Asaduddin Owaisi: ಪ್ರೀತಿಯಿಂದ ಶಾಲು ಹೊದಿಸಲು ಬಂದ ಬೆಂಬಲಿಗನ ಮೇಲೆಯೇ ಒವೈಸಿ ಗರಂ: ಕೋಪದಲ್ಲಿ ಆತನನ್ನು ದೂಡಿದ ವೀಡಿಯೋ ವೈರಲ್

latest news Asaduddin Owaisi was angry with those who came to drape the shawl

Asaduddin Owaisi: ಮುಂಬೈ: ವಿವಾದಗಳ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಎಐಎಂಐಎಂ (AIMIM) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ತಮ್ಮ ಕಾರ್ಯಕರ್ತನನ್ನು ತಳ್ಳಿದ ವೀಡಿಯೋ ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ

ಇತ್ತೀಚೆಗೆ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಮೇಲೆ ಹರಿಹಾಯ್ದ ಓವೈಸಿ ಅಮರಾವತಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ ಅವರು ಪ್ರಧಾನಿ ಮೋದಿ ಅವರ ಚಾಯ್ ಪ್ರಭಾವ ಒಬಾಮಾ ಮೇಲಾಗಿಲ್ಲ` ಎಂದು ಲೇವಡಿ ಮಾಡಿದ್ದರು. ಮೊನ್ನೆ ಭಾನುವಾರ (ಜೂನ್ 25) ಅಕೋಲಾಗೆ ಭೇಟಿ ನೀಡಿದ್ದ ಒವೈಸಿ ಅಕೋಲಾಗೆ ಭೇಟಿ ನೀಡಿದ ಸಂದರ್ಭದಲ್ಲಿ ತನ್ನ ವಾಹನದಿಂದ ಹೊರಬಂದ ವೇಳೆ ಕಾರ್ಯಕರ್ತನೊಬ್ಬ ಅಜಾಗರೂಕನಾಗಿ ನಡೆದುಕೊಂಡ ಹಿನ್ನೆಲೆ ಒವೈಸಿ ಕುಪಿತರಾದ ಘಟನೆ ನಡೆದಿದೆ.

ಓವೈಸಿ ಅವರ ಕಾರು ನಿಲ್ಲುತ್ತಿದ್ದಂತೆಯೇ ನೆರೆದಿದ್ದ ಬೆಂಬಲಿಗರು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮದಿಂದ ಸ್ವಾಗತ ಕೋರಿದ್ದಾರೆ. ಓವೈಸಿ ಕಾರಿನಿಂದ ಹೊರಬರುತ್ತಿದ್ದ ಸಂದರ್ಭ ಬೆಂಬಲಿಗರು ಖುಷಿಯಿಂದ ಸಂಭ್ರಮಾಚರಣೆ ಮಾಡಿದ್ದಾರೆ. ಆಗ ಒವೈಸಿ ಅವರನ್ನು ಸನ್ಮಾನಿಸಲು ಬೆಂಬಲಿಗರೊಬ್ಬರು ಶಾಲು (shawl) ಹೊದಿಸಲೆಂದು ಮುಂದೆ ಬಂದಿದ್ದು, ಅಲ್ಲದೇ ಓವೈಸಿ ಅವರ ಮುಖಕ್ಕೆ ಶಾಲು ಹಾಕಿದ್ದು, ಈ ವೇಳೆ ಕೋಪಗೊಂಡ ಓವೈಸಿ ಶಾಲನ್ನು ಎಳೆದು, ಮುಖದ ಮೇಲೆ ಶಾಲು ಹಾಕಿದ ವ್ಯಕ್ತಿಗೆ ಖಡಕ್ ಕ್ಲಾಸ್ ತೆಗೆದುಕೊಂಡು ಹಿಗ್ಗ ಮುಗ್ಗ ಬೈದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ15 ಸೆಕೆಂಡ್ ಯಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ಉಳಿದವರಿಗೆ ಉಪದೇಶ ಮಾಡುವ ಓವೈಸಿ ಈ ನಡೆ ಕಂಡು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

Leave A Reply

Your email address will not be published.