Fertility Clinic Fine: ಫರ್ಟಿಲಿಟಿ ಕ್ಲಿನಿಕ್‌ನಿಂದ ಎಡವಟ್ಟು ! ಅದಲು ಬದಲಾದ ವೀರ್ಯ, 1.5 ಕೋಟಿ ದಂಡ ನೀಡುವಂತೆ ಸೂಚನೆ

latest news jlife style Sperm changed from fertility clinic notice to pay 1.5 crores fine

Fertility Clinic Fine: ತಾಯ್ತನ ಎನ್ನುವುದು ಸುಂದರ ಅನುಭವ. ಹಾಗೆನೇ ಎಲ್ಲಾ ಹೆಣ್ಣುಮಕ್ಕಳು ಮದುವೆಯಾದ ನಂತರ ತಾಯ್ತನದ ಖುಷಿ ಅನುಭವಿಸಲು ಆಸೆ ಪಡುವುದು ಸಹಜ. ಕೆಲವರಿಗೆ ಅದು ಒಲಿದರೆ, ಕೆಲವರಿಗೆ ಇಲ್ಲ. ಹಾಗಾಗಿ ಇತ್ತೀಚೆಗೆ ಕೆಲವೊಂದು ಕೃತಕ ಫಲವತತ್ತೆಯ ಮೂಲಕ ಮಕ್ಕಳನ್ನು ಪಡೆಯುವ ತಂತ್ರಜ್ಞಾನ ಬಂದಿದೆ. ಇದೊಂದು ರೀತಿಯಲ್ಲಿ ಹೆಣ್ಮಕ್ಕಳಿಗೆ ವರದಾನ ಎಂದೇ ಹೇಳಬಹುದು.

ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಘಟನೆಯಿಂದ ಆಘಾತಕಾರಿ ವಿಷಯವೊಂದು (Fertility Clinic Fine) ತಿಳಿದು ಬಂದಿದೆ. ಅದೇನೆಂದರೆ ದಂಪತಿಗಳಿಗೆ ತಮ್ಮ ಅವಳಿ ಮಕ್ಕಳ ಜೈವಿಕ ತಂದೆ ಬೇರೊಬ್ಬ ಎಂದು ತಿಳಿದು ಬಂದಿದೆ. 14 ವರ್ಷಗಳ ನಂತರ ಈ ವಿವಾಹಿತ ದಂಪತಿಗೆ ತಾವು ಪೋಷಕರಾಗಿರುವ ಅವಳಿ ಹೆಣ್ಣುಮಕ್ಕಳ ಜೈವಿಕ ತಂದೆ ಬೇರೊಬ್ಬರು ಎಂದು ತಿಳಿದು ಬಂದಿದೆ. ಎಆರ್ ಟಿ ಮೂಲಕ ಗರ್ಭಿಣಿಯಾದ ಮಹಿಳೆ 2009ರಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಮಹಿಳೆಯು ಪಶ್ಚಿಮ ದೆಹಲಿಯ ಭಾಟಿಯಾ ಗ್ಲೋಬಲ್ ಹಾಸ್ಪಿಟಲ್ ಮತ್ತು ಎಂಡೋಸರ್ಜರಿ ಇನ್‌ಸ್ಟಿಟ್ಯೂಟ್‌ನಲ್ಲಿ ಚಿಕಿತ್ಸೆ ಪಡೆದು ಅಲ್ಲಿ ಅವರು ಎಆರ್‌ಟಿ ಮೂಲಕ ಗರ್ಭಿಣಿಯಾಗಿದ್ದರು ಎಂದು ವರದಿಯಾಗಿದೆ.

ಈಗ ರಾಷ್ಟ್ರೀಯ ವಿವಾದ ಪರಿಹಾರ ಗ್ರಾಹಕ ಆಯೋಗ (NCDRC) ಇತ್ತೀಚೆಗೆ ಈ ವಿಷಯದಲ್ಲಿ ತನ್ನ ತೀರ್ಪು ನೀಡಿದೆ. ವೈದ್ಯರ ನಿರ್ಲಕ್ಷ್ಯದಿಂದ ಉಂಟಾಗಿರುವ ನಷ್ಟಕ್ಕೆ ದಂಪತಿಗೆ 1.5 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಎನ್‌ಸಿಡಿಆರ್‌ಸಿ ಜೂನ್ 16 ರಂದು ಈ ವಿಷಯದಲ್ಲಿ ತೀರ್ಪು ನೀಡಿದೆ.

Leave A Reply

Your email address will not be published.