Krishi Bhagya Scheme: ರೈತರೇ ನಿಮಗೊಂದು ಸಿಹಿ ಸುದ್ದಿ! ಕೃಷಿ ಭಾಗ್ಯ ಯೋಜನೆಯ ಮರು ಜಾರಿಗೆ ಕಾಂಗ್ರೆಸ್‌ ಸರಕಾರ ಸಿದ್ಧತೆ

Latest newss political news Congress government is preparing to reimplement the Krishi Bhagya scheme

Krishi Bhagya Scheme: ಮಳೆಯಾಶ್ರಿತ ರೈತರ ಅನುಕೂಲಕ್ಕಾಗಿ ಕೃಷಿ ಭಾಗ್ಯ ಯೋಜನೆಯನ್ನು (Krishi Bhagya Scheme) ಮರು ಚಾಲನೆ ನೀಡಲು ಕಾಂಗ್ರೆಸ್‌ ಸರಕಾರ ಚಿಂತನೆ ನಡೆಸಲಾಗಿದೆ. ಕಾಂಗ್ರೆಸ್‌ ಸರಕಾರ ಈ ಯೋಜನೆಯನ್ನು ಮುಂದುವರಿಸಲು ರೆಡಿಯಾಗಿದ್ದಾರೆ. ಬಿಜೆಪಿ ಸರಕಾರ ತಮ್ಮ ಅಧಿಕಾರದ ಅವಧಿಯಲ್ಲಿ ಈ ಯೋಜನೆಯನ್ನು ನಿಲ್ಲಿಸಿತ್ತು. ಇದೀಗ ಈ ಯೋಜನೆಗೆ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ ಎಂದು ವರದಿಯಾಗಿದೆ.

ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ಮಳೆ ನೀರು ಪೋಲಾಗದಂತೆ ಸಂಗ್ರಹಿಸಿಡುವುದೇ ಈ ಯೋಜನೆಯ ಉದ್ದೇಶ. ಈ ಕುರಿತು ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರಸ್ತಾಪನೆ ಮಾಡಿದ್ದು, ಸಿಎಂ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

ಪಾಲಿಥಿನ್‌ ಹೊದಿಕೆ, ಡೀಸೆಲ್‌ ಪಂಪ್ಸೆಟ್‌, ಬದು ನಿರ್ಮಾಣ, ಪಶುಸಂಗೋಪನಾ ಚಟುವಟಿಕೆ, ಬೆಳೆ ಪದ್ಧತಿ, ಲಘು ನೀರಾವರಿ ಘಟಕ, ಮೊದಲಾದವುಗಳನ್ನು ಸೇರಿಸಿ ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ ಚಿಂತನೆ ನಡೆಸಲಾಗಿದೆ.

Leave A Reply

Your email address will not be published.