Death news: ಶಾಲಾ ಮೆಟ್ಟಿಲು ಹತ್ತುವಾಗಲೇ ಹೃದಯಾಘಾತಕ್ಕೊಳಗಾದ ವಿದ್ಯಾರ್ಥಿನಿ ಸಾವು!

latest news death news student died of a heart attack while going to school

Death news: ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದುವವರ ಸಂಖ್ಯೆ ದಿನದಿಂದ ಹೆಚ್ಚುತ್ತಿದೆ. ಕೊರೊನಾ ಸೋಂಕು ನಂತರ ಈ ಘಟನೆ ನಡೆಯುತ್ತಲೇ ಇದೆ. ಇದಕ್ಕೇನು ಕಾರಣ ಎಂದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಈ ಹೃದಯಾಘಾತ ಮಕ್ಕಳಿಂದ ಹಿಡಿದು ವಯಸ್ಸಾದವರನ್ನು ಕೂಡಾ ಬಿಟ್ಟಿಲ್ಲ.

ಹೃದಯಾಘಾತದಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಘಟನೆ ಮಧ್ಯೆಯೇ, ಗುಜರಾತಿನ ನವಸಾರಿ ಜಿಲ್ಲೆಯಲ್ಲಿ 12ನೆಯ ತರಗತಿಯಲ್ಲಿ ಕಲಿಯುತ್ತಿದ್ದ 17ವರ್ಷದ ಬಾಲಕಿ ಶಾಲೆಗೆ ಹೋಗುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಕುಸಿದು ಬಿದ್ದ ಈ ವಿದ್ಯಾರ್ಥಿನಿಯನ್ನು ಶಾಲೆಯ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದರೂ ಆಕೆ ಪ್ರಾಣ ಕಳೆದುಕೊಂಡಿದ್ದಳು.

ಸ್ನೇಹಿತರ ಜೊತೆ ಶಾಲಾ ಮೆಟ್ಟಿಲು ಹತ್ತುತ್ತಿದ್ದಾಗ, ಉಸಿರಾಟ ಸಮಸ್ಯೆ ಉಂಟಾಗಿ ದೇಹ ಬೆವರಲಾರಂಭಿಸಿದೆ. ನಂತರ ಕೆಳಗೆ ಬಿದ್ದಿದ್ದಾಳೆ. ನೀಟ್‌ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದಳು ತನಿಶಾ.

ಆಸ್ಪತ್ರೆಗೆ ದಾಖಲು ಮಾಡಿದ ನಂತರ ವೈದ್ಯರು ವಿದ್ಯಾರ್ಥಿನಿ ಮೃತಳಾಗಿದ್ದಾಳೆ ಎಂದು ಪೋಷಕರಿಗೆ ಹೇಳಿದ್ದಾರೆ. ನಂತರ ಪೋಷಕರು ಒಪ್ಪಿಗೆಯ ಮೇರೆಗೆ ಮರಣೋತ್ತರ ಪರೀಕ್ಷೆ ಕೂಡಾ ಮಾಡಿದ್ದು, ಇದರಲ್ಲಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ದೃಢೀಕರಿಸಿದ್ದಾರೆ.

Leave A Reply

Your email address will not be published.