White Hair Tips: ಬಿಳಿ ಕೂದಲ ಸಮಸ್ಯೆಯೇ? ಚಿಂತೆ ಬಿಡಿ, ಈ ಮೂಲಿಕೆಯ ರಸದಿಂದ ನಿಮ್ಮ ಕೂದಲನ್ನು ಬುಡ ಸಮೇತ ಕಪ್ಪಗಾಗಿಸಿ!

life style Applying this herbal juice will reduce your white hairs

White Hair Tips: ಯಾರಿಗೆ ತಾನೇ ತಮ್ಮ ತಮ್ಮ ತಲೆ ಕೂದಲ ಮೇಲೆ ಪ್ರೀತಿ ಇಲ್ಲ ಹೇಳಿ? ಸ್ವಲ್ಪ ಕೂದಲು ಉದುರಿದರೂ, ಬೆಳ್ಳಗಾದರೂ ಆಕಾಶವೇ ಭೂಮಿ ಮೇಲೆ ಬಿದ್ದ ಹಾಗೇ ವರ್ತಿಸುವವರು ಹಲವರಿದ್ದಾರೆ. ಕೂದಲು ಉದುರುವುದು ಒಂದು ಸಮಸ್ಯೆಯಾದರೆ, ಕೆಲವರಿಗೆ ಕೂದಲು ಬೆಳ್ಳಗಾಗುವುದು (White Hair Tips ) ಕೂಡಾ ಒಂದು ಸಮಸ್ಯೆ. ಇದಕ್ಕಾಗಿ ಹಲವಾರು ಮಂದಿ ಹಲವು ವಿಧದ ಸುಲಭೋಪಾಯಗಳನ್ನು ಕಂಡುಕೊಂಡಿದ್ದಾರೆ. ಕೂದಲು ಹಾಳಾಗಲು, ಉದುರಲು, ಹಾನಿಗೊಳಗಾದಂತೆ ತಡೆಗಟ್ಟಲು ನಾವು ಮನೆಯಲ್ಲಿ ಒಂದು ಹರ್ಬಲ್‌ ಶಾಂಪೂ ತಯಾರಿ ಮಾಡಿಕೊಂಡರೆ ಉತ್ತಮ. ಇದನ್ನು ಹೇಗೆ ಮಾಡುವುದು? ಏನೆಲ್ಲಾ ವಸ್ತುಗಳು ಇದಕ್ಕೆ ಬೇಕು? ಬನ್ನಿ ತಿಳಿಯೋಣ.

ಬೇಕಾಗುವ ಸಾಮಾಗ್ರಿ: ಅಂಟುವಾಳ ಕಾಯಿ, ನೆಲ್ಲಿಕಾಯಿ, ಶಿಖಾಕಾಯಿ, ದಾಸವಾಳ ಎಲೆಗಳು, ತುಳಸಿ ಎಲೆಗಳು, ಅಲೋವೆರಾ ಇವಿಷ್ಟು ವಸ್ತುಗಳು ನಿಮ್ಮ ಬಳಿಯಿದ್ದರೆ ಸಾಕು.

ಹರ್ಬಲ್ ಶಾಂಪೂ ಮಾಡುವುದು ಹೇಗೆ?
ಮೊದಲು ಶಿಖಾಕಾಯಿ, ಅಂಟುವಾಳ ಕಾಯಿ ಮತ್ತು ನೆಲ್ಲಿಕಾಯಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಅವುಗಳನ್ನು ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ ಬೇಯಿಸಿ, ನಂತರ ತಣ್ಣಗಾಗಲು ಬಿಡಿ. ಇದಾದ ನಂತರ ಆ ನೀರಲ್ಲಿ ಇರುವ ಅಂಟುವಾಳಕಾಯಿಯನ್ನು ಚೆನ್ನಾಗಿ ಹಿಸುಕಿ, ಆವಾಗ ಸೋಪಿನ ಅಂಶ ಹೊರಬಿಡುತ್ತದೆ. ನಂತರ ಎಲ್ಲಾ ವಸ್ತುಗಳನ್ನು ರುಬ್ಬಿಕೊಳ್ಳಿ. ಫಿಲ್ಟರ್‌ ಮಾಡಿ ಬಾಟಲಿಯಲ್ಲಿಟ್ಟುಕೊಳ್ಳಿ. ನಿಮಗಾಗಿ ನಿಮ್ಮ ದಪ್ಪ ಕೂದಲಿನ ರಕ್ಷಣೆಗಾಗಿ ಶಾಂಪೂ ರೆಡಿ.

Leave A Reply

Your email address will not be published.