Scholarship: SSLC ಪಾಸಾದ ವಿದ್ಯಾರ್ಥಿಗಳಿಗೆ 10ಸಾವಿರ ಸ್ಕಾಲರ್‌ಶಿಪ್‌! ಹೆಚ್ಚಿನ ಮಾಹಿತಿ ಇಲ್ಲಿದೆ

Latest news 10 thousand scholarship for SSLC passed students

Scholarship: ದಾಮೋದರನ್‌ ಫೌಂಡೇಶನ್‌ ʼವಿದ್ಯಾಧನ್‌ʼ ಕಾರ್ಯಕ್ರಮದಡಿ ವಿಕಲಚೇತನ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕೆ ಬೆಂಬಲಿಸಲು ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31-07-2023.
ಪರೀಕ್ಷೆ/ ಸಂದರ್ಶನ ದಿನಾಂಕ – 20-08-2023.
ಪರೀಕ್ಷೆ ಹಾಗೂ ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕವನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದು.

40% ರಷ್ಟು ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಪರೀಕ್ಷೆ, ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿವೇತನ (Scholarship) ನೀಡಲಾಗುವುದು. ಇಲ್ಲಿ ಪದವಿಯರೆಗೂ ವಿದ್ಯಾರ್ಥಿವೇತನ ಪಡೆಯಬಹುದು.

ಕುಟುಂಬದ ಆದಾಯ ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು, 75%ಶೇಕಡಾ ಅಂಕಗಳನ್ನು ಎಸ್‌ಎಸ್‌ಎಲ್‌ಸಿ ಯಲ್ಲಿ ವಿದ್ಯಾರ್ಥಿಗಳು ಪಡೆದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಕೋರ್ಸ್‌ಗೆ ಅನುಗುಣವಾಗಿ ವಾರ್ಷಿಕ ರೂ. 10,000 ದಿಂದ ರೂ. 60,000 ವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಬೇಕಾಗುವ ದಾಖಲೆಗಳು
ಇತ್ತೀಚಿನ ಭಾವಚಿತ್ರ., ಆದಾಯ ಪ್ರಮಾಣ ಪತ್ರ, ವಿಕಲಚೇತನ ದೃಢೀಕರಣ ಪತ್ರ, 12ನೇ ತರಗತಿಯ ಅಂಕ ಪಟ್ಟಿ.

ಆಸಕ್ತ ಅಭ್ಯರ್ಥಿಗಳು ತಮ್ಮ ಇ-ಮೇಲ್‌ ಐಡಿ ಮೂಲಕ ವಿದ್ಯಾದನ್‌ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಎಲ್ಲಾ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ https://www.vidyadhan.org/apply

Leave A Reply

Your email address will not be published.