Salman Khan ಸಾವು ನಿಶ್ಚಿತ…: ಗ್ಯಾಂಗ್‌ ಸ್ಟರ್‌ ಗೋಲ್ಡಿ ಬ್ರರ್‌ ನಿಂದ ಮತ್ತೆ ಬೆದರಿಕೆ ಸಂದೇಶ

latest news Salman Khan again threatened by gangster Goldie brar

Salman Khan: ಗೋಲ್ಡಿ ಬ್ರರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಪಂಜಾಬಿ ಗಾಯಕ ಸಿದ್ದು ಮೂಸೆವಾಲ ಹತ್ಯೆಯ ನಂತರ ಇವರ ಹೆಸರು ಭಾರೀ ಪ್ರಚಲಿತದಲ್ಲಿದೆ. ಇತ್ತೀಚೆಗೆ ಹಲವು ಬಾರಿ ಸಲ್ಮಾನ್‌ ಖಾನ್‌ ನನ್ನು ಹತ್ಯೆ ಮಾಡಲಾಗುವುದು ಎಂದು ಗುಡುಗಿದ್ದು, ನಂತರ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಖಡಕ್‌ ಭದ್ರತೆ ನೀಡಲಾಗಿತ್ತು.

ಸ್ವಲ್ಪ ಸಮಯ ತಣ್ಣಗಿದ್ದ ಈ ಸುದ್ದಿ, ಈಗ ಮತ್ತೆ ಮುನ್ನಲೆಗೆ ಬಂದಿದೆ. ನಾವು ಹತ್ಯೆ ಮಾಡಬೇಕಾದವರ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌ ಹೆಸರಿದೆ ಎಂದು ಕೆನಡಾದಲ್ಲಿರುವ ಗ್ಯಾಂಗ್‌ ಸ್ಟರ್‌ ಗೋಲ್ಡಿ ಬ್ರರ್‌ ಮತ್ತೆ ಹೇಳಿದ್ದಾನೆ. ನಾವು ಹತ್ಯೆ ಮಾಡುವುದು ಖಂಡಿತ. ಲಾರೆನ್ಸ್‌ ಬಿಷ್ಣೋಯ್‌ ಅವರು ಕ್ಷಮೆ ಕೇಳುವುದಿಲ್ಲ ಎಂದು ಗೋಲ್ಡಿ ಬ್ರರ್‌ ಹೇಳಿದ್ದಾನೆ.

ನಾವು ಬದುಕಿರುವವರೆಗೆ ಎಲ್ಲಾ ಶತ್ರುಗಳ ವಿರುದ್ಧ ಹೋರಾಟ ಮಾಡುತ್ತಲೇ ಇರುತ್ತೇವೆ. ಆದರೆ ಈಗ ನಮ್ಮ ಟಾರ್ಗೆಟ್‌ ಸಲ್ಮಾನ್‌ ಖಾನ್‌. ಇದರಲ್ಲಿ ಸಂಶಯವಿಲ್ಲ. ನಾವು ಪಯತ್ನ ಪಡುತ್ತಲೇ ಇದ್ದೇವೆ. ನಮ್ಮ ಕಾರ್ಯ ಯಶಸ್ವಿಯಾದಾಗ ಖಂಡಿತ ತಿಳಿಸುತ್ತೇವೆ ಎಂದು ಭೂಗತ ಪಾತಕಿ ಹೇಳಿದ್ದಾನೆ. ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಸಲ್ಮಾನ್‌ ಖಾನ್‌ನನ್ನು ಇಮೇಲ್‌ ಮೂಲಕ ಬೆದರಿಕೆಯೊಡ್ಡಿದ ಕಾರಣ ಪ್ರಕರಣ ದಾಖಲು ಮಾಡಿದ್ದರು.

“ಗೋಲ್ಡಿ ಬ್ರಾರ್‌ ಸಲ್ಮಾನ್‌ ಖಾನ್‌ ಜೊತೆ ಮಾತನಾಡುವ ಆಸಕ್ತಿ ಹೊಂದಿದ್ದಾರೆ. ಬಿಷ್ಣೋಯಿ ಸಂದರ್ಶನ ನೋಡಿದ್ದರೆ ಎಲ್ಲಾ ತಿಳಿದಿರುತ್ತದೆ. ನೋಡಿಲ್ಲದಿದ್ದರೆ ನೋಡಲಿ, ಇದನ್ನು ಇಲ್ಲಿಗೇ ಮುಗಿಸಲು ಇಷ್ಟ ಪಟ್ಟರೆ ಗೋಲ್ಡಿ ಬ್ರರ್‌ ಜೊತೆ ಮಾತನಾಡಲಿ. ಮುಖಾಮುಖಿ ಭೇಟಿಗೆ ಕೂಡಾ ಸಿದ್ಧ. ಈ ಬಾರಿ ನಾವು ತಿಳಿಸಿದ್ದೇವೆ. ಮುಂದಿನ ಬಾರಿ ಖಂಡಿತ ಶಾಕ್‌ ಸುದ್ದಿ ನಿಮಗೆ ಸಿಗಬಹುದು” ಎಂದು ಪತ್ರದಲ್ಲಿ ಬರೆಯಲಾಗಿತ್ತು.

Leave A Reply

Your email address will not be published.