆಹಲಿಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನದಲ್ಲಿ ನಡೆದಿದೆ. ಈ ಕೃತ್ಯ ಮಾಡಿದ ಪ್ರಯಾಣಿಕನನ್ನು ಈಗಾಗಲೇ ಬಂಧಿಸಲಾಗಿದೆ.

ಈ ಘಟನೆ ಜೂನ್.‌24ರಂದು ನಡೆದಿದೆ. ರಾಮ್‌ ಸಿಂಗ್‌ ಎಂಬ ಪ್ರಯಾಣಿಕ, ವಿಮಾನದಲ್ಲಿ ಪ್ರಯಾಣಿಕರು ಇದ್ದ ಸ್ಥಳದಲ್ಲೇ ಮಲ ಮೂತ್ರ ಮಾತ್ರ ವ್ಯಕ್ತಿ, ಇಷ್ಟು ಮಾತ್ರವಲ್ಲದೇ ಈತ ಉಗುಳಿದ್ದಾಗಿಯೂ ವರದಿಯಾಗಿದೆ. ಈತನ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಮತ್ತು 510ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.