Hassan: ಪುಂಡರ ಬೈಕ್‌ ವ್ಹೀಲಿಂಗ್‌ಗೆ ಭೀಕರ ಅಪಘಾತ! ಆಸ್ಪತ್ರೆಯಲ್ಲಿ ಇಬ್ಬರು ಯುವತಿಯರ ಜೀವನ್ಮರಣ ಹೋರಾಟ!

Karnataka accident news a terrible accident due to the whim of bike wheeling thugs in Hassan two young women serious

Hassan: ಇತ್ತೀಚಿನ ಯುವಜನತೆ ಬೈಕ್‌ ವ್ಹೀಲಿಂಗ್‌ ಮಾಡುವುದರಲ್ಲಿ ಅತಿರೇಕದ ವರ್ತನೆ ತೋರಿಸುತ್ತಾರೆ ಎಂದರೆ ತಪ್ಪಿಲ್ಲ. ಪೊಲೀಸರ ಎಚ್ಚರಿಕೆಯ ನಡುವೆಯೂ ಇಂತಹ ಅನೇಕ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಇದರಿಂದ ಸಾರ್ವಜನಿಕರಿಗೂ ತೊಂದರೆ ಉಂಟಾಗಿ ಕಿರಿಕಿರಿ ಅನುಭವಿಸಿದರೂ, ಪುಂಡರ ಈ ವರ್ತನೆ ಕಮ್ಮಿಯಾಗುತ್ತಿಲ್ಲ. ಈಗ ಹಾಸನದಲ್ಲಿ ಪುಂಡರಿಬ್ಬರ ಬೈಕ್‌ ವ್ಹೀಲಿಂಗ್‌ ಹುಚ್ಚಾಟಕ್ಕೆ ಯುವತಿಯರಿಬ್ಬರು ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಬಂದಿದೆ.

ಹಾಸನ(Hassan) ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರ ಬಳಿ ವೀಲ್ಹಿಂಗ್‌ ಮಾಡುತ್ತ ಬಂದ ಪುಂಡರಿಂದ ಅಪಘಾತವುಂಟಾಗಿದೆ. ಈ ಅಪಘಾತದಲ್ಲಿ ಭೂಮಿಕಾ, ಸಿಂಚನ ಎಂಬ ಇಬ್ಬರು ಯುವತಿಯರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿದೆ. ಫುಡ್‌ಕೋರ್ಟ್‌ನಲ್ಲಿ ಊಟ ಮುಗಿಸಿ ಭೂಮಿಕಾ ಹಾಗೂ ಸಿಂಚನ ಬೈಕ್‌ ಮೂಲಕ ಹೋಗುತ್ತಿದ್ದರು. ಜನನಿಬಿಡ ಪ್ರದೇಶದಲ್ಲಿ ವ್ಹೀಲಿಂಗ್‌ ಮಾಡಿಕೊಂಡು ಬಂದ ಪುಂಡರು ಯುವತಿಯರಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ಭೂಮಿಕಾಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇಬ್ಬರನ್ನೂ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯುವತಿಯರಿಬ್ಬರು ಸಾವು ಬದುಕಿನ ನಡುವೆ ಈ ಹೋರಾಟ ಮಾಡುತ್ತಿದ್ದಾರೆ.

ಅಪಘಾತಗೊಂಡಾಗ ಸ್ಥಳದಲ್ಲೇ ಇದ್ದ ಸ್ಥಳೀಯರು ಶಾಕೀರ್‌, ಹಾಗೂ ಮತ್ತೋರ್ವ ಅಪ್ರಾಪ್ತನಿಗೆ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:  Karnataka Rains: ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ವರುಣಾರ್ಭಟ ಮುಂದುವರಿಕೆ! ಆರೆಂಜ್‌ ಅಲರ್ಟ್‌ ಘೋಷಣೆ

Leave A Reply

Your email address will not be published.