Death news: ಬಂದೂಕುಧಾರಿಗಳಿಂದ ಒಂದೇ ಕುಟುಂಬದ 9 ಜನರ ಹತ್ಯೆ! ಕಾರಣ ನಿಗೂಢ

latest news 9 people of the family were killed by gunmen

Death news: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬುಧವಾರ ಭಾರೀ ಮಳೆಯ ನಡುವೆಯೇ ಮಾರಣಹೋಮವೊಂದು ನಡೆದಿದೆ. ಈ ಮಳೆಯ ಸಂದರ್ಭದಲ್ಲೇ ಅಪರಿಚಿತ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಂದೂಕುಧಾರಿಗಳು ಒಂದೇ ಕುಟುಂಬದ ಒಂಬತ್ತು ಜನರನ್ನು ಹತ್ಯೆ (Death news) ಮಾಡಿದ್ದಾರೆ. ಕೃತ್ಯವೆಸಗಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್‌ ಆಗಿದ್ದಾರೆ.

ಮೃತ ಹೊಂದಿದವರಲ್ಲಿ ಮೂವರು ಮಹಿಳೆಯರು, ಮತ್ತು ಆರು ಪುರುಷರು ಇದ್ದಾರೆ. ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಆದರೆ ಈ ಘಟನೆಗೆ ಕಾರಣವೇನೆಂದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಘಟನೆ ಜಿಲ್ಲೆಯ ಬತ್ಖೇಲಾ ತಹಸಿಲ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಅಪರಿಚಿತ ಬಂದೂಕುಧಾರಿಗಳು ನೇರವಾಗಿ ಮನೆಗೆ ಪ್ರವೇಶಿಸಿ, ಮನಬಂದಂತೆ ಗುಂಡು ಹಾರಿಸಿ ಮನೆಯಲ್ಲಿದ್ದ 9 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ಎಷ್ಟು ಜನರಿದ್ದರು ಎಂದು ಇನ್ನೂ ತಿಳಿದು ಬಂದಿಲ್ಲ.

ಕಳೆದ ಎರಡು ತಿಂಗಳಲ್ಲಿ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಗುಂಡಿನ ದಾಳಿಯ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಎಪ್ರಿಲ್‌ ತಿಂಗಳಿನಲ್ಲಿ ಖುರ್ರಂ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನ ಸಾವನ್ನಪ್ಪಿದ್ದರು. ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ಶಾಲೆಗೆ ನುಗ್ಗಿ ಪರೀಕ್ಷೆಗೆ ಪೇಪರ್‌ ಸಿದ್ಧಪಡಿಸುತ್ತಿದ್ದ ಶಿಕ್ಷಕರ ಮೇಲೆ ಗುಂಡಿನ ದಾಳಿ ಮಾಡಿದ್ದರು.

Leave A Reply

Your email address will not be published.