Solar Storm: 2023ರ ಅಂತ್ಯದ ವೇಳೆಗೆ, ಸೂರ್ಯನ ತೀವ್ರತೆ ಹೆಚ್ಚು! ವಿಜ್ಞಾನಿಗಳಿಂದ ಅಪಾಯದ ಎಚ್ಚರಿಕೆ

Latest news intresting news By the end of 2023 the sun intensity will be high

Solar Storm: ಈ ಬಾರಿ ಸೂರ್ಯನ ಕಿರಣಗಳು ನಿಧಾನವಾಗಿ ತನ್ನ ಪ್ರಕೋಪವನ್ನು ತೋರಿಸುತ್ತದೆ ಎಂದು ತಜ್ಞರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. 2023 ರ ಅಂತ್ಯದ ವೇಳೆ ಸೂರ್ಯನ ಪ್ರಖರತೆ ಹೆಚ್ಚಾಗಬಹುದು. ಇದು ಅಪಾಯದ ಮಟ್ಟವನ್ನು ಹೆಚ್ಚಿಸಲಾಗಿದೆ. ಆದರೆ ಸೂರ್ಯನ ಪ್ರಖರತೆ ಸಮಯದ ಮುಂಚಿತವಾಗಿ ಗೋಚರಿಸಲು ಶುರುವಾಗಿದೆ ಎನ್ನಲಾಗಿದೆ. ಈ ಸೋಲಾರ್‌ ಚಂಡಮಾರತವು (Solar Storm) ಭೂಮಿಯ ಮೇಲಿನ ಜೀವಿಗಳಿಗೆ ತುಂಬಾ ಅಪಾಯಕಾರಿ, ಸೂರ್ಯನ ತಾಪಮಾನವು ಗರಿಷ್ಠ ಮಟ್ಟವನ್ನು ತಲುಪಲಿದೆ ಎಂಬ ಆತಂಕದ ವಿಷಯವನ್ನು ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ಸೌರ ಚಂಡಮಾರುತವು ಶೀಘ್ರದಲ್ಲೇ ಬರಬಹುದು ಎಂದು ಕೆಲವು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಈ ಸೌರ ಚಂಡಮಾರುತ ಏಕೆ ಉಂಟಾಗುತ್ತದೆ?
ಮಾಹಿತಿಯ ಪ್ರಕಾರ, ಸೌರವ್ಯೂಹದಲ್ಲಿ 11ವರ್ಷಗಳ ನಂತರ ಈ ಪರಿಸ್ಥಿತಿ ಬರುತ್ತದೆ ಎಂದು ಹೇಳಲಾಗಿದೆ. ಸೂರ್ಯನ ಕಾಂತಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯಾಗುತ್ತದೆ. ಉತ್ತರ ಧ್ರುವ ದಕ್ಷಿಣ ಧ್ರುವವಾಗಿ ಪರಿವರ್ತಿಸುತ್ತದೆ. ಈ ಹಿಮ್ಮುಖದ ಕಾರಣದಿಂದಾಗಿ, ಬೆಳಕು ತೀಕ್ಷ್ಮವಾಗುತ್ತದೆ. ಹಾಗಾಗಿ ಬೆಳಕು ಬೆಂಕಿಯಂತೆ ಶಾಖ ಹೊರಸೂಸುತ್ತದೆ.

ಇದರಿಂದ ನಷ್ಟ ಏನು? ಸೌರವ್ಯೂಹದ ಈ ಪರಿಸ್ಥಿತಿಗಳು ಭೂಮಿಗೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಸೌರ ಚಂಡಮಾರುತದಿಂದ ಸಂವಹನ ಮಾಧ್ಯಮದ ಮೇಲೆ ಪರಿಣಾಮ ಬೀರುವ ಅಪಾಯವಿದೆ. ವಿದ್ಯುತ್ ಮೂಲಸೌಕರ್ಯವೂ ಹಾನಿಗೊಳಗಾಗಬಹುದು. ಇದು ಗಗನಯಾತ್ರಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಪ್ರಸ್ತುತ ಸೌರ ಚಕ್ರವು 2025 ರಲ್ಲಿ ಉತ್ತುಂಗಕ್ಕೇರಲಿದೆ ಎಂದು ವಿಜ್ಞಾನಿಗಳು ಊಹಿಸಿದ್ದರು, ಆದರೆ, ಸೌರ ಘಟನೆಗಳು ಅಂದಾಜನ್ನು ಬದಲಾಯಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಅಪಾಯವನ್ನು ಕಾಣಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

Leave A Reply

Your email address will not be published.